ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಕದಿನ ಕ್ರಿಕೆಟ್‌ನಲ್ಲಿ 15 ಸಾವಿರ ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

Virat Kohli: 15,000 ರನ್‌ಗಳ ಗಡಿ ತಲುಪಲು ಇನ್ನೂ ಒಂಬತ್ತು ರನ್‌ಗಳ ಅಗತ್ಯವಿದ್ದಾಗಲೂ ಅವರು ಆಕ್ರಮಣಕಾರಿ ಆಟವನ್ನೇ ಮುಂದುವರಿಸಿದರು. ಸತತ ಬೌಂಡರಿಗಳ ಮೂಲಕ 50 ರಿಂದ 59 ರನ್‌ಗಳನ್ನು ಗಳಿಸಿ ಮಹತ್ವದ ಮೈಲಿಗಲ್ಲನ್ನು ತಲುಪಿದರು. ಕೊಹ್ಲಿ ಗೌರವ ಸೂಚಕವಾಗಿ ತೆಂಡೂಲ್ಕರ್ ಅವರತ್ತ ಎರಡೂ ಕೈಗಳನ್ನು ಎತ್ತಿ ತೋರಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ 15 ಸಾವಿರ ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

Virat Kohli -

Abhilash BC
Abhilash BC Sep 27, 2026 8:53 PM

ತಿರುವನಂತಪುರಂ, ಸೆ.27: ಟೀಮ್‌ ಇಂಡಿಯಾದ ಅನುಭವಿ ಆಟಗಾರ ವಿರಾಟ್‌ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಬಳಿಕ ಏಕದಿನದಲ್ಲಿ 15 ಸಾವಿರ ರನ್‌ ಪೂರೈಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ಭಾನುವಾರ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 59 ರನ್‌ ಪೂರೈಸುವ ಮೂಲಕ ಈ ಸಾಧನೆಗೈದರು. ಅಗ್ರಸ್ಥಾನದಲ್ಲಿರುವ ಸಚಿನ್‌ ತೆಂಡೂಲ್ಕರ್, 1989 ರಿಂದ 2012 ರವರೆಗೆ ಭಾರತಕ್ಕಾಗಿ 463 ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ.



ಕೊಹ್ಲಿ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 15,000 ರನ್‌ಗಳ ಗಡಿ ತಲುಪಲು ಇನ್ನೂ ಒಂಬತ್ತು ರನ್‌ಗಳ ಅಗತ್ಯವಿದ್ದಾಗಲೂ ಅವರು ಆಕ್ರಮಣಕಾರಿ ಆಟವನ್ನೇ ಮುಂದುವರಿಸಿದರು. ಸತತ ಬೌಂಡರಿಗಳ ಮೂಲಕ 50 ರಿಂದ 59 ರನ್‌ಗಳನ್ನು ಗಳಿಸಿ ಮಹತ್ವದ ಮೈಲಿಗಲ್ಲನ್ನು ತಲುಪಿದರು. ಕೊಹ್ಲಿ ಗೌರವ ಸೂಚಕವಾಗಿ ತೆಂಡೂಲ್ಕರ್ ಅವರತ್ತ ಎರಡೂ ಕೈಗಳನ್ನು ಎತ್ತಿ ತೋರಿಸಿದರು. ಬಳಿಕ ತಿರುವನಂತಪುರದ ಪ್ರೇಕ್ಷಕರತ್ತ ತಿರುಗಿ, ಅವರು ಎದ್ದು ನಿಂತು ನೀಡಿದ ಅಭಿನಂದನೆಯನ್ನು (ಸ್ಟ್ಯಾಂಡಿಂಗ್ ಓವೇಶನ್) ಸ್ವೀಕರಿಸಿದರು.

ಜಸ್ಟಿನ್ ಗ್ರೀವ್ಸ್ ಶತಕ; ಭಾರತಕ್ಕೆ ಬೃಹತ್‌ ಮೊತ್ತದ ಸವಾಲೊಡ್ಡಿದ ವೆಸ್ಟ್‌ ಇಂಡೀಸ್‌

ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 295 ರನ್‌ ಬಾರಿಸಿತು. ಆರಂಭಿಕರಾದ ಜಾನ್ ಕ್ಯಾಂಪ್‌ಬೆಲ್ ಮತ್ತು ಜಸ್ಟಿನ್ ಗ್ರೀವ್ಸ್ ಸೊಗಸಾದ ಬ್ಯಾಟಿಂಗ್‌ ಮೂಲಕ ಉತ್ತಮ ಅಡಿಪಾಯ ಹಾಕಿದರು. 20 ಓವರ್‌ಗಳ ತನಕ ಭಾರತೀಯ ಬೌಲರ್‌ಗಳನ್ನು ಕಾಡಿದ ಈ ಜೋಡಿ ಮೊದಲ ವಿಕೆಟ್‌ಗೆ 135 ರನ್‌ ಒಟ್ಟುಗೂಡಿಸಿತು.

ಸ್ಪಿನ್ನರ್ ಕುಲ್ದೀಪ್ ಯಾದವ್ ಈ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಕಿತ್ತರು. ಕನ್ನಡಿಗ ಪ್ರಸಿದ್ಧ್‌ ಕೃಷ್ಣ(60 ಕ್ಕೆ 2) ಮತ್ತು ನಿತೀಶ್‌ ಕುಮಾರ್‌ ರೆಡ್ಡಿ(45ಕ್ಕೆ 1) ವಿಕೆಟ್‌ ಪಡೆದರು.