ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rahul Dravid: ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ರಾಜೀನಾಮೆ

ಈ ಹಿಂದೆ ನಾಯಕತ್ವ ಮತ್ತು ತರಬೇತುದಾರರಾಗಿದ್ದ ಫ್ರಾಂಚೈಸಿಗೆ ಮತ್ತೆ ಕೋಚ್‌ ಆಗಿ ಮರಳಿದ್ದ ದ್ರಾವಿಡ್‌ 18ನೇ ಆವೃತ್ತಿಯಲ್ಲಿ ಕಾಲು ನೋವಿನ ಮಧ್ಯೆಯೂ ಅವರು ಬ್ಯಾಂಡೆಜ್‌ ಸುತ್ತಿಕೊಂಡೇ ತಂಡಕ್ಕೆ ತರಬೇತಿ ನೀಡಿದ್ದರು. ಆದಾಗ್ಯೂ, 2025 ರ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ್‌ ನಿರಾಶಾದಾಯಕ ಪ್ರದರ್ಶನ ನೀಡಿತ್ತು.

ರಾಜಸ್ಥಾನ್ ತಂಡದ ಮುಖ್ಯ ಕೋಚ್ ಹುದ್ದೆಗೆ ದ್ರಾವಿಡ್ ದಿಢೀರ್‌ ರಾಜೀನಾಮೆ

-

Abhilash BC Abhilash BC Aug 30, 2025 2:29 PM

ಜೈಪುರ: ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ (Rahul Dravid) ದಿಢೀರ್‌ ರಾಜೀನಾಮೆ ನೀಡಿದ್ದಾರೆ. 2026 ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ(IPL 2026) ಮುಂಚಿತವಾಗಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ದ್ರಾವಿಡ್ ಬೇರ್ಪಟ್ಟಿರುವುದಾಗಿ ಫ್ರಾಂಚೈಸಿ ಶನಿವಾರ ದೃಢಪಡಿಸಿದೆ. ಸೆಪ್ಟೆಂಬರ್ 6, 2024 ರಂದು ದ್ರಾವಿಡ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದರು.

ಈ ಹಿಂದೆ ನಾಯಕತ್ವ ಮತ್ತು ತರಬೇತುದಾರರಾಗಿದ್ದ ಫ್ರಾಂಚೈಸಿಗೆ ಮತ್ತೆ ಕೋಚ್‌ ಆಗಿ ಮರಳಿದ್ದ ದ್ರಾವಿಡ್‌ 18ನೇ ಆವೃತ್ತಿಯಲ್ಲಿ ಕಾಲು ನೋವಿನ ಮಧ್ಯೆಯೂ ಅವರು ಬ್ಯಾಂಡೆಜ್‌ ಸುತ್ತಿಕೊಂಡೇ ತಂಡಕ್ಕೆ ತರಬೇತಿ ನೀಡಿದ್ದರು. ಆದಾಗ್ಯೂ, 2025 ರ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ್‌ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ದ್ರಾವಿಡ್ ಮಾರ್ಗದರ್ಶನದಲ್ಲಿ, ರಾಜಸ್ಥಾನ್ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳನ್ನು ಗಳಿಸಿತ್ತು. ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಗಳಿಸಿತ್ತು.

"ರಾಯಲ್ಸ್ ತಂಡದ ಪ್ರಯಾಣದಲ್ಲಿ ರಾಹುಲ್ ಹಲವು ವರ್ಷಗಳಿಂದ ಕೇಂದ್ರಬಿಂದುವಾಗಿದ್ದಾರೆ. ಅವರ ನಾಯಕತ್ವವು ಒಂದು ಪೀಳಿಗೆಯ ಆಟಗಾರರ ಮೇಲೆ ಪ್ರಭಾವ ಬೀರಿದೆ. ತಂಡದೊಳಗೆ ಬಲವಾದ ಮೌಲ್ಯಗಳನ್ನು ನಿರ್ಮಿಸಿದೆ ಮತ್ತು ಫ್ರಾಂಚೈಸಿಯ ಸಂಸ್ಕೃತಿಯ ಮೇಲೆ ಅಳಿಸಲಾಗದ ಗುರುತು ಬಿಟ್ಟಿದೆ. ಫ್ರಾಂಚೈಸಿ ರಚನಾತ್ಮಕ ಪರಿಶೀಲನೆಯ ಭಾಗವಾಗಿ, ರಾಹುಲ್‌ಗೆ ಫ್ರಾಂಚೈಸಿಯಲ್ಲಿ ವಿಶಾಲವಾದ ಸ್ಥಾನವನ್ನು ನೀಡಲಾಗಿತ್ತು, ಆದರೆ ಅದನ್ನು ತೆಗೆದುಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

"ರಾಜಸ್ಥಾನ್ ರಾಯಲ್ಸ್, ಅದರ ಆಟಗಾರರು ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಅಭಿಮಾನಿಗಳು ರಾಹುಲ್ ಫ್ರಾಂಚೈಸಿಗೆ ನೀಡಿದ ಗಮನಾರ್ಹ ಸೇವೆಗಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ" ಎಂದು ಫ್ರಾಂಚೈಸಿ ಹೇಳಿದೆ.

2026 ರ ಮೆಗಾ ಹರಾಜಿಗೆ ಮುಂಚಿತವಾಗಿ ಐಪಿಎಲ್ ಫ್ರಾಂಚೈಸಿಯನ್ನು ತೊರೆದ ಎರಡನೇ ಮುಖ್ಯ ತರಬೇತುದಾರ ದ್ರಾವಿಡ್. ಕಳೆದ ತಿಂಗಳು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದದ ಕೋಚ್‌ ಚಂದ್ರಕಾಂತ್ ಪಂಡಿತ್ ಅವರಿಂದ ಬೇರ್ಪಟ್ಟಿತ್ತು.