Prithvi Shaw: ಪೃಥ್ವಿ ಶಾಗೆ 100 ರೂ. ದಂಡ ವಿಧಿಸಿದ ಮುಂಬೈ ನ್ಯಾಯಾಲಯ; ಕಾರಣವೇನು?
Prithvi Shaw fined Rs 100: ಭೋಜಪುರಿ ನಟಿಯಾಗಿರುವ ಸಪ್ನಾ ಗಿಲ್ ಕೆಲ ಭೋಜಪುರಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭೋಜಪುರಿ ಖ್ಯಾತನಾಮ ನಟರಾದ ರವಿ ಕಿಶನ್ ಹಾಗೂ ದಿನೇಶ್ ಲಾಲ್ ಯಾದವ್ ಜತೆಗೂ ನಟಿಸಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಸಪ್ನಾ ಗಿಲ್ ಇನ್‌ಸ್ಟಾಗ್ರಾಂ ಹಾಗೂ ಯುಟ್ಯೂಬ್‌ನಲ್ಲಿ ಸಕ್ರಿಯರಾಗಿದ್ದು 5 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ.

-

ಮುಂಬಯಿ: ಭೋಜಪುರಿ ನಟಿ ಸಪ್ನಾ ಗಿಲ್(Sapna Gill) ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯೆ ಸಲ್ಲಿಸಲು ವಿಫಲವಾದ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ(Prithvi Shaw) ಅವರಿಗೆ ಮುಂಬೈನ ಸೆಷನ್ಸ್ ನ್ಯಾಯಾಲಯ 100 ರೂ.ದಂಡ(Prithvi Shaw fined Rs 100) ವಿಧಿಸಿದೆ.
ಸಪ್ನಾ ಗಿಲ್ ಅವರು ಏಪ್ರಿಲ್ 2024 ರಲ್ಲಿ ದಿನೋಶಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಹಿಂದಿನ ಮ್ಯಾಜಿಸ್ಟ್ರೇಟ್ ಆದೇಶದ ವಿರುದ್ಧ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪೃಥ್ವಿ ಶಾ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶಿಸಲು ನಿರಾಕರಿಸಿತು, ಬದಲಿಗೆ ಪ್ರಾಥಮಿಕ ತನಿಖೆಗೆ ಮಾತ್ರ ಆದೇಶಿಸಿತು. ಅದರಂತೆ ಗಿಲ್ ಅವರ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸೆಷನ್ಸ್ ನ್ಯಾಯಾಲಯವು ಶಾ ಅವರಿಗೆ ಹಲವು ಬಾರಿ ನೋಟಿಸ್ ಕಳುಹಿಸಿತ್ತು. ಕಳೆದ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಅವರಿಗೆ ಉತ್ತರವನ್ನು ಸಲ್ಲಿಸಲು ಅಂತಿಮ ಅವಕಾಶದ ಎಚ್ಚರಿಕೆಯನ್ನು ನೀಡಿತ್ತು.
ಆದ್ಯಾಗೂ, ಪೃಥ್ವಿ ಶಾ ಪ್ರತಿಕ್ರಿಯೆ ನೀಡಿರಲಿಲ್ಲ. ಇದರರಿಂದ ನ್ಯಾಯಾಧೀಶರು 100 ರೂ.ದಂಡ ವಿಧಿಸಿ ಇನ್ನೂ ಒಂದು ಅವಕಾಶವನ್ನು ನೀಡಿ ಪ್ರಕರಣವನ್ನು ಡಿಸೆಂಬರ್ 16 ಕ್ಕೆ ಮುಂದೂಡಿದರು. ಗಿಲ್ ಅವರ ವಕೀಲ ಅಲಿ ಕಾಶಿಫ್ ಖಾನ್, ಶಾ ಅವರು ಉದ್ದೇಶಪೂರ್ವಕವಾಗಿ ನ್ಯಾಯಾಂಗ ಪ್ರಕ್ರಿಯೆಯನ್ನು ತಪ್ಪಿಸುತ್ತಿದ್ದಾರೆ ಎಂದು ವಾದಿಸಿದರು. ಹಲವು ಬಾರಿ ಸಮನ್ಸ್ ನೀಡಿದ್ದರೂ ಅವರು ಪ್ರತಿಕ್ರಿಯೆ ನೀಡುತ್ತಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖಾನ್ ನ್ಯಾಯಾಲಯಕ್ಕೆ ತಿಳಿಸಿದರು.
ಭೋಜಪುರಿ ನಟಿಯಾಗಿರುವ ಸಪ್ನಾ ಗಿಲ್ ಕೆಲ ಭೋಜಪುರಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭೋಜಪುರಿ ಖ್ಯಾತನಾಮ ನಟರಾದ ರವಿ ಕಿಶನ್ ಹಾಗೂ ದಿನೇಶ್ ಲಾಲ್ ಯಾದವ್ ಜತೆಗೂ ನಟಿಸಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಸಪ್ನಾ ಗಿಲ್ ಇನ್‌ಸ್ಟಾಗ್ರಾಂ ಹಾಗೂ ಯುಟ್ಯೂಬ್‌ನಲ್ಲಿ ಸಕ್ರಿಯರಾಗಿದ್ದು 5 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ.