ಸ್ವಾತಂತ್ರ್ಯ ದಿನಾಚರಣೆಗೆ ಈ ಖಾದ್ಯ ಒಮ್ಮೆ ಟ್ರೈ ಮಾಡಿ
ಸ್ವಾತಂತ್ರ್ಯ ದಿನವನ್ನು ಇಡೀ ದೇಶವೇ ಅತ್ಯಂತ ಸಂಭ್ರಮದಿಂದ ಆಚರಿಸುತ್ತದೆ. ಈ ದಿನದಂದು ರಾಷ್ಟ್ರೀಯ ನಾಯಕರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸೇನಾನಿಗಳನ್ನು ಸ್ಮರಿಸಲಾಗುತ್ತದೆ. ಧ್ವಜಾರೋಹಣ, ಸಿಹಿತಿಂಡಿ ವಿತರಣೆ, ಮೆರವಣಿಗೆಯಂತ ಕಾರ್ಯಕ್ರಮದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಆಯೋಜಿಸಲಾಗುತ್ತದೆ. ಎಲ್ಲೆಡೆ ಕೇಸರಿ, ಬಿಳಿ, ಹಸಿರು ಬಣ್ಣ ರಾರಾಜಿಸುತ್ತದೆ. ನೀವು ಮನೆಯಲ್ಲಿಯೇ ಸ್ವಾತಂತ್ರ್ಯ ದಿನವನ್ನು ವಿವಿಧ ಖಾದ್ಯ ತಯಾರಿಸುವ ಮೂಲಕ ವಿಭಿನ್ನವಾಗಿ ಆಚರಿಸಬಹುದು.