ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅರ್ಜೆಂಟೀನಾ vs ಸ್ಪೇನ್‌ ನಡುವಣ ಫೈನಲ್‌ ಪಂದ್ಯದ ಆರಂಭ ಯಾವಾಗ? ಲೈವ್‌ ಸ್ಟ್ರೀಮಿಂಗ್‌ ವಿವರ

Argentina vs Spain: 2026ರ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದ ಆರಂಭಕ್ಕೆ ಇನ್ನು ಕ್ಷಣಗಣನೆ ಶುರುವಾಗಿದೆ. ಈ ಪಂದ್ಯ ಭಾನುವಾರ ಮಧ್ಯ ರಾತ್ರಿ ಭಾರತೀಯ ಕಾಲಮಾನ 12: 30ಕ್ಕೆ ಆರಂಭವಾಗಲಿದೆ. ಈ ಪಂದ್ಯವನ್ನು ಭಾರತದಲ್ಲಿ ಜೀ 5 ಹಾಗೂ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಈ ಪಂದ್ಯದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

FIFA World Cup 2026 Final ಪಂದ್ಯ ಆರಂಭ ಯಾವಾಗ?

ಅರ್ಜೆಂಟೀನಾ ಹಾಗೂ ಸ್ಪೇನ್‌ ನಡುವಣ ಪಂದ್ಯದ ವಿವರ. -

Profile
Ramesh Kote Jul 19, 2026 7:45 PM

ನವದೆಹಲಿ: ಫಿಫಾ ವಿಶ್ವಕಪ್ 2026ರ ಟೂರ್ನಿಯ (FIFA World Cup 2026) ಫೈನಲ್‌ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಇಡೀ ಫುಟ್ಬಾಲ್‌ ಲೋಕವೇ ಕಾತರದಿಂದ ಕಾಯುತ್ತಿದೆ. ಅಕ್ಷರಶಃ ವಿಶ್ವದ ಅತಿದೊಡ್ಡ ಕ್ರೀಡಾ ಸಂಭ್ರಮವಾಗಿರುವ ಈ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಅರ್ಜೆಂಟೀನಾ ಮತ್ತು ಸ್ಪೇನ್ (ARG vs SPA) ಮುಖಾಮುಖಿಯಾಗಲಿದ್ದು, ರೋಚಕ ಹಣಾಹಣಿಗೆ ನ್ಯೂ ಜೆರ್ಸಿಯ ಮೆಟ್‌ಲೈಫ್‌ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದೆ.

ಯುರೋಪಿಯನ್ ಚಾಂಪಿಯನ್ ಸ್ಪೇನ್ ಹಾಗೂ ಹಾಲಿ ವಿಶ್ವಕಪ್ ಚಾಂಪಿಯನ್ ಅರ್ಜೆಂಟೀನಾ ನಡುವೆ ಪೈಪೋಟಿ ತೀವ್ರ ಕುತೂಹಲದಿಂದ ಕೂಡಿರಲಿದೆ. ಈ ಪಂದ್ಯದಲ್ಲಿ ಗೆದ್ದರೆ, ಅರ್ಜೆಂಟೀನಾ ಸತತ ಎರಡು ಬಾರಿ ವಿಶ್ವಕಪ್ ಗೆದ್ದ ಇತಿಹಾಸದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 48 ತಂಡಗಳು ಭಾಗವಹಿಸಿದ್ದ ಈ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 104 ಪಂದ್ಯಗಳ ಪೈಕಿ ಈಗ ಫೈನಲ್ ಮಾತ್ರ ಬಾಕಿಯಿದೆ. ಶನಿವಾರ ಮೂರನೇ ಸ್ಥಾನಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್, ಫ್ರಾನ್ಸ್ ತಂಡವನ್ನು ಮಣಿಸಿತ್ತು.

FIFA World Cup 2026 Final: ನೆರೆಹೊರೆಯ ದೇಶಗಳೇ ಅರ್ಜೆಂಟೀನಾದ ಸೋಲನ್ನು ಬಯಸುತ್ತಿವೆ! ಏಕೆ ಗೊತ್ತೆ?

2010ರಲ್ಲಿ ಮೊದಲ ಬಾರಿ ವಿಶ್ವಕಪ್ ಗೆದ್ದಿದ್ದ ಸ್ಪೇನ್ ಇದೀಗ ತನ್ನ ಎರಡನೇ ಪ್ರಶಸ್ತಿಯ ಕನಸು ಕಾಣುತ್ತಿದೆ. ಮತ್ತೊಂದೆಡೆ, ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ 1962ರ ಬಳಿಕ ಸತತ ಎರಡು ವಿಶ್ವಕಪ್ ಪ್ರಶಸ್ತಿಗಳನ್ನು ಗೆಲ್ಲುವ ಮೊದಲ ತಂಡವಾಗುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಐತಿಹಾಸಿಕ ಫೈನಲ್‌ಗೆ ಸಾಕ್ಷಿಯಾಗಲಿದ್ದಾರೆ. ಈಸ್ಟ್ ಋದರ್‌ಫೋರ್ಡ್‌ನ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವನ್ನು 80 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ನೇರವಾಗಿ ವೀಕ್ಷಿಸಲಿದ್ದಾರೆ. ಟ್ರಂಪ್ ತಮ್ಮ ಜೀವನದಲ್ಲಿ ಮೊದಲ ಬಾರಿ ವಿಶ್ವಕಪ್ ಪಂದ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ.

FIFA World Cup Final: ಲಿಯೋನೆಲ್‌ ಮೆಸ್ಸಿ ಮುರಿಯಬಹುದಾದ ಟಾಪ್‌ 5 ದಾಖಲೆಗಳು!

ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ಮಾಹಿತಿ

ಪಂದ್ಯ ಎಲ್ಲಿ ನಡೆಯಲಿದೆ?

2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನ್ಯೂಯಾರ್ಕ್‌ನ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಪಂದ್ಯ ಆರಂಭವಾಗುವ ಸಮಯ ಎಷ್ಟು?

ಫೈನಲ್ ಪಂದ್ಯ ಭಾರತೀಯ ಕಾಲಮಾನದ (IST) ಪ್ರಕಾರ ಸೋಮವಾರ ಮಧ್ಯರಾತ್ರಿ 12:30ಕ್ಕೆ ಆರಂಭವಾಗಲಿದೆ.

ಟಿವಿಯಲ್ಲಿ ನೇರ ಪ್ರಸಾರ ಎಲ್ಲಿದೆ?

2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಯುನೈಟ್8 ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಡಿಡಿ ಸ್ಪೋರ್ಟ್ಸ್‌ ವಾಹಿನಿಯಲ್ಲಿ ವೀಕ್ಷಿಸಬಹುದು, ಆದರೆ ಹೊಸದಾಗಿ ಡಿಡಿ ಫ್ರಿ ಡಿಷ್‌ ಇದ್ದರೆ ಮಾತ್ರ.

ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ZEE5 ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮೂಲಕ ವೀಕ್ಷಿಸಬಹುದು. ZEE5ನ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಎಲ್ಲಾ ಸ್ಥಳೀಯ ವಾಹಿನಿಗಳಲ್ಲಿ ವೀಕ್ಷಿಸಬಹುದು.

FIFA World Cup 2026| ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಸ್ಪೇನ್ ಸವಾಲ್; ವಿಶ್ವಕಪ್ ಕಿರೀಟಕ್ಕಾಗಿ ಮಹಾ ಕದನ!

ಉಭಯ ತಂಡಗಳ ಸಂಭಾವ್ಯ 11 ಆಟಗಾರರ ವಿವರ

ಸ್ಪೇನ್‌: ಉನಾಯ್‌ ಸೈಮನ್‌, ಪೆಡ್ರೊ ಪೊರೊ, ಪಾವ್‌ ಕುಬ್ರಾಸಿ, ಎಮಿರಿಕ್‌ ಲ್ಯಾಮೊರ್ಟೆ, ಮಾರ್ಕ್‌ ಕುಕುರೆಲ್‌, ಫ್ಯಾಬಿಯನ್‌ ರೂಜಿಝ್‌, ರೊಡ್ರಿ, ಲಮೀನ್‌ ಯಮಾಲ್‌, ಡ್ಯಾನಿ ಒಲ್ಮೊ, ಅಲೆಕ್ಸ್‌ ಬಯೇನೊ, ಮೈಕಲ್‌ ಒರ್ಯಝಬಲ್‌

ಅರ್ಜೆಂಟೀನಾ: ಎಮಿಲಿಯಾನೊ ಮಾರ್ಟಿನೆಝ್‌, ನಯುಲ್‌ ಮೊಲಿನಾ, ಕ್ರಿಸ್ಟಿಯಾನೊ ರೊಮೆರೊ, ಲಸಿಂಡ್ರೊ ಮಾರ್ಟಿನೆಝ್‌, ನಿಕೋಲ್ಸ್‌ ತಗ್ಲಿಯಾಫಿಕೊ, ರೊಡ್ರಿಗೊ ಡಿ ಪಾಲ್‌, ಲಿಯಾಂಡ್ರೊ ಪಾರೆಡಸ್‌, ಅಲೆಕ್ಸಿಸ್‌ ಮ್ಯಾಕ್‌ ಅಲಿಸ್ಟರ್‌, ಎಂಝೊ ಫೆರ್ನಾಂಡಿಝ್‌, ಲಿಯೊನೆಲ್‌ ಮೆಸ್ಸಿ, ಜೂಲಿಯನ್‌ ಅಲ್ವರೆಝ್‌