ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

China Masters: ಜಾಕೋಬ್ಸನ್‌ ವಿರುದ್ಧ ಪಿವಿ ಸಿಂಧೂಗೆ ಜಯ, ಕನ್ನಡಿಗ ಆಯುಷ್‌ ಶೆಟ್ಟಿಗೆ ನಿರಾಶೆ!

ಪ್ರಸ್ತುತ ನಡೆಯುತ್ತಿರುವ ಚೀನಾ ಮಾಸ್ಟರ್ಸ್‌ ಸೂಪರ್‌ 750 ಟೂರ್ನಿಯಲ್ಲಿ ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧೂ ಶುಭಾರಂಭ ಕಂಡಿದ್ದಾರೆ. ಅವರು ಡೆನ್ಮಾರ್ಕ್‌ ತಂಡದ ಜೂಲಿಯಾ ದಾವಲ್‌ ಜಾಕೋಬ್ಸನ್‌ ವಿರುದ್ಧ ನೇರ ಗೇಮ್‌ಗಳನ್ನು ಗೆದ್ದು ಮುಂದಿನ ಸುತ್ತಿಗೆ ಪ್ರವೇಶ ಮಾಡಿದ್ದಾರೆ.

ಚೀನಾ ಮಾಸ್ಟರ್ಸ್‌ನಲ್ಲಿ ಪಿವಿ ಸಿಂಧೂ ಶುಭಾರಂಭ, ಕನ್ನಡಿಗನಿಗೆ ನಿರಾಶೆ!

ಚೀನಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಪಿವಿ ಸಿಂಧೂ ಶುಭಾರಂಭ. -

Profile
Ramesh Kote Sep 16, 2025 10:00 PM

ನವದೆಹಲಿ: ಕಳೆದ ಟೂರ್ನಿಗಳಲ್ಲಿ ನಿರಾಶೆ ಮೂಡಿಸಿದ್ದ ಭಾರತದ ಒಲಿಂಪಿಕ್ಸ್‌ ಪದಕ ವಿಜೇತ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧೂ (PV Sindhu) ಅವರು ಬುಧವಾರ ಆರಂಭವಾದ ಚೀನಾ ಮಾಸ್ಟರ್ಸ್‌ ಸೂಪರ್‌ 750 (China Masters Super 750) ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದಾರೆ. ಅವರು ಮಹಿಳೆಯ ಸಿಂಗಲ್ಸ್‌ನ 32ನೇ ಸುತ್ತಿನಲ್ಲಿ ಡೆನ್ಮಾರ್ಕ್‌ನ ಜೂಲಿಯಾ ದಾವಲ್‌ ಜಾಕೋಬ್ಸನ್‌ (Julie Dawall Jakobsen) ವಿರುದ್ದ ನೇರ ಗೇಮ್‌ಗಳನ್ನು ಗೆದ್ದು ಅದ್ಭುತ ಫಾರ್ಮ್‌ಗೆ ಮರಳುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಮಾಡಿದ್ದಾರೆ.

ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿವಿ ಸಿಂಧೂ ಅವರು, ಕಳೆದ ಹಾಂಕಾಂಗ್‌ ಓಪನ್‌ ಸೂಪರ್‌ 500 ಟೂರ್ನಿಯ ಮೊದಲನೇ ಸುತ್ತಿನ ಬಳಿಕ ಹೊರಗಡೆ ಬಂದಿದ್ದರು. ಈ ಟೂರ್ನಿಯಲ್ಲಿ ಲೀನ್‌ ಕ್ರಿಸ್ಟೋಫರ್ಸನ್‌ ಹಾಗೂ ಮತ್ತೊಬ್ಬ ಆಟಗಾರ್ತಿ ಡ್ಯಾನಿಶ್‌ ಶಟ್ಲರ್‌ ಎದುರು ಸೋಲು ಅನುಭವಿಸಿದ್ದರು. ಆದರೆ, ಚೀನಾ ಮಾಸ್ಟರ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಜಾಕೋಬ್ಸನ್‌ ವಿರುದ್ಧ ಕೇವಲ 27 ನಿಮಿಷಗಳ ಪಂದ್ಯದಲ್ಲಿ 21-4, 21-10 ನೇರ ಗೇಮ್‌ಗಳಲ್ಲಿ ಗೆಲುವು ಪಡೆದರು.

ವಿಶ್ವ ಚಾಂಪಿಯನ್‌ಶಿಪ್‌: 4 ವರ್ಷದ ಬಳಿಕ ಪ್ರಿ-ಕ್ವಾರ್ಟರ್ ಫೈನಲ್‌ಗೇರಿದ ಪಿವಿ ಸಿಂಧು

ಮೊದಲನೇ ಗೇಮ್‌ನಲ್ಲಿ ಅದ್ಭುತ ಪ್ರದರ್ಶನವನ್ನು ತೋರಿದ್ದ ಭಾರತೀಯ ಆಟಗಾರ್ತಿ, ಕೇವಲ 10 ನಿಮಿಷಗಳಲ್ಲಿ ಗೆಲುವು ದಾಖಲಿಸಿದ್ದರು. ನಂತರ ಎರಡನೇ ಗೇಮ್‌ನಲ್ಲಿ ಅದೇ ಲಯವನ್ನು ಮುಂದುವರಿಸಿದ ಸಿಂಧೂ, ಆರಂಭದಲ್ಲಿ ಮೂರು ಅಂಕಗಳ ಹಿನ್ನಡೆಯನ್ನು ಅನುಭವಿಸಿದ್ದರು. ಆದರೂ ತಡವಾಗಿ ಕಮ್‌ಬ್ಯಾಕ್‌ ಮಾಡಿದ ಸಿಂಧೂ 17 ನಿಮಿಷಗಳ ಕಠಿಣ ಹೋರಾಟದಲ್ಲಿ ಡ್ಯಾನಿಶ್‌ ಆಟಗಾರ್ತಿಯನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದರು.

ಮೊದಲನೇ ಸುತ್ತಿನಲ್ಲಿಯೇ ಸೋಲುಂಡ ಆಯುಷ್‌ ಶೆಟ್ಟಿ

ಇನ್ನು ಮೂರನೇ ಅಂಗಣದಲ್ಲಿ ನಡೆದಿದ್ದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಆಯುಷ್‌ ಶೆಟ್ಟಿ ಸೋಲು ಅನುಭವಿಸಿದರು. 68 ನಿಮಿಷಗಳ ಕಾಳಗದಲ್ಲಿ ಚೈನೀಸ್‌ ತೈಪೆ ಆಟಗಾರ ಚೌ ತೀನ್‌ ಚೆನ್‌ ವಿರುದ್ಧ 19-21, 21-12, 16-21 ಆಯುಷ್‌ ಸೋಲು ಒಪ್ಪಿಕೊಂಡರು. ಮೊದಲನೇ ಗೇಮ್‌ನಲ್ಲಿ ಕಠಿಣ ಹೋರಾಟವನ್ನು ನಡೆಸಿದ್ದ ಆಯುಷ್‌, ಎರಡು ಅಂಕಗಳ ಅಂತರದಲ್ಲಿ ಸೋಲು ಒಪ್ಪಿಕೊಂಡಿದ್ದರು.



ನಂತರ ಎರಡನೇ ಗೇಮ್‌ನಲ್ಲಿ ಎಚ್ಚೆತ್ತುಕೊಂಡ ಭಾರತದ ಆಟಗಾರ, 21-12 ಭಾರಿ ಅಂತರದಲ್ಲಿ ಆರನೇ ಶ್ರೇಯಾಂಕದ ಚೈನೀಸ್‌ ತೈಪೆ ಆಟಗಾರನನ್ನು ಸೋಲಿಸಿ ಬಲಿವಾಗಿ ಕಮ್‌ಬ್ಯಾಕ್‌ ಮಾಡಿದ್ದರು. ಆ ಮೂಲಕ ಮೂರನೇ ಹಾಗೂ ಅಂತಿಮ ಗೇಮ್‌ನಲ್ಲಿಯೂ ಗೆಲ್ಲುವ ಭರವಸೆಯನ್ನು ಮೂಡಿಸಿದ್ದರು. ಅದರಂತೆ ಆರಂಭದಲ್ಲಿ ಅತ್ಯುತ್ತಮ ಹೋರಾಟ ನಡೆಸಿದ್ದ ಆಯುಷ್‌, ಕೊನೆಯ ಹಂತದಲ್ಲಿ ಎದುರಾಳಿ ಆಟಗಾರನ ಎದುರು ಎಡವಿದರು. ಅಂತಿಮವಾಗಿ ಮೂರನೇ ಗೇಮ್‌ ಅನ್ನು ಕೇವಲ 5 ಅಂಕಗಳ ಅಂತರದಲ್ಲಿ ಸೋಲು ಅನುಭವಿಸಿದರು.

ಕಳೆದ ಹಾಂಕಾಂಗ್‌ ಓಪನ್‌ ಟೂರ್ನಿಯಲ್ಲಿ ಆಯುಷ್‌ ಶೆಟ್ಟಿ ಪುರುಷರ ಸಿಂಗಲ್ಸ್‌ನಲ್ಲಿ ಗಮನವನ್ನು ಸೆಳೆದಿದ್ದರು. ಅವರು ಕ್ವಾರ್ಟರ್‌ಫೈನಲ್‌ವರೆಗೂ ಆಡಿದ್ದರು. ಈ ಪಂದ್ಯದಲ್ಲಿ ಅವರು ಭಾರತದ ಆಟಗಾರನೇ ಆದ ಲಕ್ಷ್ಯಸೇನ್‌ ವಿರುದ್ಧ ಸೋಲು ಅನುಭವಿಸಿದ್ದರು. ಆದರೆ, ಚೀನಾ ಮಾಸ್ಟರ್ಸ್‌ನಲ್ಲಿ ಚೈನೀಸ್‌ ತೈಪೆ ಆಟಗಾರನ ಎದುರು ಕಠಿಣ ಹೋರಾಟ ತೋರಿದ ಹೊರತಾಗಿಯೂ ಸೋಲು ಅನುಭವಿಸಿದ್ದಾರೆ.