ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanju Samson: ರಾಜಸ್ಥಾನ್‌ ತೊರೆದು ಚೆನ್ನೈ ಸೇರಲು ಮುಂದಾದ ಸಂಜು ಸ್ಯಾಮ್ಸನ್‌

2021 ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕನಾಗಿ ಆಯ್ಕೆಯಾದ ಸಂಜು 2022ರಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದರು. ಸ್ಯಾಮ್ಸನ್ ನೇತೃತ್ವದಲ್ಲಿ ರಾಯಲ್ಸ್ 33 ಪಂದ್ಯಗಳಲ್ಲಿ ಜಯಗಳಿಸಿದೆ ಮತ್ತು 32 ಪಂದ್ಯಗಳಲ್ಲಿ ಸೋತಿದೆ. ರಾಜಸ್ಥಾನ್‌ ಪರ ಸಂಜು 4027 ರನ್ ಗಳಿಸಿದ್ದಾರೆ. ಇದು ಆರ್‌ಆರ್ ತಂಡದ ಪರ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ರನ್‌.

ರಾಜಸ್ಥಾನ್‌ ತೊರೆದು ಚೆನ್ನೈ ಸೇರಲು ಮುಂದಾದ ಸಂಜು ಸ್ಯಾಮ್ಸನ್‌

Profile Abhilash BC Jun 11, 2025 2:11 PM

ಚೆನ್ನೈ: ರಾಜಸ್ಥಾನ್ ರಾಯಲ್ಸ್ (Rajasthan Royals) ನಾಯಕ ಸಂಜು ಸ್ಯಾಮ್ಸನ್(Sanju Samson) ಅವರು ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಸೇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸ್ಯಾಮ್ಸನ್‌ ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಚಟುವಟಿಕೆ ನೋಡುವಾಗ ಅವರು ರಾಜಸ್ಥಾನ್‌ ಫ್ರಾಂಚೈಸಿ ತೊರೆಯುವುದು ಖಚಿತ ಎನ್ನುವಂತಿದೆ. ಕೆಲ ದಿನಗಳ ಹಿಂದಷ್ಟೇ ಸಂಜು ತಮ್ಮ ಪತ್ನಿಯೊಂದಿಗೆ ರಸ್ತೆ ದಾಟುವ ಫೋಟೊವೊಂದನ್ನು ಹಂಚಿಕೊಂಡು "ಚಲಿಸುವ ಸಮಯ..!!" ಎಂದು ಶೀರ್ಷಿಕೆ ನೀಡಿದ್ದರು. ಈ ಫೋಟೊದಲ್ಲಿ ಸಂಜು ಹಳದಿ ಗೆರೆಗೆ ಕಾಲಿಡುತ್ತಿರುವುದು ಕಾಣಬಹುದು. ಹೀಗಾಗಿ ನೆಟ್ಟಿಗರು ಇದು ಸಂಜು ಚೆನ್ನೈ ಸೇರುವ ಸುಳಿವು ಎಂದು ಹೇಳಲಾರಂಭಿಸಿದ್ದಾರೆ.

ಸ್ಯಾಮ್ಸನ್ 2018 ರಲ್ಲಿ ರಾಜಸ್ಥಾನ್ ರಾಯಲ್ಸ್‌ನೊಂದಿಗೆ ತಮ್ಮ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದರು. ಮತ್ತು ಐಪಿಎಲ್ 2022 ಮತ್ತು 2025 ರ ಮೆಗಾ-ಹರಾಜಿನ ಮೊದಲು ಅವರನ್ನು ಫ್ರಾಂಚೈಸಿ ರೀಟೇನ್‌ ಮಾಡಿತ್ತು. 18ನೇ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದ ಅವರು ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ. ಅಲ್ಲದೆ ಕೋಚ್‌ ರಾಹುಲ್‌ ದ್ರಾವಿಡ್‌ ಜತೆ ಮನಸ್ತಾಪ ಮಾಡಿಕೊಂಡಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಇದೀಗ ಸಂಜು ಚೆನ್ನೈ ಸೇರಲಿದ್ದಾರೆ ಎನ್ನಲಾಗಿದೆ.

ಮಹೇಂದ್ರ ಸಿಂಗ್‌ ಧೋನಿ ಮುಂದಿನ ಆವೃತ್ತಿಯ ಐಪಿಎಲ್‌ ಆಡುವುದು ಅನುಮಾನ ಹೀಗಾಗಿ ತಂಡಕ್ಕೆ ಸೂಕ್ತ ವಿಕೆಟ್‌ ಕೀಪರ್‌ ಅಗತ್ಯವಿರುವ ಕಾರಣ ಈ ಸ್ಥಾನಕ್ಕೆ ಸಂಜು ಅವರು ಆಯ್ಕೆಯಾಗಬಹುದು. ಧೋನಿ ಜತೆ ಸಂಜು ಉತ್ತಮ ನಂಟು ಕೂಡ ಹೊಂದಿದ್ದಾರೆ. ಜತೆಗೆ ಚೆನ್ನೈ ಮೇಲೂ ಅಪಾರ ಅಭಿಮಾನ ಮತ್ತು ಪ್ರೀತಿ ಹೊಂದಿದ್ದಾರೆ. ಹೀಗಾಗಿ ಅವರು ಚೆನ್ನೈ ತಂಡ ಸೇರಿದರು ಅಚ್ಚರಿಯಿಲ್ಲ.

ಇದನ್ನೂ ಓದಿ IPL 2025: ʻಫೈನಲ್‌ನಲ್ಲಿ ಅಪರಾಧವೆಸಗಿದ ಶ್ರೇಯಸ್‌ ಅಯ್ಯರ್‌ʼ-ಯೋಗರಾಜ್‌ ಸಿಂಗ್‌ ಆರೋಪ!

2021 ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕನಾಗಿ ಆಯ್ಕೆಯಾದ ಸಂಜು 2022ರಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದರು. ಸ್ಯಾಮ್ಸನ್ ನೇತೃತ್ವದಲ್ಲಿ ರಾಯಲ್ಸ್ 33 ಪಂದ್ಯಗಳಲ್ಲಿ ಜಯಗಳಿಸಿದೆ ಮತ್ತು 32 ಪಂದ್ಯಗಳಲ್ಲಿ ಸೋತಿದೆ. ರಾಜಸ್ಥಾನ್‌ ಪರ ಸಂಜು 4027 ರನ್ ಗಳಿಸಿದ್ದಾರೆ. ಇದು ಆರ್‌ಆರ್ ತಂಡದ ಪರ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ರನ್‌.