Shubman Gill: ಏಷ್ಯಾಕಪ್‌ನಲ್ಲಿ ಗಿಲ್‌ಗೆ ಉಪನಾಯಕ ಪಟ್ಟ ಕಟ್ಟಿದ್ದೇಕೆ?
ರೋಹಿತ್ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಅನುಮಾನ ಎನಿಸಿದ್ದು, ವರ್ಷಾಂತ್ಯಕ್ಕೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. ಅತ್ತ ಸೂರ್ಯಗೆ ಈಗ 34 ವರ್ಷ. ತುಂಬಾ ವರ್ಷ ಆಡುವ ಸಾಧ್ಯತೆಯಿಲ್ಲ. ಈ ಎರಡೂ ಮಾದರಿಯಲ್ಲಿ ಉಪನಾಯಕರಾಗಿರುವ ಗಿಲ್, ಮುಂದೆ ನಾಯಕರಾಗಿ ನೇಮಕಗೊಳ್ಳಲಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ನವದೆಹಲಿ: ಏಷ್ಯಾಕಪ್‌ನ 15 ಸದಸ್ಯರ(Asia Cup 2025) ಭಾರತ ತಂಡವನ್ನು ಪ್ರಕಟಿಸಿದಾಗ, ಶುಭ್‌ಮನ್ ಗಿಲ್(Shubman Gill)ಗೆ ಉಪನಾಯಕ ಸ್ಥಾನ ನೀಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಗಿಲ್ ಅವರಿಗೆ ಉಪನಾಯಕ ಪಟ್ಟ ಕಟ್ಟಿದ್ದೇಕೆ ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ.
ಹೌದು ಮೂರು ಮಾದರಿಯಲ್ಲೂ ಒಬ್ಬ ನಾಯಕನೆಂಬ ಬಿಸಿಸಿಐ ನೀತಿಯ ಭಾಗವಾಗಿ ಗಿಲ್‌ರನ್ನು ಟಿ20 ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ. 25 ವರ್ಷದ ಶುಭ್‌ಮನ್ ಗಿಲ್ ಭವಿಷ್ಯದಲ್ಲಿ ಮೂರೂ ಮಾದರಿ ತಂಡಕ್ಕೂ ಅವರನ್ನೇ ನಾಯಕನಾಗಿ ನೇಮಿಸುವ ಸಾಧ್ಯತೆಯಿದೆ. ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ತಮ್ಮ ಚೊಚ್ಚಲ ನಾಯಕತ್ವದಲ್ಲೇ ಗಿಲ್ ಮಿಂಚಿದ್ದರು. ಹೀಗಾಗಿ ಬಿಸಿಸಿಐ ಅವರ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದೆ.
ರೋಹಿತ್ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಅನುಮಾನ ಎನಿಸಿದ್ದು, ವರ್ಷಾಂತ್ಯಕ್ಕೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. ಅತ್ತ ಸೂರ್ಯಗೆ ಈಗ 34 ವರ್ಷ. ತುಂಬಾ ವರ್ಷ ಆಡುವ ಸಾಧ್ಯತೆಯಿಲ್ಲ. ಈ ಎರಡೂ ಮಾದರಿಯಲ್ಲಿ ಉಪನಾಯಕರಾಗಿರುವ ಗಿಲ್, ಮುಂದೆ ನಾಯಕರಾಗಿ ನೇಮಕಗೊಳ್ಳಲಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಗಿಲ್ ಆಗಮನ ತಂಡಕ್ಕೆ ಬಲ ತುಂಬಿದೆ
ಶುಭಮನ್ ಗಿಲ್ ಮರಳಿ ಟಿ20 ತಂಡಕ್ಕೆ ಮರಳಿದ್ದು ಸಂತಸ ಉಂಟು ಮಾಡಿದೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಅವರು ಸುದಿಗೋಷ್ಠಿಯಲ್ಲಿ ತಿಳಿಸಿದರು. "ಗಿಲ್ ಟೆಸ್ಟ್ ಸರಣಿಗಳು ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರತರಾಗಿದ್ದರಿಂದ ಭಾರತಕ್ಕಾಗಿ ಟಿ20 ಪಂದ್ಯಗಳನ್ನು ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಗಿಲ್ ಈಗ ತಂಡಕ್ಕೆ ಮರಳಿರುವುದು ಸಂತಸ ತಂದಿದೆ" ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್‌ಗಳು