ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

US Open 2025: 5 ವರ್ಷಗಳ ನಂತರ ಯುಎಸ್ ಓಪನ್ ಸೆಮಿಫೈನಲ್ ತಲುಪಿದ ಒಸಾಕಾ

ಕೇವಲ ಎರಡು ತಿಂಗಳ ಹಿಂದೆ, ಅನಿಸಿಮೊವಾ ತಮ್ಮ ವೃತ್ತಿಜೀವನದ ಅತ್ಯಂತ ಹೀನಾಯ ಸೋಲು ಕಂಡಿದ್ದರು. ಕೇವಲ 57 ನಿಮಿಷಗಳ ಕಾಲ ನಡೆದಿದ್ ವಿಂಬಲ್ಡನ್ ಫೈನಲ್‌ನಲ್ಲಿ ಸ್ವೀಟೆಕ್ ವಿರುದ್ಧ 6-0, 6-0 ಅಂತರದ ಸೋಲನ್ನು ಅನುಭವಿಸಿದ್ದರು. ‌ಅಂದಿನ ಅವಮಾನಕರ ಸೋಲಿಗೆ ಅವರು ನ್ಯೂಯಾರ್ಕ್‌ನಲ್ಲಿ ಸೇಡು ತೀರಿಸಿಕೊಂಡರು.

ಅನಿಸಿಮೊವಾಗೆ ಸಾಟಿಯಾಗದ ಸ್ವಿಯಾಟೆಕ್‌

-

Abhilash BC Abhilash BC Sep 4, 2025 9:39 AM

ನ್ಯೂಯಾರ್ಕ್‌: ಗುರುವಾರ ನಡೆದ ಬಹುನಿರೀಕ್ಷಿತ ಯುಎಸ್ ಓಪನ್(US Open 2025) ಕ್ವಾರ್ಟರ್ ಫೈನಲ್ ಸೆಣಸಾಟದಲ್ಲಿ ನವೋಮಿ ಒಸಾಕಾ(Naomi Osaka) ಅವರು ಕರೋಲಿನಾ ಮುಚೋವಾ ಅವರನ್ನು ನಿರೀಕ್ಷೆಗಿಂತ ಸುಲಭವಾಗಿ ಸೋಲಿಸಿ ಬರೋಬ್ಬರಿ 5 ವರ್ಷಗಳ ಬಳಿಕ ಟೂರ್ನಿಯ ಸೆಮಿಫೈನಲ್‌ಗೆ ದಾಪುಗಾಲಿಟ್ಟರು. ಆದರೆ ಎರಡನೇ ಶ್ರೇಯಾಂಕದ ಐಗಾ ಸ್ವಿಯಾಟೆಕ್(Swiatek) ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.

ವರ್ಷಗಳ ಬಳಿಕ ಹಳೆಯ ಲಯಕ್ಕೆ ಮರಳಿರುವ ಒಸಾಕಾ ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಾಳಿ ಮುಚೋವಾ ವಿರುದ್ಧ ಸಂಪೂರ್ಣ ಹಿಡಿತವನ್ನು ಕಾಯ್ದುಕೊಂಡರು. ಪಂದ್ಯವನ್ನು 6-4, 7-6(3) ನೇರ ಸೆಟ್‌ಗಳಿಂದ ಗೆದ್ದು ಬೀಗಿದರು. ಸೆಮಿಫೈನಲ್‌ನಲ್ಲಿ ಅಮಂಡಾ ಅನಿಸಿಮೊವಾ ಸವಾಲು ಎದುರಿಸಲಿದ್ದಾರೆ.

23ನೇ ಶ್ರೇಯಾಂಕದ ಜಪಾನಿನ ಆಟಗಾರ್ತಿ ಒಸಾಕ, 2021 ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದ ನಂತರ ತಮ್ಮ ಮೊದಲ ಸೆಮಿಫೈನಲ್‌ ಆಡಲಿದ್ದಾರೆ. ಅಮಂಡಾ ಅನಿಸಿಮೊವಾ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸ್ವಿಯೆಟೆಕ್‌ಗೆ 6-4, 6-3 ಅಂತರದ ಸೋಲಿನ ಆಘಾತವಿಕ್ಕಿದರು.

ಸೇಡು ತೀರಿಸಿಕೊಂಡ ಅನಿಸಿಮೊವಾ

ಕೇವಲ ಎರಡು ತಿಂಗಳ ಹಿಂದೆ, ಅನಿಸಿಮೊವಾ ತಮ್ಮ ವೃತ್ತಿಜೀವನದ ಅತ್ಯಂತ ಹೀನಾಯ ಸೋಲು ಕಂಡಿದ್ದರು. ಕೇವಲ 57 ನಿಮಿಷಗಳ ಕಾಲ ನಡೆದಿದ್ ವಿಂಬಲ್ಡನ್ ಫೈನಲ್‌ನಲ್ಲಿ ಸ್ವೀಟೆಕ್ ವಿರುದ್ಧ 6-0, 6-0 ಅಂತರದ ಸೋಲನ್ನು ಅನುಭವಿಸಿದ್ದರು. ‌ಅಂದಿನ ಅವಮಾನಕರ ಸೋಲಿಗೆ ಅವರು ನ್ಯೂಯಾರ್ಕ್‌ನಲ್ಲಿ ಸೇಡು ತೀರಿಸಿಕೊಂಡರು.

ಪುರುಷರ ಸಿಂಗಲ್ಸ್‌ನಲ್ಲಿ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರು 10ನೇ ಶ್ರೇಯಾಂಕದ ಇಟಲಿ ಆಟಗಾರ ಲೊರೆಂಜೊ ಮುಸೆಟ್ಟಿ ಅವರನ್ನು 6-1, 6-4, 6-2 ಅಂತರದಿಂ ಮಣಿಸಿ ಸೆಮಿ ಫೈನಲ್‌ ಪ್ರವೇಶಿಸಿದರು. ಸೆಮಿಯಲ್ಲಿ 25ನೇ ಶ್ರೇಯಾಂಕದ ಫೆಲಿಕ್ಸ್‌ಆಗರ್ ಅಲಿಯಾಸಿಮ್ ಅವರನ್ನು ಎದುರಿಸಲಿದ್ದಾರೆ.