ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾಲ್ಕನೇ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಸೋತು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಅರ್ಜೆಂಟೀನಾ!

2026ರ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸ್ಪೇನ್ ವಿರುದ್ಧ 0-1 ಅಂತರದ ಸೋಲು ಅನುಭವಿಸುವ ಮೂಲಕ ಅರ್ಜೆಂಟೀನಾದ ಸತತ ಎರಡನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು. ಹೆಚ್ಚುವರಿ ಸಮಯ 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಬಾರಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಸ್ಪೇನ್ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಈ ಸೋಲಿನೊಂದಿಗೆ ಅರ್ಜೆಂಟೀನಾ ನಾಲ್ಕನೇ ಭಾರಿ ವಿಶ್ವಕಪ್ ಫೈನಲ್‌ನಲ್ಲಿ ಸೋಲು ಅನುಭವಿಸಿದಂತಾಯಿತು.

ಸ್ಪೇನ್‌ ವಿರುದ್ಧ ಸೋತು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಅರ್ಜೆಂಟೀನಾ!

ನಾಲ್ಕನೇ ಫೈನಲ್‌ ಸೋತು ಅನಗತ್ಯ ದಾಖಲೆ ಮುರಿದ ಅರ್ಜೆಂಟೀನಾ. -

Profile
Ramesh Kote Jul 20, 2026 4:36 PM

ನ್ಯೂಯಾರ್ಕ್: ನ್ಯೂಜೆರ್ಸಿಯ ಕ್ರೀಡಾಂಗಣದಲ್ಲಿ ಜುಲೈ 19ರಂದು ನಡೆದಿದ್ದ 2026ರ ಫಿಫಾ ವಿಶ್ವಕಪ್ (FIFA World Cup 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಸ್ಪೇನ್ ವಿರುದ್ಧ 0-1 ಅಂತರದ ಸೋಲು ಅನುಭವಿಸಿದ ಅರ್ಜೆಂಟೀನಾ (Argentina) ತಂಡದ ಸತತ ಎರಡನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು. ಪಂದ್ಯದ ಹೆಚ್ಚುವರಿ ಸಮಯದ 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಬಾರಿಸಿದ ಏಕೈಕ ಗೋಲು ಅರ್ಜೆಂಟೀನಾದ ವಿಶ್ವಕಪ್ ಪ್ರಶಸ್ತಿ ಉಳಿಸಿಕೊಳ್ಳುವ ಆಸೆ ಕೊನೆಯಾಯಿತು.

ಈ ಸೋಲಿನೊಂದಿಗೆ ಅರ್ಜೆಂಟೀನಾ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ನಾಲ್ಕನೇ ಬಾರಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಹಿಂದೆ 1930, 1990 ಮತ್ತು 2014ರ ವಿಶ್ವಕಪ್‌ಗಳ ಫೈನಲ್‌ ಪಂದ್ಯಗಳಲ್ಲಿಯೂ ಅರ್ಜೆಂಟೀನಾ ಸೋಲು ಕಂಡಿತ್ತು. ಇದೀಗ ಅರ್ಜೆಂಟೀನಾ ಮತ್ತು ಜರ್ಮನಿ ವಿಶ್ವಕಪ್ ಫೈನಲ್‌ನಲ್ಲಿ ತಲಾ ನಾಲ್ಕು ಬಾರಿ ಸೋತಿರುವ ತಂಡಗಳ ಪಟ್ಟಿಯಲ್ಲಿ ಸೇರಿವೆ. ಜರ್ಮನಿ 1966, 1982, 1986 ಮತ್ತು 2002ರ ವಿಶ್ವಕಪ್‌ ಟೂರ್ನಿಗಳಲ್ಲಿ ರನ್ನರ್-ಅಪ್ ಆಗಿತ್ತು.

ಫೈನಲ್‌ ಸೋಲಿನ ಆಘಾತದಿಂದ ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮೆಸ್ಸಿ

ಅತಿ ಹೆಚ್ಚು ಬಾರಿ ಫಿಫಾ ವಿಶ್ವಕಪ್‌ ಫೈನಲ್‌ ಸೋತ ತಂಡಗಳು

ಜರ್ಮನಿ: 4 (1966, 1982, 1986, 2002)

ಅರ್ಜೆಂಟೀನಾ: 4 (1930, 1990, 2014, 2026)

ನೆದರ್ಲೆಂಡ್ಸ್: 3 (1974, 1978, 2010)

ಅರ್ಜೆಂಟೀನಾದ ವಿಶ್ವಕಪ್ ಫೈನಲ್ ಸೋಲುಗಳ ಇತಿಹಾಸ

ಅರ್ಜೆಂಟೀನಾ ತನ್ನ ಮೊದಲ ಫಿಫಾ ವಿಶ್ವಕಪ್ ಫೈನಲ್ ಸೋಲನ್ನು 1930ರಲ್ಲಿ ಉರುಗ್ವೆಯ ಮಾಂಟೆವಿಡಿಯೊದ ಎಸ್ಟಾಡಿಯೊ ಸೆಂಟೆನಾರಿಯೊ ಕ್ರೀಡಾಂಗಣದಲ್ಲಿ ಅನುಭವಿಸಿತು. ಆತಿಥೇಯ ಉರುಗ್ವೆ ವಿರುದ್ಧ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ 2-4 ಗೋಲುಗಳ ಅಂತರದಲ್ಲಿ ಸೋತಿತ್ತು.

ಇದಾದ ಬಳಿಕ 1990ರ ಫಿಫಆ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಡಿಯಾಗೋ ಮರಡೋನಾ ನೇತೃತ್ವದ ಅರ್ಜೆಂಟೀನಾ ಇಟಲಿಯ ಸ್ಟಾಡಿಯೊ ಒಲಿಂಪಿಕೊದಲ್ಲಿ ವೆಸ್ಟ್‌ ಜರ್ಮನಿ ವಿರುದ್ಧ 0-1 ಅಂತರದಲ್ಲಿ ಸೋಲು ಕಂಡಿತು.

ಮೆಸ್ಸಿಗೆ ತಪ್ಪಿದ ಗೋಲ್ಡನ್‌ ಶೂ; 2026ರ ಫಿಫಾ ವಿಶ್ವಕಪ್‌ ಟೂರ್ನಿಯ ಪ್ರಶಸ್ತಿ ವಿಜೇತರ ವಿವರ!

ಇನ್ನು 2014ರ ವಿಶ್ವಕಪ್ ಫೈನಲ್‌ನಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದ ಮರಕಾನಾ ಕ್ರೀಡಾಂಗಣದಲ್ಲಿ ಜರ್ಮನಿ ಮತ್ತೊಮ್ಮೆ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಮಣಿಸಿ ಪ್ರಶಸ್ತಿಯನ್ನು ಗೆದ್ದಿತ್ತು. ಇದೀಗ 2026ರಲ್ಲಿ ಸ್ಪೇನ್ ವಿರುದ್ಧದ ಸೋಲಿನೊಂದಿಗೆ, ಅರ್ಜೆಂಟೀನಾ ವಿಶ್ವಕಪ್ ಫೈನಲ್‌ನಲ್ಲಿ ನಾಲ್ಕನೇ ಬಾರಿ ರನ್ನರ್-ಅಪ್ ಆಗಿ ನಿರಾಸೆ ಅನುಭವಿಸಿದೆ.

ಭಾನುವಾರ ಸ್ಪೇನ್ ವಿರುದ್ಧ ಗೆದ್ದಿದ್ದರೆ ಅರ್ಜೆಂಟೀನಾ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಉಳಿಸಿಕೊಂಡ ಮೂರನೇ ತಂಡ ಎಂಬ ಐತಿಹಾಸಿಕ ಸಾಧನೆ ಮಾಡುತ್ತಿತ್ತು. ಈ ಸಾಧನೆಯನ್ನು ಇದುವರೆಗೆ ಕೇವಲ ಎರಡು ತಂಡಗಳು ಮಾತ್ರ ಮಾಡಿವೆ. ಇಟಲಿ 1934 ಮತ್ತು 1938ರಲ್ಲಿ ಸತತವಾಗಿ ವಿಶ್ವಕಪ್ ಗೆದ್ದ ಮೊದಲ ತಂಡವಾಗಿದ್ದರೆ, ಬ್ರೆಜಿಲ್ 1958 ಮತ್ತು 1962ರಲ್ಲಿ ಪ್ರಶಸ್ತಿ ಉಳಿಸಿಕೊಂಡು ಎರಡನೇ ತಂಡವಾಗಿ ದಾಖಲೆ ಬರೆದಿತ್ತು.

ಅಜೇಯವಾಗಿದ್ದ ಅರ್ಜೆಂಟೀನಾದ ಫೈನಲ್‌ ಸೋಲಿಗೆ ಕಾರಣವೇನು?

1962ರಲ್ಲಿ ಬ್ರೆಜಿಲ್ ಈ ಸಾಧನೆ ಮಾಡಿದ ಬಳಿಕ, ವಿಶ್ವಕಪ್‌ ಟೂರ್ನಿಯಲ್ಲಿ ಯಾವುದೇ ತಂಡವೂ ಸತತ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ಸ್ಪೇನ್ ವಿರುದ್ಧದ ಫೈನಲ್ ಸೋಲಿನೊಂದಿಗೆ ಅರ್ಜೆಂಟೀನಾದ ಆ ಐತಿಹಾಸಿಕ ಕನಸೂ ಭಗ್ನವಾಯಿತು.