ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ ಪೂರ್ತಿಗೊಳಿಸಿದ ರೋಹಿತ್‌ ಶರ್ಮ; ಈ ಸಾಧನೆಗೈದ 5ನೇ ಭಾರತೀಯ

IND vs AFG 2nd ODI: ರೋಹಿತ್ ಶರ್ಮಾ ತಮ್ಮ 345ನೇ ಇನ್ನಿಂಗ್ಸ್‌ನಲ್ಲಿ 14,000 ಲಿಸ್ಟ್ ಎ ರನ್‌ಗಳನ್ನು ತಲುಪಿದರು, ಈ ಮೂಲಕ ಅತಿ ಕಡಿಮೆ ಇನಿಂಗ್ಸ್‌ನಿಂದ ಈ ಮೈಲಿಗಲ್ಲು ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಕೊಹ್ಲಿ ಮೊದಲಿಗ. 290 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಈ ಸಾಧನೆಗೈದಿದ್ದರು. ಸಚಿನ್ ತೆಂಡೂಲ್ಕರ್ ಈ ಮೈಲಿಗಲ್ಲು ದಾಟಲು 348 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು.

ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ ಪೂರ್ತಿಗೊಳಿಸಿದ ರೋಹಿತ್‌

Rohit Sharma -

Abhilash BC
Abhilash BC Jun 17, 2026 3:32 PM

ಲಖನೌ, ಜೂ.17: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ(IND vs AFG 2nd ODI) ಪಂದ್ಯದಲ್ಲಿ ರೋಹಿತ್ ಶರ್ಮಾ 14,000 ಲಿಸ್ಟ್ ಎ ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದರು. ಸೀಮಿತ ಓವರ್‌ಗಳ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ ಅವರು ಮೊಹಮ್ಮದ್ ಸಲೀಮ್ ಸಫಿ ಎಸೆತವನ್ನು ಮಿಡ್-ವಿಕೆಟ್ ಮೂಲಕ ಸಿಕ್ಸರ್‌ ಬಾರಿಸುವ ಮೂಲಕ ಈ ವೈಯಕ್ತಿಕ ಪ್ರಮುಖ ಮೈಲಿಗಲ್ಲನ್ನು ನಿರ್ಮಿಸಿದರು.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ 14,000 ರನ್‌ಗಳ ಗಡಿಯನ್ನು ತಲುಪಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್‌ ಪಾತ್ರರಾದರು. ಇದಕ್ಕೂ ಮೊದಲು, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 14000 ರನ್‌ಗಳನ್ನು ಪೂರ್ಣಗೊಳಿಸಿದ್ದರು.

ಟೀಮ್‌ ಇಂಡಿಯಾಕ್ಕೆ ಪ್ರಿನ್ಸ್‌ ಯಾದವ್‌ ಪದಾರ್ಪಣೆ; ಬ್ಯಾಟಿಂಗ್‌ನಲ್ಲಿ ಜೈಸ್ವಾಲ್‌ ಫೇಲ್‌

ರೋಹಿತ್ ಶರ್ಮಾ ತಮ್ಮ 345ನೇ ಇನ್ನಿಂಗ್ಸ್‌ನಲ್ಲಿ 14,000 ಲಿಸ್ಟ್ ಎ ರನ್‌ಗಳನ್ನು ತಲುಪಿದರು, ಈ ಮೂಲಕ ಅತಿ ಕಡಿಮೆ ಇನಿಂಗ್ಸ್‌ನಿಂದ ಈ ಮೈಲಿಗಲ್ಲು ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಕೊಹ್ಲಿ ಮೊದಲಿಗ. 290 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಈ ಸಾಧನೆಗೈದಿದ್ದರು. ಸಚಿನ್ ತೆಂಡೂಲ್ಕರ್ ಈ ಮೈಲಿಗಲ್ಲು ದಾಟಲು 348 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು.

ಆಫ್ಘಾನ್‌ ಪರ ರೋಹಿತ್‌ 39 ಎಸೆತಗಳಿಂದ 6 ಬೌಂಡರಿ ಮತ್ತು 2 ಸಿಕ್ಸರ್‌ ಸಿಡಿಸಿ 48 ರನ್‌ಗಳಿಸಿ ರಶೀದ್‌ ಖಾನ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಕೇವಲ 2 ರನ್‌ ಅಂತರದಿಂದ ಅರ್ಧಶತಕದಿಂದ ವಂಚಿತರಾದರು.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಭಾರತೀಯರಿಂದ ಅತಿ ಹೆಚ್ಚು ರನ್‌ಗಳು

ಸಚಿನ್ ತೆಂಡೂಲ್ಕರ್-21,999

ವಿರಾಟ್ ಕೊಹ್ಲಿ-16,447

ಸೌರವ್ ಗಂಗೂಲಿ-15,622

ರಾಹುಲ್ ದ್ರಾವಿಡ್-15,271

ರೋಹಿತ್ ಶರ್ಮಾ- 14,007*

ಚೊಚ್ಚಲ ವಿಕೆಟ್‌ ಕಿತ್ತ ಮೊಹಮ್ಮದ್ ಸಲೀಮ್

ಅಫ್ಘಾನಿಸ್ತಾನ ತಂಡದ ಯುವ ವೇಗಿ ಮೊಹಮ್ಮದ್ ಸಲೀಮ್, ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಕೀಳುವ ಮೂಲಕ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ವಿಕೆಟ್‌ ಖಾತೆ ತೆರೆದರು. ಜೈಸ್ವಾಲ್‌ 4 ರನ್‌ ಗಳಿಸಿದರು. ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ಬದಲಿಗೆ ಜೈಸ್ವಾಲ್‌ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳಲಾಯಿತು.

IND vs AFG: ಎರಡನೇ ಒಡಿಐ ಪಂದ್ಯದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಆಡದೇ ಇರಲು ಕಾರಣವೇನು?

ಭಾರತ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ಇಶಾನ್ ಕಿಶನ್ (ವಿ.ಕೀ.), ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಗುರ್ನೂರ್ ಬ್ರಾರ್, ಅರ್ಶ್ದೀಪ್ ಸಿಂಗ್, ಪ್ರಿನ್ಸ್ ಯಾದವ್.

ಅಫ್ಘಾನಿಸ್ತಾನ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಇಬ್ರಾಹಿಂ ಜದ್ರಾನ್, ಸೇದಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ದರ್ವಿಶ್ ರಸೂಲಿ, ರಶೀದ್ ಖಾನ್, ನಂಗೆಯಾಲಿಯಾ ಖರೋಟಿ, ಎಎಮ್ ಗಜನ್ಫರ್, ಮೊಹಮ್ಮದ್ ಸಲೀಮ್ ಸಫಿ, ಬಿಲಾಲ್