ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಬ್ಯಾಟ್ಸ್‌ಮನ್‌ ರೀತಿ ಯೋಚನೆ ಮಾಡಿʼ: ಗಂಭೀರ್‌ ಸಲಹೆಯನ್ನು ರಿವೀಲ್‌ ಮಾಡಿದ ರವೀಂದ್ರ ಜಡೇಜಾ!

Ravindra Jadeja on Gautam Gmabhir: ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ನೀಡಿದ್ದ ಸಲಹೆಯನ್ನು ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ರಿವೀಲ್‌ ಮಾಡಿದ್ದಾರೆ. ಪೂರ್ಣ ಪ್ರಮಾಣದ ಬ್ಯಾಟ್ಸ್‌ಮನ್‌ ರೀತಿ ಆಲೋಚನೆ ಮಾಡಿ ಆರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ ಎಂದು ಗಂಭೀರ್‌ ಹೇಳಿದ್ದಾರೆಂದು ಜಡೇಜಾ ರಿವೀಲ್‌ ಮಾಡಿದ್ದಾರೆ.

ಗೌತಮ್‌ ಗಂಭೀರ್‌ ಸಲಹೆಯನ್ನು ರಿವೀಲ್‌ ಮಾಡಿದ ಜಡೇಜಾ!

ತಮ್ಮ ಬ್ಯಾಟಿಂಗ್‌ ಕ್ರಮಾಂಕದ ಬದಲಾವಣೆಯ ಶ್ರೇಯ ಗಂಭೀರ್‌ಗೆ ಸಲ್ಲಬೇಕೆಂದ ಜಡೇಜಾ. -

Profile Ramesh Kote Oct 14, 2025 5:20 PM

ನವದೆಹಲಿ: ಹೊಸ ಬ್ಯಾಟಿಂಗ್‌ ಕ್ರಮಾಂಕಕ್ಕೆ ತಾನು ಹೊಂದಿಕೊಂಡಿರುವುದರ ಶ್ರೇಯ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ಗೆ (Gautam Gambhir) ಸಲ್ಲಬೇಕೆಂದು ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ತಿಳಿಸಿದ್ದಾರೆ. ಆರನೇ ಕ್ರಮಾಂಕಕ್ಕೆ ಹೋಗಿದ್ದರಿಂದ ಪೂರ್ಣ ಪ್ರಮಾಣದ ಬ್ಯಾಟ್ಸ್‌ಮನ್‌ ರೀತಿ ಯೋಚನೆ ಮಾಡಬೇಕೆಂದು ಗಂಭೀರ್‌ ತಿಳಿಸಿದ್ದಾರೆ ಎಂಬ ಮಾತನ್ನು ಎಡಗೈ ಬ್ಯಾಟ್ಸ್‌ಮನ್‌ ರಿವೀಲ್‌ ಮಾಡಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ದದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ (IND vs WI) ರವೀಂದ್ರ ಜಡೇಜಾ ಆರನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ.

ರವೀಂದ್ರ ಜಡೇಜಾ ಅವರ ಆಲ್‌ರೌಂಡ್‌ ಆಟದ ಬಲದಿಂದ ಭಾರತ ತಂಡ ಮಂಗಳವಾರ ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಭಾರತ ತಂಡ 2-0 ಅಂತರದಲ್ಲಿ ಟೆಸ್ಟ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ರವೀಂದ್ರ ಜಡೇಜಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಹಮದಾಬಾದ್‌ ಟೆಸ್ಟ್‌ ಪ್ರಥಮ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಅಜೇಯ 104 ರನ್‌ಗಳನ್ನು ಬಾರಿಸಿದ್ದರು ಹಾಗೂ ಎರಡೂ ಪಂದ್ಯಗಳಿಂದ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

IND vs WI 2nd Test: ವಿಂಡೀಸ್‌ ಟೆಸ್ಟ್: ಭಾರತದ ಕ್ಲೀನ್ ಸ್ವೀಪ್ ಪರಾಕ್ರಮ

"ಕಳೆದ ಐದರಿಂದ ಆರು ತಿಂಗಳುಗಳಿಂದ ನಾವು ಯಾವ ಬಗೆಯ ಕ್ರಿಕೆಟ್‌ ಆಡುತ್ತಿದ್ದೇವೆಂದು ನಮಗೆ ತಿಳಿದಿದೆ. ಇದು ತಂಡದ ಪಾಲಿಗೆ ಶುಭ ಸಂಕೇತ ಹಾಗೂ ನಾವು ಇದನ್ನೇ ದೀರ್ಘಾವಧಿ ಮಾಡಿಕೊಂಡು ಬರುತ್ತಿದ್ದೇವೆ," ಎಂದು ರವೀಂದ್ರ ಜಡೇಜಾ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ತಿಳಿಸಿದ್ದಾರೆ.



"ನಾನು ಆರನೇ ಕ್ರಮಾಂಕದಲ್ಲಿ ಆಡಬೇಕೆಂದು ಗೌತಿ ಭಾಯ್‌ (ಗೌತಮ್‌ ಗಂಭೀರ್‌) ತಿಳಿಸಿದ್ದಾರೆ. ಹಾಗಾಗಿ ನಾನು ಪೂರ್ಣ ಪ್ರ,ಮಾಣದ ಬ್ಯಾಟ್ಸ್‌ಮನ್‌ ರೀತಿ ಯೋಚಿಸುತ್ತಿದ್ದೇನೆ ಹಾಗೂ ಇದು ನನಗೆ ಕೆಲಸ ಮಾಡುತ್ತಿದೆ. ಕಳೆದ ಹಲವು ವರ್ಷಗಳಿಂದ ನಾನು ಎಂಟನೇ, ಒಂಬತ್ತನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಡಿದ್ದೇನೆ. ಆದರೆ, ಇದೀಗ ಆರನೇ ಕ್ರಮಾಂಕದಲ್ಲಿ ಆಡುತ್ತಿರುವ ಕಾರಣ, ತುಂಬಾ ವ್ಯತ್ಯಾಸ ಕಾಣುತ್ತಿದೆ," ಎಂದು ಜಡ್ಡು ಹೇಳಿದ್ದಾರೆ.

IND vs WI: ಭಾರತ-ವಿಂಡೀಸ್‌ ಟೆಸ್ಟ್ ಸರಣಿಯ ಪ್ರಶಸ್ತಿ ವಿಜೇತರು, ಗೆದ್ದ ಬಹುಮಾನದ ಪಟ್ಟಿ ಇಲ್ಲಿದೆ

ತಂಡದ ಗೆಲುವಿಗೆ ಕೊಡುಗೆ ನೀಡುವುದು ಮುಖ್ಯ

"ಬ್ಯಾಟಿಂಗ್ ಮತ್ತು ಬೌಲಿಂಗ್ ವಿಷಯದಲ್ಲಿ ನಾವು ಒಂದು ತಂಡವಾಗಿ ಅದ್ಭುತ ಕೆಲಸವನ್ನು ಮಾಡುತ್ತಿದ್ದೇವೆ. ಬ್ಯಾಟಿಂಗ್‌ಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಮಧ್ಯದಲ್ಲಿ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೇನೆ. ನಿಜ ಹೇಳಬೇಕೆಂದರೆ, ನಾನು ದಾಖಲೆಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನನ್ನ ತಂಡವನ್ನು ಗೆಲ್ಲಲು ಸಹಾಯ ಮಾಡಲು ನಾನು ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಕೊಡುಗೆ ನೀಡುವುದರ ಮೇಲೆ ಮಾತ್ರ ಗಮನ ಹರಿಸುತ್ತೇನೆ. ನಾನು ಯಾವಾಗಲೂ ಅದನ್ನು ಮಾಡಲು ಎದುರು ನೋಡುತ್ತೇನೆ. ನಾನು ಬ್ಯಾಟ್ ಮತ್ತು ಬಾಲ್‌ನಲ್ಲಿ ಪ್ರದರ್ಶನ ನೀಡದಿದ್ದರೆ, ಅದು ಆಟಗಾರನಾಗಿ ನನ್ನ ಮೌಲ್ಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ಅವರು ತಿಳಿಸಿದ್ದಾರೆ.