ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಾತ್ವಿಕ್‌–ಚಿರಾಗ್‌ ಜೋಡಿ

Hong Kong Open: ಮೊದಲ ಗೇಮ್‌ನಲ್ಲಿ ಸೋಲು ಕಂಡ ಭಾರತೀಯ ಜೋಡಿ ಆ ಬಳಿಕದ ಎರಡು ಗೇಮ್‌ಗಳಲ್ಲಿ ಸತತವಾಗಿ ಗೆಲವು ಸಾಧಿಸಿ ಮೇಲುಗೈ ಸಾಧಿಸಿತು. ಇತ್ತೀಗೆಗಷ್ಟೇ ಪ್ಯಾರಿಸ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ಗೆದ್ದ ವಿಶ್ವದ 9 ನೇ ಶ್ರೇಯಾಂಕದ ಸಾತ್ವಿಕ್ ಮತ್ತು ಚಿರಾಗ್ ಮುಂದಿನ ಹಂತದಲ್ಲಿ ಮಲೇಷ್ಯಾದ ಜುನೈದಿ ಆರಿಫ್ ಮತ್ತು ರಾಯ್ ಕಿಂಗ್ ಯಾಪ್ ಅವರನ್ನು ಎದುರಿಸಲಿದ್ದಾರೆ.

ಹಾಂಕಾಂಗ್ ಓಪನ್ ಕ್ವಾ. ಫೈನಲ್‌ ಪ್ರವೇಶಿಸಿದ ಸಾತ್ವಿಕ್‌–ಚಿರಾಗ್‌ ಜೋಡಿ

-

Abhilash BC Abhilash BC Sep 11, 2025 12:07 PM

ಭಾರತದ ಅಗ್ರ ಪುರುಷರ ಬ್ಯಾಡ್ಮಿಂಟನ್‌ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ(Satwik-Chirag) ಮತ್ತು ಚಿರಾಗ್ ಶೆಟ್ಟಿ ಹಾಂಗ್ ಕಾಂಗ್ ಓಪನ್‌ನ(Hong Kong Open) ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದಾರೆ. ಗುರುವಾರ ನಡೆದ ಫ್ರೀ-ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಥೈಲ್ಯಾಂಡ್‌ನ ಪೀರಟ್ಚೈ ಸುಕ್ಫುನ್ ಮತ್ತು ಪಕ್ಕಪೋನ್ ತೀರರತ್ಸಕುಲ್ ಜೋಡಿ ವಿರುದ್ಧ 18-21, 21-15, 21-11 ಅಂತರದಿಂದ ಗೆದ್ದರು. ಪಂದ್ಯ ಒಂದು ಗಂಟೆ ಮೂರು ನಿಮಿಷಗಳಲ್ಲಿ ಕೊನೆಗೊಂಡಿತು.

ಮೊದಲ ಗೇಮ್‌ನಲ್ಲಿ ಸೋಲು ಕಂಡ ಭಾರತೀಯ ಜೋಡಿ ಆ ಬಳಿಕದ ಎರಡು ಗೇಮ್‌ಗಳಲ್ಲಿ ಸತತವಾಗಿ ಗೆಲವು ಸಾಧಿಸಿ ಮೇಲುಗೈ ಸಾಧಿಸಿತು. ಇತ್ತೀಗೆಗಷ್ಟೇ ಪ್ಯಾರಿಸ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ಗೆದ್ದ ವಿಶ್ವದ 9 ನೇ ಶ್ರೇಯಾಂಕದ ಸಾತ್ವಿಕ್ ಮತ್ತು ಚಿರಾಗ್ ಮುಂದಿನ ಹಂತದಲ್ಲಿ ಮಲೇಷ್ಯಾದ ಜುನೈದಿ ಆರಿಫ್ ಮತ್ತು ರಾಯ್ ಕಿಂಗ್ ಯಾಪ್ ಅವರನ್ನು ಎದುರಿಸಲಿದ್ದಾರೆ.

16ರ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಜೋಡಿ, ಚೂಂಗ್ ಹೊನ್ ಜಿಯಾನ್ ಮತ್ತು ಮುಹಮ್ಮದ್ ಹೈಕಲ್ ಅವರನ್ನು 21-17, 21-19 ಅಂತರದಿಂದ ಸೋಲಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು.

ಸಿಂಗಲ್ಸ್‌ ವಿಭಾಗದಲ್ಲಿ ಲಕ್ಷ್ಯ ಸೇನ್ ಮತ್ತು ಎಚ್‌ಎಸ್ ಪ್ರಣಯ್ ಅವರು ಮುಖಾಮುಖಿಯಾಗಲಿದ್ದು, ಮಹಿಳಾ ಡಬಲ್ಸ್ ಜೋಡಿಯಾದ ರುತಪರ್ಣ ಮತ್ತು ಶ್ವೇತಪರ್ಣ ಪಾಂಡಾ ಜೋಡಿ ಚೀನಾದ ಐದನೇ ಶ್ರೇಯಾಂಕಿತ ಲಿ ಯಿ ಜಿಂಗ್ ಮತ್ತು ಲುವೊ ಕ್ಸು ಮಿನ್ ಅವರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ ಹಾಂಕಾಂಗ್ ಓಪನ್: ಪಿ.ವಿ ಸಿಂಧುಗೆ ಸೋಲು