ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಪೇನ್‌ ತಂಡದ ಫಿಫಾ ವಿಶ್ವಕಪ್‌ ಜಯದ ಸಂಭ್ರಮಾಚರಣೆ ವೇಳೆ 13ರ ವಯಸ್ಸಿನ ಬಾಲಕ ಸಾವು!

ಸ್ಪೇನ್‌ ಫುಟ್ಬಾಲ್‌ ತಂಡದ ಫಿಫಾ ವಿಶ್ವಕಪ್ ವಿಜಯೋತ್ಸವದ ಸಂಭ್ರಮ ದುರಂತಕ್ಕೆ ತಿರುಗಿದ್ದು, ಸಿಯುಡಾಡ್ ರೊಡ್ರಿಗೊದಲ್ಲಿ ಕಾರಂಜಿಯೊಂದು ಕುಸಿದು ಬಿದ್ದ ಪರಿಣಾಮ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಸ್ಪೇನ್‌ನ ವಿಶ್ವಕಪ್‌ ಜಯದ ಸಂಭ್ರಮಾಚರಣೆ ವೇಳೆ ಬಾಲಕ ಸಾವು!

ಸ್ಪೇನ್‌ ವಿಶ್ವಕಪ್‌ ಸಂಭ್ರಮಾಚರಣೆಯಲ್ಲಿ ದುರಂತ. -

Profile
Ramesh Kote Jul 20, 2026 3:42 PM

ನವದೆಹಲಿ: ಸ್ಪೇನ್‌ (Spain) ಫುಟ್ಬಾಲ್‌ ತಂಡದ ಫಿಫಾ ವಿಶ್ವಕಪ್ ವಿಜಯೋತ್ಸವದ ಸಂಭ್ರಮ ದುರಂತಕ್ಕೆ ತಿರುಗಿದ್ದು, ಸಿಯುಡಾಡ್ ರೊಡ್ರಿಗೊದಲ್ಲಿ ಕಾರಂಜಿಯೊಂದು ಕುಸಿದು ಬಿದ್ದ ಪರಿಣಾಮ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸ್ಪೇನ್ ವಿಶ್ವಕಪ್ (FIFA World Cup 2026) ಗೆಲುವಿನ ಸಂಭ್ರಮಾಚರಣೆಯ ವೇಳೆ ಸಾವಿರಾರು ಅಭಿಮಾನಿಗಳು ಸೇರಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಕಾರಂಜಿ ಏಕಾಏಕಿ ಕುಸಿದು ಬಿದ್ದ ಪರಿಣಾಮ ಹಲವು ಮಂದಿ ಅದರಡಿ ಸಿಲುಕಿದ್ದು, 13 ವರ್ಷದ ಬಾಲಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ವರದಿಗಳು ತಿಳಿಸಿವೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಸಂಭ್ರಮದ ವಾತಾವರಣದಲ್ಲಿದ್ದ ಕ್ಷಣಗಳು ಕೆಲವೇ ಕ್ಷಣಗಳಲ್ಲಿ ಶೋಕಕ್ಕೆ ತಿರುಗಿದ್ದು, ಈ ಘಟನೆ ಸ್ಪೇನ್‌ನಾದ್ಯಂತ ತೀವ್ರ ದುಃಖಕ್ಕೆ ಕಾರಣವಾಗಿದೆ. ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದು, ಕಾರಂಜಿ ಕುಸಿತಕ್ಕೆ ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

"ಸ್ಪೇನ್ ರಾಷ್ಟ್ರೀಯ ಫುಟ್‌ಬಾಲ್ ತಂಡದ ವಿಶ್ವಕಪ್ ವಿಜಯೋತ್ಸವವಾಗಿ ಇರಬೇಕಿದ್ದ ಸಂಭ್ರಮ, ಇದೀಗ ಸಿಯುಡಾಡ್ ರೊಡ್ರಿಗೊ ಸಮುದಾಯಕ್ಕೆ ದೊಡ್ಡ ದುರಂತವಾಗಿ ಪರಿಣಮಿಸಿದೆ," ಎಂದು ಸ್ಥಳೀಯ ನಗರಾಡಳಿತ ಹೇಳಿಕೆಯಲ್ಲಿ ತಿಳಿಸಿದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಆಡಳಿತ ಹಾರೈಸಿದೆ.

ARG vs SPA: ಲಿಯೊನೆಲ್‌ ಮೆಸ್ಸಿ ಕನಸು ಭಗ್ನ, ಎರಡನೇ ಫಿಫಾ ವಿಶ್ವಕಪ್‌ ಮುಡಿಗೇರಿಸಿಕೊಂಡ ಸ್ಪೇನ್!

"ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಬಾಲಕನಿಗೆ ಗೌರವ ಸೂಚಿಸುವ ಹಾಗೂ ಶೋಕಾಚರಣೆಯ ಅಂಗವಾಗಿ, ಜುಲೈ 20ರಿಂದ 22ರವರೆಗೆ ನಗರಸಭೆ ಕಟ್ಟಡದ ಧ್ವಜಗಳನ್ನು ಅರ್ಧಕ್ಕೆ ಇಳಿಸಿ ಹಾರಿಸಲಾಗುವುದು," ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಪೇನ್‌ಗೆ ಐತಿಹಾಸಿಕ ರಾತ್ರಿ

ಸ್ಪೇನ್ ಕೊನೆಯ ಬಾರಿ 2010ರಲ್ಲಿ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು. ಇದೀಗ 16 ವರ್ಷಗಳ ಬಳಿಕ 2026ರ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸ್ಪೇನ್ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಟೂರ್ನಿಯುದ್ದಕ್ಕೂ ಸ್ಪೇನ್‌ನ ರಕ್ಷಣಾ ವಿಭಾಗ ಅತ್ಯಂತ ಪರಿಣಾಮಕಾರಿಯಾಗಿ ಆಡಿತು. ಬೆಲ್ಜಿಯಂ ವಿರುದ್ಧ ಕೇವಲ ಒಂದು ಗೋಲು ಬಿಟ್ಟುಕೊಟ್ಟ ಸ್ಪೇನ್, ಉಳಿದ ಎಲ್ಲಾ ಪಂದ್ಯಗಳಲ್ಲಿ ಎದುರಾಳಿಗಳಿಗೆ ಅವಕಾಶ ನೀಡದೆ ತನ್ನ ಪ್ರಾಬಲ್ಯ ಮೆರೆದಿತ್ತು. ಈ ಅತ್ಯುತ್ತಮ ಪ್ರದರ್ಶನದೊಂದಿಗೆ ಸ್ಪೇನ್ ಎರಡನೇ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಲು ಅರ್ಹತೆಯನ್ನು ಪಡೆದುಕೊಂಡಿದೆ.



ಈ ಐತಿಹಾಸಿಕ ಗೆಲುವಿನ ಬಳಿಕ ದೇಶಾದ್ಯಂತ ಸಂಭ್ರಮಾಚರಣೆಗಳು ಜೋರಾಗಿ ನಡೆದವು. ಆದರೆ ಸಿಯುಡಾಡ್ ರೊಡ್ರಿಗೊದಲ್ಲಿ ವಿಜಯೋತ್ಸವದ ವೇಳೆ ಸಂಭವಿಸಿದ ದುರಂತ ಈ ಸಂಭ್ರಮವನ್ನು ಶೋಕವಾಗಿ ಪರಿವರ್ತಿಸಿತು. ವಿಶ್ವಕಪ್ ಗೆಲುವಿನ ಸಂತಸದಲ್ಲಿದ್ದ ಅಭಿಮಾನಿಗಳ ಹರ್ಷೋದ್ಗಾರ ಕ್ಷಣಾರ್ಧದಲ್ಲಿ ದುಃಖದ ಕಣ್ಣೀರಿಗೆ ತಿರುಗಿದವು.

ನಾವು ಸಂಭ್ರಮದ ಉತ್ತುಂಗದಲ್ಲಿದ್ದೇವೆ’ – ಸ್ಪೇನ್ ನಾಯಕ ರೊಡ್ರಿ

2026ರ ಫಿಫಾ ವಿಶ್ವಕಪ್ ಪ್ರಶಸ್ತಿ ಗೆದ್ದ ಬಳಿಕ ಸ್ಪೇನ್ ನಾಯಕ ರೊಡ್ರಿ ಸಂತಸ ವ್ಯಕ್ತಪಡಿಸಿದರು. ಈ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಕಠಿಣ ಟೂರ್ನಿಯಾಗಿದ್ದು, ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ವಿಶ್ವದ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ನೇತೃತ್ವದ ಬಲಿಷ್ಠ ಅರ್ಜೆಂಟೀನಾವನ್ನು ಮಣಿಸಿರುವುದು ವಿಶೇಷ ಸಾಧನೆ ಎಂದು ಹೇಳಿದರು.

106ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸ್ಪೇನ್‌ಗೆ ಫಿಫಾ ವಿಶ್ವಕಪ್‌ ಗೆದ್ದುಕೊಟ್ಟ ಫೆರಾನ್‌ ಟೊರೆಸ್‌ ಯಾರು?

"ನಾವು ಸಂಭ್ರಮದ ಉತ್ತುಂಗದಲ್ಲಿದ್ದೇವೆ. ಈ ತಂಡ ನಿಜಕ್ಕೂ ಅದ್ಭುತವಾಗಿದೆ. ನಾವು ಎರಡು ಬಾರಿ ವಿಶ್ವಕಪ್ ಚಾಂಪಿಯನ್‌ಗಳಾಗಿದ್ದೇವೆ. ಇದು ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಕಠಿಣ ಟೂರ್ನಿಯಾಗಿತ್ತು. ಇತಿಹಾಸದ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ಇದ್ದ ಬಲಿಷ್ಠ ಅರ್ಜೆಂಟೀನಾ ತಂಡವನ್ನು ನಾವು ಸೋಲಿಸಿದ್ದೇವೆ," ಎಂದು ರೊಡ್ರಿ ಹೇಳಿದ್ದಾರೆ.