ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇತಿಹಾಸ ನಿರ್ಮಿಸುವ ಸನಿಹ ಭಾರತದ ಯೂಕಿ ಭಾಂಬ್ರಿ; ಯುಎಸ್‌ ಓಪನ್‌ ಡಬಲ್ಸ್‌ನಲ್ಲಿ ಸೆಮಿ ಪ್ರವೇಶ

ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಸಾಧಿಸಿದ ಭಾಂಬ್ರಿ ಜೋಡಿ ದ್ವಿತೀಯ ಸೆಟ್‌ನಲ್ಲಿ ಟ್ರೈ ಬ್ರೇಕರ್‌ನಲ್ಲಿ ಸೋಲು ಕಂಡಿತು. ಆದರೆ ಮೂರನೇ ಸೆಟ್‌ನಲ್ಲಿ ಮತ್ತೆ ಹಿಡಿತ ಸಾಧಿಸಿ ಪಂದ್ಯವನ್ನು ಜಯಿಸಿತು. ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಯೂಕಿ ಮತ್ತು ಮೈಕೆಲ್ ಆರನೇ ಶ್ರೇಯಾಂಕಿತ ಬ್ರಿಟನ್‌ನ ನೀಲ್ ಸ್ಕುಪ್ಸ್ಕಿ ಮತ್ತು ಜೋ ಸಾಲಿಸ್‌ಬರಿ ಅವರನ್ನು ಎದುರಿಸಲಿದ್ದಾರೆ.

US Open 2025: ಮೊದಲ ಗ್ರ್ಯಾಂಡ್ ಸ್ಲಾಮ್ ಸೆಮಿಗೆ ಯೂಕಿ ಭಾಂಬ್ರಿ

-

Abhilash BC Abhilash BC Sep 4, 2025 10:53 AM

ನ್ಯೂಯಾರ್ಕ್‌: ಭಾರತದ ಮಾಜಿ ಸಿಂಗಲ್ಸ್‌ ನಂ. 1 ಆಟಗಾರ ಯೂಕಿ ಭಾಂಬ್ರಿ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಗೆಲುವಿನ ಸನಿಹದಲ್ಲಿದ್ದಾರೆ. 33 ವರ್ಷದ ಯೂಕಿ ಭಾಂಬ್ರಿ(Yuki Bhambri) ತಮ್ಮ ನ್ಯೂಜಿಲೆಂಡ್ ಜತೆಗಾರ ಮೈಕಲ್‌ ವೇನಸ್‌(Michael Venus) ಜತೆ ಯುಎಸ್ ಓಪನ್‌(US Open 2025) ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಯೂಕಿ ಕಳೆದ ವರ್ಷ ಫ್ರೆಂಚ್ ಓಪನ್‌, ವಿಂಬಲ್ಡನ್‌ನಲ್ಲಿ 3ನೇ ಸುತ್ತು ತಲುಪಿದ್ದರು. ಇದೀಗ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್ ಸೆಮಿಗೆ ಲಗ್ಗೆಯಿಟ್ಟಿರುವ ಅವರು ಐತಿಹಾಸಿಕ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

13 ನೇ ಶ್ರೇಯಾಂಕಿತ ಇಂಡೋ-ಕಿವೀಸ್‌ ಜೋಡಿ, ಗುರುವಾರ ನಡೆದ ಮೂರು ಸೆಟ್‌ಗಳ ಕಠಿಣ ಹೋರಾಟದಲ್ಲಿ 11 ನೇ ಶ್ರೇಯಾಂಕಿತ ರಾಜೀವ್ ರಾಮ್ ಮತ್ತು ನಿಕೋಲಾ ಮೆಟ್ಕಿಕ್ ಜೋಡಿಯನ್ನು 6-3, 6-7 (6), 6-3 ಅಂತರದಿಂದ ಸೋಲಿಸಿತು. ಎರಡು ಗಂಟೆ 37 ನಿಮಿಷಗಳ ಈ ಹೋರಾಟದಲ್ಲಿ ಭಾಂಬ್ರಿ ಮತ್ತು ವೀನಸ್ ರೋಮಾಂಚಕ ಹೋರಾಟ ನಡೆಸಿದರು.

ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಸಾಧಿಸಿದ ಭಾಂಬ್ರಿ ಜೋಡಿ ದ್ವಿತೀಯ ಸೆಟ್‌ನಲ್ಲಿ ಟ್ರೈ ಬ್ರೇಕರ್‌ನಲ್ಲಿ ಸೋಲು ಕಂಡಿತು. ಆದರೆ ಮೂರನೇ ಸೆಟ್‌ನಲ್ಲಿ ಮತ್ತೆ ಹಿಡಿತ ಸಾಧಿಸಿ ಪಂದ್ಯವನ್ನು ಜಯಿಸಿತು. ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಯೂಕಿ ಮತ್ತು ಮೈಕೆಲ್ ಆರನೇ ಶ್ರೇಯಾಂಕಿತ ಬ್ರಿಟನ್‌ನ ನೀಲ್ ಸ್ಕುಪ್ಸ್ಕಿ ಮತ್ತು ಜೋ ಸಾಲಿಸ್‌ಬರಿ ಅವರನ್ನು ಎದುರಿಸಲಿದ್ದಾರೆ.

2018 ರಲ್ಲಿ ಯುಎಸ್ ಓಪನ್‌ನ ಪ್ರಧಾನ ಡ್ರಾದಲ್ಲಿ ಕೊನೆಯ ಬಾರಿಗೆ ಸಿಂಗಲ್ಸ್ ಆಡಿದ್ದ ಯೂಕಿ, ಇದೀಗ ಡಬಲ್ಸ್‌ನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಅವರ ಬಹುದಿನಗಳ ಕನಸು ನನಸಾಗಿಸಲು ಎರಡು ಹೆಜ್ಜೆ ದೂರದಲ್ಲಿದ್ದಾರೆ.

ಇದನ್ನೂ ಓದಿ US Open 2025: ಸೆಮಿ ಫೈನಲ್‌ ಪ್ರವೇಶಿಸಿದ ಒಸಾಕಾ, ಅನಿಸಿಮೊವಾ