ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯ ಅರ್ಧಶತಕ ಸಿಡಿಸಿದ ಸೂರ್ಯವಂಶಿ

Vaibhav Sooryavanshi: 15 ವರ್ಷದ ಆಟಗಾರ ಎಡಗೈ ವೇಗಿ ದುಲಾಜ್ ಸಮುದಿತಾ ವಿರುದ್ಧ ಸಿಕ್ಸರ್ ಬಾರಿಸುವ ಮೂಲಕ ಈ ಮೈಲಿಗಲ್ಲು ತಲುಪಿದರು, ಇದು ಭಾರತ ಎ ತಂಡದ ಪರ ಅವರ ಮೊದಲ ಅರ್ಧಶತಕವಾಗಿದೆ. ಸರಣಿಗೆ ಬರುವ ಮುನ್ನ ಸೂರ್ಯವಂಶಿ ಮೇಲೆ ಹೆಚ್ಚಿನ ಗಮನ ಹರಿಸಲಾಗಿತ್ತು. ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಕ್ಕಾಗಿ ಭಾರತ ಸೀನಿಯರ್ ತಂಡಕ್ಕೆ ಕರೆ ಬಂದ ನಂತರ ಈ ಯುವಕ ಗಮನ ಸೆಳೆದಿದ್ದರು. ಪಂದ್ಯದಲ್ಲಿ ಅಂತಿಮವಾಗಿ 29 ಎಸೆತಗಳಲ್ಲಿ 94 ರನ್ ಗಳಿಸಿ ಔಟಾದರು.

ಸಿಕ್ಸರ್‌, ಬೌಂಡರಿ ಮೂಲಕವೇ ಅರ್ಧಶತಕ ಸಿಡಿಸಿದ ಸೂರ್ಯವಂಶಿ

Vaibhav Sooryavanshi -

Abhilash BC
Abhilash BC Jun 21, 2026 12:30 PM

ದಂಬುಲ್ಲಾ, ಜೂ.21: ಇಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಎ ಪರ ವೈಭವ್ ಸೂರ್ಯವಂಶಿ ಶ್ರೀಲಂಕಾ ಎ ವಿರುದ್ಧ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ವಿಸ್ಫೋಟಕ ಬ್ಯಾಟಿಂಗ್‌ ನಡೆಸಿದ ಅವರು 94 ರನ್‌ ಗಳಿಸಿ ಕೇವಲ 6 ಅಂತರದಿಂದ ಶತಕ ವಂಚಿತರಾದರು.

ಸೂರ್ಯವಂಶಿ 11 ಎಸೆತಗಳ ಮೂಲಕ ಶತಕ ಬಾರಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆ ನಿರ್ಮಿಸಿದರು. ಇದುವರೆಗೂ ಈ ದಾಖಲೆ ಶ್ರೀಲಂಕಾದ ಕೌಶಲ್ಯ ವೀರರತ್ನೆ ಹೆಸರಿನಲ್ಲಿತ್ತು. 2005 ರಲ್ಲಿ ಅವರು 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಸೂರ್ಯವಂಶಿ ದಾಖಲೆಯ ಅರ್ಧಶತಕ ತಲುಪಿದಾಗ ತಲಾ ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದರು.



15 ವರ್ಷದ ಆಟಗಾರ ಎಡಗೈ ವೇಗಿ ದುಲಾಜ್ ಸಮುದಿತಾ ವಿರುದ್ಧ ಸಿಕ್ಸರ್ ಬಾರಿಸುವ ಮೂಲಕ ಈ ಮೈಲಿಗಲ್ಲು ತಲುಪಿದರು, ಇದು ಭಾರತ ಎ ತಂಡದ ಪರ ಅವರ ಮೊದಲ ಅರ್ಧಶತಕವಾಗಿದೆ. ಸರಣಿಗೆ ಬರುವ ಮುನ್ನ ಸೂರ್ಯವಂಶಿ ಮೇಲೆ ಹೆಚ್ಚಿನ ಗಮನ ಹರಿಸಲಾಗಿತ್ತು. ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಕ್ಕಾಗಿ ಭಾರತ ಸೀನಿಯರ್ ತಂಡಕ್ಕೆ ಕರೆ ಬಂದ ನಂತರ ಈ ಯುವಕ ಗಮನ ಸೆಳೆದಿದ್ದರು. ಪಂದ್ಯದಲ್ಲಿ ಅಂತಿಮವಾಗಿ 29 ಎಸೆತಗಳಲ್ಲಿ 94 ರನ್ ಗಳಿಸಿ ಔಟಾದರು.

ಲಂಕಾ ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ಭಾರತ ಸೂಪರ್ ಓವರ್‌ನಲ್ಲಿ ಸೋತಾಗ, ಶ್ರೀಲಂಕಾ ಆಟಗಾರರು ವೈಭವ್ ಅವರನ್ನು ಗುರಿಯಾಗಿರಿಸಿಕೊಂಡು ಟೀಕಿಸಿದ್ದರು. ಮಾತ್ರವಲ್ಲ, ‘ಇದು ಐಪಿಎಲ್ ಅಲ್ಲ, ಮನೆಗೆ ಹೋಗು’ ಎಂದು ವೈಭವ್ ಅವರ ಕಾಲೆಳೆದಿದ್ದರು. ವೇಳೆ ತಾಳ್ಮೆ ಕಳೆದುಕೊಂಡಿದ್ದ ವೈಭವ್ ಲಂಕಾ ಆಟಗಾರನ ಮೇಲೆ ಹಲ್ಲೆಗೂ ಮುಂದಾಗಿದ್ದರು.

ಅಂದು ಅವಮಾನಿಸಿದ್ದ ಸಿಟ್ಟಿನಲ್ಲೇ ಫೈನಲ್‌ನಲ್ಲಿ ಆಡಲಿಳಿದ ಸೂರ್ವಂಶಿ ತನ್ನ ಸ್ಪೋಟಕ ಬ್ಯಾಟಿಂಗ್‌ ಮೂಲಕ ಲಂಕಾ ಬೌಲರ್‌ಗಳ ಚಳಿ ಬಿಡಿಸಿದರು. ಬರೋಬ್ಬರಿ 8 ಸಿಕ್ಸರ್‌ ಮತ್ತು 10 ಬೌಂಡರಿ ಚಚ್ಚಿದರು.