ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಿಂದ ಸಂಜು, ಮಯಾಂಕ್‌ಗೆ ಕೊಕ್‌ ಸಾಧ್ಯತೆ

ಸತತ ಬ್ಯಾಟಿಂಗ್‌ ವೈಫಲ್ಯ ಕಾಣುತ್ತಿರುವ ಸಂಜು ಸ್ಯಾಮ್ಸನ್‌ ಬದಲು 15 ವರ್ಷದ ವೈಭವ್‌ ಸೂರ್ಯವಂಶಿಗೆ ಸ್ಥಾನ ಸಿಗುವ ಸಾಧ್ಯತೆಯೂ ಇದೆ. ಸಂಜು ಕಳೆದ ನಾಲ್ಕು ಇನಿಂಗ್ಸ್‌ನಲ್ಲಿ ಕ್ರಮವಾಗಿ 9, 7, 2 ಮತ್ತು 11 ರನ್‌ ಆಗಿದ್ದವು. ಹಾಗಾಗಿ, ಸೂರ್ಯವಂಶಿಗೆ ಮತ್ತೊಂದು ಅವಕಾಶ ನೀಡುವ ಆಲೋಚನೆ ಬರುವುದು ಸಹಜ.

ವಿಂಡೀಸ್ ವಿರುದ್ಧದ 2ನೇ ಟಿ20ಯಿಂದ ಸಂಜು, ಮಯಾಂಕ್‌ಗೆ ಕೊಕ್‌!

Prince Yadav -

Abhilash BC
Abhilash BC Oct 9, 2026 10:01 AM

ರಾಂಚಿ, ಅ.9: ಇಂದು ರಾಂಚಿಯ ಜೆಎಸ್‌ಸಿಎ (JSCA) ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯಕ್ಕಾಗಿ, ಬಲಗೈ ವೇಗದ ಬೌಲರ್ ಪ್ರಿನ್ಸ್ ಯಾದವ್ ಭಾರತದ ಆಡುವ ಬಳಗಕ್ಕೆ ಮರಳವು ಸಾಧ್ಯತೆಯಿದೆ.

ಜುಲೈನಲ್ಲಿ ಜಿಂಬಾಬ್ವೆಯಲ್ಲಿ ನಡೆದ ಟಿ20 ಅಂತರರಾಷ್ಟ್ರೀಯ ಸರಣಿಯ ವೇಳೆ ಗಾಯಗೊಂಡಿದ್ದ ಪ್ರಿನ್ಸ್, ಕಳೆದ ಮೂರು ತಿಂಗಳುಗಳಿಂದ ಆಟದಿಂದ ದೂರ ಉಳಿದಿದ್ದಾರೆ. ಆ ನಂತರ ಅವರನ್ನು ಏಷ್ಯನ್ ಗೇಮ್ಸ್‌ಗಾಗಿನ ಭಾರತೀಯ ತಂಡದಿಂದ ಕೈಬಿಡಲಾಗಿತ್ತು.

ಭಾರತದ ಪ್ರಮುಖ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಮತ್ತು ಯಶ್ ಠಾಕೂರ್ ಏಷ್ಯನ್ ಗೇಮ್ಸ್ ತಂಡದಲ್ಲಿದ್ದರು, ಆದರೆ ಪ್ರಿನ್ಸ್ ಅವರಿಗೆ ಅದರಲ್ಲಿ ಸ್ಥಾನ ಸಿಗಲಿಲ್ಲ. ಮಯಾಂಕ್ ಯಾದವ್ ಮೊದಲ ಟಿ20 ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿದ್ದರು ಮತ್ತು ಐವರು ಬೌಲರ್‌ಗಳ ಪೈಕಿ ಅತ್ಯಂತ ದುಬಾರಿಯಾದ ಬೌಲರ್ ಎನಿಸಿಕೊಂಡರು. ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 40 ರನ್‌ಗಳನ್ನು ಬಿಟ್ಟುಕೊಟ್ಟರು. ಹೀಗಾಗಿ ಎರಡನೇ ಪಂದ್ಯಕ್ಕೆ ಅವರ ಬದಲು ಪ್ರಿನ್ಸ್ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಅಧಿಕ.

ನ.8ಕ್ಕೆ ಭಾರತ-ಪಾಕಿಸ್ತಾನ U19 ಏಷ್ಯಾ ಕಪ್ ಮುಖಾಮುಖಿ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಸತತ ಬ್ಯಾಟಿಂಗ್‌ ವೈಫಲ್ಯ ಕಾಣುತ್ತಿರುವ ಸಂಜು ಸ್ಯಾಮ್ಸನ್‌ ಬದಲು 15 ವರ್ಷದ ವೈಭವ್‌ ಸೂರ್ಯವಂಶಿಗೆ ಸ್ಥಾನ ಸಿಗುವ ಸಾಧ್ಯತೆಯೂ ಇದೆ. ಸಂಜು ಕಳೆದ ನಾಲ್ಕು ಇನಿಂಗ್ಸ್‌ನಲ್ಲಿ ಕ್ರಮವಾಗಿ 9, 7, 2 ಮತ್ತು 11 ರನ್‌ ಆಗಿದ್ದವು. ಹಾಗಾಗಿ, ಸೂರ್ಯವಂಶಿಗೆ ಮತ್ತೊಂದು ಅವಕಾಶ ನೀಡುವ ಆಲೋಚನೆ ಬರುವುದು ಸಹಜ. ಇಲ್ಲಿಯವರೆಗೆ ಸಿಕ್ಕ ಸೀಮಿತ ಅವಕಾಶಗಳಲ್ಲಿ, ಅವರು ಟಿ-20 ಮಾದರಿಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಭಾರತ ಸಂಭಾವ್ಯ ತಂಡ

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ.), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ನಮನ್ ಧೀರ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಪ್ರಿನ್ಸ್ ಯಾದವ್, ಅರ್ಶ್‌ದೀಪ್‌ ಸಿಂಗ್.