ಡೈವಿಂಗ್ ಕ್ಯಾಚ್ ಹಿಡಿದ ಶ್ರೇಯಾಂಕ ಪಾಟೀಲ್; ವಿಡಿಯೊ ವೈರಲ್
Shreyanka Patil: ಎಡಗೈ ಸ್ಪಿನ್ನರ್ ಶ್ರೀ ಚರಣಿ ಎಸೆದ ಹದಿನೈದನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಪಾಕ್‌ನ ರಮೀನ್ ಶಮೀಮ್ ಆಫ್ ಸ್ಟಂಪ್‌ನ ಹೊರಗೆ ಚೆಂಡನ್ನು ಬಾರಿಸಿದರು. ಈ ವೇಳೆ ಶ್ರೇಯಾಂಕ ಡೈವಿಂಗ್ ಮೂಲ ಕ್ಯಾಚ್ ಪಡೆದರು. ಈ ಕ್ಯಾಚ್ ಕಂಡ ಪ್ರೇಕ್ಷಕರು ಒಂದು ಕ್ಷಣ ದಂಗಾದರು. ಮಾತ್ರವಲ್ಲದೆ ಕಾಮೆಂಟ್ರಿ ಮಾಡುತ್ತಿದ್ದವರೂ ಕೂಡ ಸುಂದರವಾಗಿ ವರ್ಣಿಸಿದರು.
shreyanka patil -
ಬರ್ಮಿಂಗ್‌ಹ್ಯಾಮ್, ಜೂ.15: ಇಲ್ಲಿ ನಡೆದಿದ್ದ ಐಸಿಸಿ ಮಹಿಳಾ ಟಿ20 ವಿಶ್ವಕಪ್(India Women vs Pakistan Women)ನ ಪಾಕಿಸ್ತಾನ ವಿರುದ್ಧದ ಗ್ರೂಪ್ ಎ ಪಂದ್ಯದಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್(Shreyanka Patil) ಹಿಡಿದ ಅದ್ಭುತ ಡೈವಿಂಗ್ ಕ್ಯಾಚ್ ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಐಸಿಸಿ ಕೂ ಈ ವಿಡಿಯೊ ಹಂಚಿಕೊಂಡಿದ್ದು 'ಭಾರತಕ್ಕೆ ಮತ್ತೊಂದು ವಿಕೆಟ್ ತರಲು ಶ್ರೇಯಂಕಾ ಪಾಟೀಲ್ ವಾಯುಯಾನಕ್ಕೆ ಇಳಿದಿದ್ದಾರೆ" ಎಂದು ಬರದುಕೊಂಡಿದೆ.
ಎಡಗೈ ಸ್ಪಿನ್ನರ್ ಶ್ರೀ ಚರಣಿ ಎಸೆದ ಹದಿನೈದನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಪಾಕ್‌ನ ರಮೀನ್ ಶಮೀಮ್ ಆಫ್ ಸ್ಟಂಪ್‌ನ ಹೊರಗೆ ಚೆಂಡನ್ನು ಬಾರಿಸಿದರು. ಈ ವೇಳೆ ಶ್ರೇಯಾಂಕ ಡೈವಿಂಗ್ ಮೂಲ ಕ್ಯಾಚ್ ಪಡೆದರು. ಈ ಕ್ಯಾಚ್ ಕಂಡ ಪ್ರೇಕ್ಷಕರು ಒಂದು ಕ್ಷಣ ದಂಗಾದರು. ಮಾತ್ರವಲ್ಲದೆ ಕಾಮೆಂಟ್ರಿ ಮಾಡುತ್ತಿದ್ದವರೂ ಕೂಡ ಸುಂದರವಾಗಿ ವರ್ಣಿಸಿದರು.
That's an absolute blinder! 🤯#ShreyankaPatil pulls off a stunning catch at backward point as India tighten their grip on the match.🇮🇳
— Star Sports (@StarSportsIndia) June 14, 2026
ICC Women's #T20WorldCup 2026 | #INDvPAK | LIVE NOW 👉 https://t.co/njSue0M5uR pic.twitter.com/7mbJXIu3uY
ಬೌಲಿಂಗ್‌ನಲ್ಲಿ ಶ್ರೇಯಾಂಕ ಮೂರು ಓವರ್ ಬೌಲಿಂಗ್ ನಡೆಸಿದರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಬ್ಯಾಟಿಂಗ್‌ನಲ್ಲಿ ಒಂದು ಎಸೆತದಿಂದ ಅಜೇಯ ಒಂದು ರನ್ ಗಳಿಸಿದರು.
ಪಾಕಿಸ್ತಾನ ಕ್ರಿಕೆಟಿಗರೊಂದಿಗಿನ ನೋ ಹ್ಯಾಂಡ್‌ಶೇಕ್ ಪಾಲಿಸಿಯನ್ನು ಹಾಲಿ ವಿಶ್ವಕಪ್‌ನಲ್ಲೂ ಬಿಸಿಸಿಐ ಮುಂದುವರಿಸಿತು. ಪಾಕಿಸ್ತಾನ ವಿರುದ್ಧದ ಪಂದ್ಯದ ಟಾಸ್ ಪ್ರಕ್ರಿಯೆ ನಂತರ ಫಾತಿಮಾ ಸನಾ ಅವರೊಂದಿಗೆ ಹಸ್ತಲಾಘವ ಮಾಡದೆ ಹರ್ಮಾನ್‌ಪ್ರೀತ್ ತೆರಳಿದರು. ಪಂದ್ಯ ಮುಕ್ತಾಯದ ಬಳಿಕವೂ ಎರಡೂ ತಂಡದ ಆಟಗಾರ್ತಿಯರು ಹಸ್ತಲಾಘವ ಮಾಡಲಿಲ್ಲ.
ಮಿಥಾಲಿ ರಾಜ್ ವಿಶ್ವಕಪ್ ದಾಖಲೆ ಹಿಂದಿಕ್ಕಿದ ನಾಯಕಿ ಹರ್ಮನ್‌ಪ್ರೀತ್ ಕೌರ್
ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 170 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು 17 ಓವರ್‌ಗಳಲ್ಲಿ 106 ರನ್‌ಗಳಿಗೆ ಆಲೌಟ್ ಆಯಿತು. ಅರ್ಧಶತಕ ಬಾರಿಸಿದ ಮಂಧನಾ 9 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 68 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ: 6 ವಿಕೆಟ್‌ಗೆ 170 (ಶೆಫಾಲಿ ವರ್ಮ 6, ಸ್ಮತಿ ಮಂದನಾ 68, ಜೆಮೀಮಾ ರೋಡ್ರಿಗಸ್ 1, ಹರ್ಮಾನ್‌ಪ್ರೀತ್ 36, ಭಾರತಿ 1, ರಿಚಾ ಘೋಷ್ 34, ದೀಪ್ತಿ 12*, ಶ್ರೇಯಾಂಕಾ ಪಾಟೀಲ್ 1*, ಫಾತಿಮಾ 33ಕ್ಕೆ 2, ಸಾದಿಯಾ 41ಕ್ಕೆ 2). ಪಾಕಿಸ್ತಾನ: 17 ಓವರ್‌ಗಳಲ್ಲಿ 106 (ಮುನೀಬಾ 41, ಗುಲ್ ಫಿರೋಜಾ 12, ಆಯೇಷಾ 12, ಸೈರಾ 2, ಪರ್ವೈಜಾ 7, ದೀಪ್ತಿ ಶರ್ಮ 10ಕ್ಕೆ 5, ಶ್ರೀಚರಣಿ 21ಕ್ಕೆ 3).