INDW vs AUSW: ಇಂದಿನ ಭಾರತ-ಆಸೀಸ್ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ?
Women's cricket world cup 2025 semi final: ಸೆಮೀ ಪಂದ್ಯಕ್ಕೆ ಮಳೆ ಅಡಚಣೆ ತರುವ ಸಾಧ್ಯತೆಗಳಿವೆ. ಆದರೆ ಪಂದ್ಯಕ್ಕೆ ಮೀಸಲು ದಿನದ (ಶುಕ್ರವಾರ) ಅನುಕೂಲವಿದೆ. ಮೀಸಲು ದಿನವೂ ಫಲಿತಾಂಶ ಬಾರದಿದ್ದರೆ ಆಗ ಅಂಕಪಟ್ಟಿಯಲ್ಲಿ ಮುಂದಿರುವ ತಂಡ ಫೈನಲ್ಗೇರಲಿದೆ. ಈ ಲಾಭ ಆಸ್ಟ್ರೇಲಿಯಾಕ್ಕೆ ಸಿಗಲಿದೆ. ಅದು ಅಗ್ರಸ್ಥಾನ ಪಡೆದಿತ್ತು.
-
Abhilash BC
Oct 30, 2025 8:50 AM
ಮುಂಬೈ: ಇಂದು(ಗುರುವಾರ) ನಡೆಯುವ ಮಹಿಳಾ ವಿಶ್ವಕಪ್‌ನ ಬಿಗ್ ಸೆಮಿಫೈನಲ್(Women's cricket world cup 2025 semi final) ಪಂದ್ಯದಲ್ಲಿ ಭಾರತ(INDW vs AUSW) ತಂಡ ಹಾಲಿ ಮತ್ತು 7 ಬಾರಿಯ ಚಾಂಪಿಯನ್ ಆಸ್ಟ್ರೆಲಿಯಾ ತಂಡದ ಸವಾಲು ಎದುರಿಸಲಿದೆ. ಆದರೆ ಪಂದ್ಯಕ್ಕೆ ಭಾರೀ ಮಳೆಯ ಭೀತಿ ಎದುರಾಗಿದೆ.
ಭಾರತದಲ್ಲಿ ಚಳಿಗಾಲದ ಋತುವಿಗೆ ಮುಂಚಿತವಾಗಿ ತಡವಾಗಿ ಸುರಿಯುತ್ತಿರುವ ಮಳೆಯು ಮುಂಬೈನಲ್ಲಿ ಭಾರತದ ಕೊನೆಯ ಗುಂಪು ಹಂತದ ಪಂದ್ಯದ ಮೇಲೆ ಈಗಾಗಲೇ ಪರಿಣಾಮ ಬೀರಿತ್ತು. ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಹೈ-ವೋಲ್ಟೇಜ್ ಸೆಮಿಫೈನಲ್ ಹಣಾಹಣಿಯಲ್ಲಿಯೂ ಮಳೆ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಲೀಗ್ ಹಂತದಲ್ಲಿ ಆರಂಭಿಕ 2 ಪಂದ್ಯಗಳ ಗೆಲುವಿನ ಬಳಿಕ ಸತತ 3 ಸೋಲು ಕಂಡಿದ್ದ ಭಾರತ, ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯ ಗೆದ್ದು ಸೆಮೀಸ್ ಸ್ಥಾನ ಖಾತ್ರಿಪಡಿಸಿಕೊಂಡಿತ್ತು. ಆಸೀಸ್ ಸೋಲನ್ನೇ ಕಾಣದೆ ಸೆಮಿಫೈನಲ್ ತಪುಪಿತ್ತು. ಆಸ್ಟ್ರೇಲಯಾವನ್ನು ಸೆಮಿ ಪಂದ್ಯದಲ್ಲಿ ಯಾರು ಮಣಿಸುತ್ತಾರೋ ಅವರೇ ಫೈನಲ್‌ನಲ್ಲಿ ಗೆಲ್ಲುವುದು ಖಚಿತ ಈ ಅದೃಷ್ಟ ಕೌರ್ ಮುಂದಿದೆ. ಆದರೆ ಅದೃಷ್ಟವೂ ಜತೆಗಿರಬೇಕು.
ಇದನ್ನೂ ಓದಿ Women's World Cup: ಲಾರಾ ಭರ್ಜರಿ ಶತಕ, ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೇರಿದ ದಕ್ಷಿಣ ಆಫ್ರಿಕಾ!
ಆರಂಭಿಕ ಬ್ಯಾಟರ್ ಪ್ರತಿಕಾ ರಾವಲ್ ಗಾಯದಿಂದಾಗಿ ಸೆಮೀಸ್ಗೆ ಅಲಭ್ಯರಾಗಿರುವುದರಿಂದ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಅವರ ಸ್ಥಾನಕ್ಕೆ ಬದಲಿಯಾಗಿ ತಂಡ ಸೇರಿರುವ ಶೆಫಾಲಿ ವರ್ಮಾ ಔಟ್ ಆಫ್ ಫಾರ್ಮ್‌ನಲ್ಲಿದಾರೆ. ಹೀಗಾಗಿ 11ರ ಬಳಗದಲ್ಲಿ ಕಣಕ್ಕಿಳಿಸುವ ಖಾತ್ರಿ ಇಲ್ಲ. ಶೆಫಾಲಿ ಬಿರುಸಿನಾಟ ಎದುರಾಳಿ ಮೇಲೆ ಒತ್ತಡ ಹೇರಬಹುದಾದರೂ, ಸ್ಮೃತಿ ಮಂದನಾ ಜತೆಗೆ ಅವರ ಆರಂಭಿಕ ಜತೆಯಾಟದ ದಾಖಲೆ ಉತ್ತಮವಾಗಿಲ್ಲ. ಹೀಗಾಗಿ ಹರ್ಲೀನ್ ಡಿಯೋಲ್ಗೆ ಆರಂಭಿಕ ಆಟಗಾರ್ತಿಯಾಗಿ ಬಡ್ತಿ ನೀಡುವ ಸಾಧ್ಯತೆ ಇದೆ.
ಮಳೆ ಬಂದರೆ ಆಸೀಸ್ ಫೈನಲ್‌ಗೆ
ಸೆಮೀ ಪಂದ್ಯಕ್ಕೆ ಮಳೆ ಅಡಚಣೆ ತರುವ ಸಾಧ್ಯತೆಗಳಿವೆ. ಆದರೆ ಪಂದ್ಯಕ್ಕೆ ಮೀಸಲು ದಿನದ (ಶುಕ್ರವಾರ) ಅನುಕೂಲವಿದೆ. ಮೀಸಲು ದಿನವೂ ಫಲಿತಾಂಶ ಬಾರದಿದ್ದರೆ ಆಗ ಅಂಕಪಟ್ಟಿಯಲ್ಲಿ ಮುಂದಿರುವ ತಂಡ ಫೈನಲ್ಗೇರಲಿದೆ. ಈ ಲಾಭ ಆಸ್ಟ್ರೇಲಿಯಾಕ್ಕೆ ಸಿಗಲಿದೆ. ಅದು ಅಗ್ರಸ್ಥಾನ ಪಡೆದಿತ್ತು.