ಗಿಲ್ ಔಟ್, ಇಶಾನ್ ಕಿಶನ್ ಇನ್?; ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ XI
India's Likely XI For 2nd ODI: ಗಿಲ್ ಹೊರಗುಳಿದರೆ, ಭಾರತ ತಂಡ ರೋಹಿತ್ ಜೊತೆಗೆ ಇಶಾನ್ ಕಿಶನ್ ಅವರನ್ನು ಮತ್ತೆ ಆರಂಭಿಕ ಆಟಗಾರನಾಗಿ ಕರೆಸಿಕೊಳ್ಳುವ ಸಾಧ್ಯತೆ ಇದೆ. ಗಿಲ್ ಹೊರಗುಳಿದರೆ ಉಪನಾಯಕನಾಗಿರುವ ಶ್ರೇಯಸ್ ಅಯ್ಯರ್ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ. ಗುರ್ನೂರ್ ಬದಲು ಅರ್ಶ್‌ದೀಪ್ ಸಿಂಗ್ ಅಥವಾ ಪ್ರಿನ್ಸ್ ಯಾದವ್ ಅವರಿಗೆ ಬಾಗಿಲು ತೆರೆಯಬಹುದು.
Shubman Gill -
ಕಾರ್ಡಿಫ್, ಜು.15: ಮಂಗಳವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆರು ವಿಕೆಟ್‌ಗಳ ಜಯದೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದ್ದು, ಗುರುವಾರ ನಡೆಯುವ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಆದರೆ ಭಾರತ ತಂಡ ಈ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಅವರ ಸೇವೆ ಕಳೆದುಕೊಳ್ಳುವ ಸಾಧ್ಯತೆಯೊಂದು ಕಂಡು ಬಂದಿದೆ.
ಸ್ನಾಯು ಸೆಳೆತದಿಂದ ಬಳಲುತ್ತಿರುವ ಗಿಲ್ ಮತ್ತು ವೇಗಿ ಗುರ್ನೂರ್ ಬ್ರಾರ್ ಕಳೆದ ಪಂದ್ಯದ ಮಧ್ಯದಲ್ಲಿಯೇ ಮೈದಾನದಿಂದ ನಿರ್ಗಮಿಸಿದರು. ಫಿಟ್ನೆಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಪಂದ್ಯದ ನಡುವೆ ಕೇವಲ ಒಂದು ದಿನದ ವಿರಾಮವಿದ್ದ ಕಾರಣ ಅವರು ಚೇತರಿಸಿಕೊಳ್ಳುವುದು ಅನುಮಾನ ಹೀಗಾಗಿ ತಂಡದಲ್ಲಿ ಎರಡು ಬದಲಾವಣೆಗಳನ್ನು ಕಾಣುವ ಸಾಧ್ಯತೆ ಇದೆ.
ಹೊಸ ವಿಶ್ವಕಪ್ ಸ್ವರೂಪದ ಪ್ರಕಾರ ಎಷ್ಟು ಬಾರಿ ಭಾರತ- ಪಾಕ್ ಮುಖಾಮುಖಿಯಾಗಲಿವೆ?
ಗಿಲ್ ಹೊರಗುಳಿದರೆ, ಭಾರತ ತಂಡ ರೋಹಿತ್ ಜೊತೆಗೆ ಇಶಾನ್ ಕಿಶನ್ ಅವರನ್ನು ಮತ್ತೆ ಆರಂಭಿಕ ಆಟಗಾರನಾಗಿ ಕರೆಸಿಕೊಳ್ಳುವ ಸಾಧ್ಯತೆ ಇದೆ. ಗಿಲ್ ಹೊರಗುಳಿದರೆ ಉಪನಾಯಕನಾಗಿರುವ ಶ್ರೇಯಸ್ ಅಯ್ಯರ್ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ. ಗುರ್ನೂರ್ ಬದಲು ಅರ್ಶ್‌ದೀಪ್ ಸಿಂಗ್ ಅಥವಾ ಪ್ರಿನ್ಸ್ ಯಾದವ್ ಅವರಿಗೆ ಬಾಗಿಲು ತೆರೆಯಬಹುದು.
2027 ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ರೋಹಿತ್ ಮತ್ತು ಕೊಹ್ಲಿಯ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂಬ ವರದಿಗಳ ನಡುವೆ, ಮಾಜಿ ನಾಯಕ ರೋಹಿತ್ 21 ಎಸೆತಗಳಲ್ಲಿ 11 ರನ್ ಮತ್ತೊಂದೆಡೆ, ಗಾಯದಿಂದಾಗಿ ಅಫ್ಘಾನಿಸ್ತಾನ ಸರಣಿಯನ್ನು ತಪ್ಪಿಸಿಕೊಂಡಿದ್ದ ಕೊಹ್ಲಿ, ಆರು ಎಸೆತಗಳಿಂ ಎದುರಿಸಿದ 5 ರನ್ ಗಳಿಸಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಹೀಗಾಗಿ ಉಭಯ ಆಟಗಾರರಿಗೆ ಈ ಪಂದ್ಯ ಅತಿ ಮುಖ್ಯವಾಗಿದೆ.
2ನೇ ಏಕದಿನಕ್ಕೆ ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ, ಶುಭಮನ್ ಗಿಲ್/ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್ (ವಿ.ಕೀ.), ಅಕ್ಷರ್ ಪಟೇಲ್, ಶಿವಂ ದುಬೆ, ಗುರ್ನೂರ್ ಬ್ರಾರ್/ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ