ʻಭಾರತಕ್ಕೆ ಪದಕ ನೀಡಲು ಸಿದ್ದʼ: ಮೊಹ್ಸಿನ್ ನಖ್ವಿ ಹೊಸ ನಾಟಕ!
ಪಾಕಿಸ್ತಾನ ತಂಡವನ್ನು ಮಣಿಸಿ 2025ರ ಏಷ್ಯಾ ಕಪ್ ಮುಡಿಗೇರಿಸಿಕೊಂಡ ಭಾರತ ತಂಡ 9ನೇ ಬಾರಿ ಚಾಂಪಿಯನ್ ಆಗಿತ್ತು. ಆದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಟೀಮ್ ಇಂಡಿಯಾ ನಿರಾಕರಿಸಿತ್ತು. ನಂತರ ಹೈಡ್ರಾಮಾ ನಡೆದಿತ್ತು. ಇದೀಗ ಮೊಹ್ಸಿನ್ ನಖ್ವಿ ಅವರ ಮತ್ತೊಂದು ನಾಟಕ ಬಯಲಾಗಿದೆ.