ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
ಬೆಂಗಳೂರಿನ ಮಾಹೆಯಲ್ಲಿ ‘ನಶೆ ಮುಕ್ತ ಕರ್ನಾಟಕ’ ಮಹತ್ವದ ಜಾಗೃತಿ ಅಭಿಯಾನ ಉದ್ಘಾಟನೆ

‘ನಶೆ ಮುಕ್ತ ಕರ್ನಾಟಕ’ ಮಹತ್ವದ ಜಾಗೃತಿ ಅಭಿಯಾನ ಉದ್ಘಾಟನೆ

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಮಾದಕ ದ್ರವ್ಯ ನಿಗ್ರಹದಳ ಮತ್ತು ಸೈಬರ್ ಅಪರಾಧ ವಿಭಾಗವು ಮಣಿಪಾಲ್ ಫೌಂಡೇಶನ್ ಮತ್ತು ಮಾಯಾ ಫಿಲ್ಮ್ಸ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ, ‘ನಶೆ ಮುಕ್ತ ಕರ್ನಾಟಕ’ ಮಹತ್ವದ ಅಭಿಯಾನವು ನಗರದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕ್ಯಾಂಪಸ್‌ ನಲ್ಲಿ ಯಶಸ್ವಿಯಾಗಿ ಉದ್ಘಾಟಿಸ ಲಾಯಿತು.

ಬೆಂಗಳೂರಿನಲ್ಲಿ ಇದೇ ಮೊದಲು, ಮಕ್ಕಳಿಗಾಗಿ ಸಂವಾದಾತ್ಮಕ ವಿಜ್ಞಾನ ಕೇಂದ್ರ ಸ್ಥಾಪನೆ! ಪರಂ ಫೌಂಡೇಶನ್‌ನಿಂದ ಪಾರ್ಸೆಕ್ ಸಮರ್ಪಣೆ!

ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಸಂವಾದಾತ್ಮಕ ವಿಜ್ಞಾನ ಕೇಂದ್ರ ಸ್ಥಾಪನೆ!

ಅನುಭವದ ಮೂಲಕವೇ ವಿಜ್ಞಾನವನ್ನು ಅತ್ಯುತ್ತಮವಾಗಿ ಕಲಿಯಬಹುದು ಎಂಬ ನಂಬಿಕೆ ಯನ್ನು ಆಧರಿಸಿದ ಪಾರ್ಸೆಕ್, ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡ ಕಲಿಕಾ ಸ್ಥಳವಾಗಿದೆ. ಇದು ಮಕ್ಕಳಲ್ಲಿ ಕುತೂಹಲವನ್ನು ಕೆರಳಿಸಲು, ಸೃಜನಶೀಲತೆಯನ್ನು ಪ್ರೇರೇಪಿಸಲು ಮತ್ತು ವಿನೋದ, ಆಟದಿಂದಲೇ ವೈಜ್ಞಾನಿಕ ಅನ್ವೇಷಣೆ ಮಾಡಲು, ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪುವಂತೆ ವಿನ್ಯಾಸ ಗೊಳಿಸಲಾಗಿದೆ.

Special Economic Zone: ಇಟ್ಟಿಗಟ್ಟಿ ಎಲೆಕ್ಟ್ರಾನಿಕ್ ಘಟಕಗಳಿಗಾಗಿ SEZ ಘೋಷಣೆ; 28 ಎಕರೆ ವಿಶೇಷ ಆರ್ಥಿಕ ವಲಯಕ್ಕೆ ಗೆಜೆಟ್‌

ಇಟ್ಟಿಗಟ್ಟಿ ಎಲೆಕ್ಟ್ರಾನಿಕ್ ಘಟಕಗಳಿಗಾಗಿ SEZ ಘೋಷಣೆ

Pralhad Joshi: ಧಾರವಾಡದ ಇಟ್ಟಿಗಟ್ಟಿಯಲ್ಲಿ ʼಏಕಸ್ ಇನ್ಫ್ರಾದ ಹುಬ್ಬಳ್ಳಿ ಡ್ಯೂರಬಲ್ ಗೂಡ್ಸ್ ಕ್ಲಸ್ಟರ್ ಪ್ರೈವೇಟ್ ಲಿಮಿಟೆಡ್ ಪ್ರಸ್ತಾಪಿಸಿದ ಎಲೆಕ್ಟ್ರಾನಿಕ್ ಘಟಕಗಳಿಗಾಗಿ ವಿಶೇಷ ಆರ್ಥಿಕ ವಲಯ (SEZ) ವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಗೆಜೆಟ್‌ನಲ್ಲಿ ಪ್ರಕಟಿಸಿದೆ.

Yadgir News: ರಾಷ್ಟ್ರ ಮಟ್ಟದ ಎನ್‌ಕ್ಯೂಎಎಸ್‌ ಮಾನ್ಯತೆ ಪಡೆದ ಕೆಂಭಾವಿ ಆಸ್ಪತ್ರೆ; ರಾಜ್ಯಕ್ಕೆ ಎರಡನೇ ಸ್ಥಾನ

ರಾಷ್ಟ್ರ ಮಟ್ಟದ ಎನ್‌ಕ್ಯೂಎಎಸ್‌ ಮಾನ್ಯತೆ ಪಡೆದ ಕೆಂಭಾವಿ ಆಸ್ಪತ್ರೆ

Yadgir News: ಅತ್ಯುತ್ತಮ ಆಸ್ಪತ್ರೆ ನಿರ್ವಹಣೆಗಾಗಿ ರಾಷ್ಟೀಯ ಮಟ್ಟದಲ್ಲಿ ನೀಡಲಾಗುವ ನ್ಯಾಷನಲ್ ಕ್ವಾಲಿಟಿ ಅಶ್ಶುರೆನ್ಸ್ ಸ್ಟ್ಯಾಂಡರ್ಡ್ಸ್ (ಎನ್‌ಕ್ಯೂಎಎಸ್‌)ಗೆ ರಾಜ್ಯದಿಂದ ಆಯ್ಕೆಯಾಗಿರುವ ನಾಲ್ಕು ಆಸ್ಪತ್ರೆಗಳ ಪೈಕಿ ಜಿಲ್ಲೆಯ ಕೆಂಭಾವಿ ಸಮುದಾಯ ಆಸ್ಪತ್ರೆ ಎರಡನೇಯ ಸ್ಥಾನ ಪಡೆಯುವ ಮೂಲಕ ಮೈಲಿಗಲ್ಲು ಸ್ಥಾಪಿಸಿದೆ.

Director Murali Mohan: ಆಸ್ಪತ್ರೆಯಲ್ಲಿ ಮುರಳಿ ಮೋಹನ್‌ ಅಂತಿಮ ದರ್ಶನ ಪಡೆದು ಉಪೇಂದ್ರ ಭಾವುಕ

ಮುರಳಿ ಮೋಹನ್‌ ಅಂತಿಮ ದರ್ಶನ ಪಡೆದು ಉಪೇಂದ್ರ ಭಾವುಕ

Director Murali Mohan: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ ಮುಂತಾದ ಘಟಾನುಘಟಿ ನಟರಿಗೆ ಮುರಳಿ ಮೋಹನ್‌ ಆ್ಯಕ್ಷನ್‌ ಕಟ್‌ ಹೇಳಿದ್ದರು. 36 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಜೆಸಿ ರೋಡ್ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.

Biklu Shiva murder case: ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್‌ಗೆ ಕೊಂಚ ರಿಲೀಫ್‌

ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್‌ಗೆ ಕೊಂಚ ರಿಲೀಫ್‌

Byrathi Basavaraj: ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಅರುಣ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಈ ಮಧ್ಯಂತರ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ಶಾಸಕನ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್‌ ಸೂಚಿಸಿದೆ.

ರಾಷ್ಟ್ರೀಯ ವೀಲ್‌ಚೇರ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪಾರಮ್ಯ: 9ರಲ್ಲಿ 6 ಪ್ರಶಸ್ತಿ ಕರುನಾಡಿಗೆ!

ರಾಷ್ಟ್ರೀಯ ವೀಲ್‌ಚೇರ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪಾರಮ್ಯ

ಕರ್ನಾಟಕದ ಕ್ರೀಡಾಪಟುಗಳು ಅಂಕಣದಲ್ಲಿ ತಮ್ಮ ಆಟದ ಮೂಲಕ ಹೃದಯಗಳನ್ನು ಗೆದ್ದಿದ್ದಲ್ಲದೆ, ತಮ್ಮ ಸಮನ್ವಯ ಮತ್ತು ತಂಡದ ನಡುವಿನ ಸೌಹಾರ್ದತೆಯ ಕಾರಣಕ್ಕೆ ಎಲ್ಲರ ಗಮನ ಸೆಳೆದರು. ತಮ್ಮ ಪ್ರಾಯೋಜಕರಾದ ಬಲ್ಡೋಟಾ ಗ್ರೂಪ್ ಲಾಂಛನವನ್ನು ಹೊಂದಿದ್ದ ಒಂದೇ ರೀತಿಯ ಟೀ-ಶರ್ಟ್‌ಗಳನ್ನು ಧರಿಸಿದ್ದ ಕರ್ನಾಟಕ ತಂಡ ಏಕತೆ ಮತ್ತು ವೃತ್ತಿಪರತೆಯ ಗಮನಾರ್ಹ ಚಿತ್ರಣವನ್ನು ಕಟ್ಟಿಕೊಟ್ಟಿತು

ವಯಸ್ಸು ಎಂಬ ಸವಾಲು ಮೀರಿ, ಭರವಸೆಯ ದೀಪ ಹಚ್ಚಿದ ಟ್ರಸ್ಟ್‌ವೆಲ್ ಆಸ್ಪತ್ರೆ: 73 ವರ್ಷದವರ ಕಿಡ್ನಿಯನ್ನು 77 ವರ್ಷದ ವೃದ್ಧರಿಗೆ ಯಶಸ್ವಿ ಕಸಿ!

73 ವರ್ಷದವರ ಕಿಡ್ನಿಯನ್ನು 77 ವರ್ಷದ ವೃದ್ಧರಿಗೆ ಯಶಸ್ವಿ ಕಸಿ!

ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದು ಮತ್ತೊಂದು ಬಾರಿ ಸಾಬೀತಾಗಿದೆ. ಬೆಂಗಳೂರಿನ ಟ್ರಸ್ಟ್‌ ವೆಲ್‌ ಆಸ್ಪತ್ರೆಯು ವೃದ್ಧರೊಬ್ಬರಿಗೆ ಯಶಸ್ವಿ ಕಿಡ್ನಿ ಕಸಿಯನ್ನು ನಡೆಸಿದ್ದಾರೆ. ಈ ಮೂಲಕ ಅಪರೂಪದ ಮತ್ತು ಸ್ಪೂರ್ತಿದಾಯಕ ಘಟನೆಗೆ ವೈದ್ಯರು ಸಾಕ್ಷಿಯಾಗಿದ್ದು, ಅಂಗಾಂಗ ದಾನದಲ್ಲಿ ವಯಸ್ಸಿನ ಮಿತಿ ಬಗ್ಗೆ ಇರುವ ಗ್ರಹಿಕೆಗಳನ್ನು ಬದಲಿಸಿದ್ದಾರೆ.

Karnataka Rains: ಆ.19ರವರೆಗೆ ಯೆಲ್ಲೋ ಅಲರ್ಟ್‌ ಮುಂದುವರಿಕೆ; ರಾಜ್ಯದಲ್ಲಿ ಆರ್ಭಟಿಸಲಿದ್ದಾನೆ ವರುಣ!

ರಾಜ್ಯಕ್ಕೆ ಆ.19ರವರೆಗೆ ಯೆಲ್ಲೋ ಅಲರ್ಟ್‌ ಮುಂದುವರಿಕೆ!

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27°C ಮತ್ತು 20°C ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Murali Mohan: ಸ್ಯಾಂಡಲ್‌ವುಡ್‌ ನಿರ್ದೇಶಕ ಮುರಳಿ ಮೋಹನ್ ನಿಧನ

ಸ್ಯಾಂಡಲ್‌ವುಡ್‌ ನಿರ್ದೇಶಕ ಮುರಳಿ ಮೋಹನ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್. ಮುರಳಿ ಮೋಹನ್ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ ಮುಂತಾದ ಘಟಾನುಘಟಿ ನಟರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದರು.

Tumkur Protest: ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ; ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹ

Dharmasthala Case: ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಯತ್ನಿಸಿ, ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಧಿಗಳ ವೇದಿಕೆ, ಶ್ರೀ ಪುಣ್ಯಕ್ಷೇತ್ರ ಪಾದಯಾತ್ರಿಗಳ ಸಮಿತಿ ಸೇರಿ ವಿವಿಧ ಸಂಘಟನೆಗಳಿಂದ ತುಮಕೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

Koppala Murder Case: ಮುಸ್ಲಿಂ ಹುಡುಗಿಯ ಪ್ರೀತಿಸಿದ್ದಕ್ಕೆ ಕೊಲೆ; NIA ತನಿಖೆಗೆ ಬಿಜೆಪಿ ಮನವಿ

ಮುಸ್ಲಿಂ ಹುಡುಗಿಯ ಪ್ರೀತಿಸಿದ್ದಕ್ಕೆ ಕೊಲೆ; NIA ತನಿಖೆಗೆ ಬಿಜೆಪಿ ಮನವಿ

Gavi Siddappa Murder Case: ಕೊಪ್ಪಳದ ಗವಿಸಿದ್ದಪ್ಪ ನಾಯಕರ ಹತ್ಯೆ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸಬೇಕು ಎಂದು ಬಿಜೆಪಿ-ಜೆಡಿಎಸ್ ನಿಯೋಗವು ಬುಧವಾರ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಕೊಪ್ಪಳದ ಗವಿಸಿದ್ದಪ್ಪ ನಾಯಕರ ಕೊಲೆ ಪ್ರಕರಣವನ್ನು ಎನ್.ಐ.ಎ.ಗೆ ವಹಿಸಬೇಕು. ಕಾನೂನಿನಡಿ ಈ ಬಡ ಕುಟುಂಬಕ್ಕೆ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು. ಎರಡು ಎಕರೆ ಜಮೀನು ನೀಡಬೇಕು. ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Bengaluru Road Rage: ಬೆಂಗಳೂರಿನಲ್ಲಿ ನಿಲ್ಲದ ರೋಡ್‌ ರೇಜ್‌; ಮಹಿಳೆಯ ಕಾರು ಬೆನ್ನಟ್ಟಿ ಹಲ್ಲೆಗೈದ 10 ಕ್ಯಾಬ್ ಚಾಲಕರು

ಬೆಂಗಳೂರಿನಲ್ಲಿ ಮಹಿಳೆಯ ಕಾರು ಬೆನ್ನಟ್ಟಿ ಹಲ್ಲಗೈದ 10 ಕ್ಯಾಬ್ ಚಾಲಕರು

Bengaluru Road Rage: ಮಹಿಳೆಯ ಕಾರನ್ನು 10-12 ಕ್ಯಾಬ್ ಚಾಲಕರ ಬೆನ್ನಟ್ಟಿ, ಹಲ್ಲೆ ಮಾಡಿರುವ ಘಟನೆ ನಗರದ ಹುಳಿಮಾವುನಲ್ಲಿ ನಡೆದಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ಅರಂಭಿಸಿದ್ದಾರೆ.

Pralhad Joshi: ಉತ್ಖನನ ಜಾಗದಲ್ಲಿ ಏನೂ ಸಿಗದಿದ್ದಕ್ಕೆ ʼಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ' ಎನ್ನುತ್ತಿರೋ ಸಿಎಂ: ಜೋಶಿ

ಸಿಎಂ ಪಾತ್ರವಿಲ್ಲದೆ ಎಸ್‌ಐಟಿ ರಚನೆ ಆಯ್ತಾ?: ಜೋಶಿ

Pralhad Joshi: ದಟ್ಟಾರಣ್ಯ ಪ್ರದೇಶದ ನೇತ್ರಾವತಿ ಸ್ನಾನಘಟ್ಟದ 13 ಭಾಗಗಳಲ್ಲಿ ಶವಗಳನ್ನು ಹೂತು ಹಾಕಿದೆ ಎಂದಿರುವ ಅನಾಮಿಕನ ಆರೋಪದ ಬಗ್ಗೆ ಪರ-ವಿರೋಧ ಚರ್ಚೆ ನಡುವೆಯೇ ಎಸ್‌ಐಟಿ ರಚಿಸಿ, ಈಗ ಉತ್ಖನನ ಜಾಗದಲ್ಲಿ ಏನೂ ಸಿಗದಿದ್ದರಿಂದ ʼಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ' ಎನ್ನುತ್ತಿರುವುದು ನಿಜಕ್ಕೂ ದುರಂತ ಹಾಗೂ ಖಂಡನೀಯ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ ನಡೆಸಿದ್ದಾರೆ.

Actor Kiccha Sudeep: ಬೀದಿ ನಾಯಿಗಳ ಕುರಿತು ಸುಪ್ರೀಂ ಆದೇಶ; ದತ್ತು ಪಡೆಯಲು ನಟ ಸುದೀಪ್‌ ಮನವಿ

ಬೀದಿ ನಾಯಿಗಳನ್ನು ದತ್ತು ಪಡೆಯೋಣ: ನಟ ಸುದೀಪ್‌ ಮನವಿ

Actor Kiccha Sudeep: ಶ್ವಾನಗಳನ್ನು ಆಶ್ರಯ ತಾಣಗಳಲ್ಲಿ ಇಡುವುದು ಅವುಗಳ ಸ್ವಾತಂತ್ರ್ಯ ಹರಣ ಮಾಡಿದ ಹಾಗಾಗುತ್ತದೆ ಎಂದು ಸೂಚ್ಯವಾಗಿ ಹೇಳಿರುವ ನಟ ಸುದೀಪ್‌ ಅವರು, ಮೂಕ ಜೀವಿಗಳಿಗೆ ನಾವು ಧ್ವನಿ ಆಗೋಣ, ಬೀದಿ ನಾಯಿಗಳನ್ನು ದತ್ತು ಪಡೆಯೋಣ ಎಂದು ಕರೆ ನೀಡಿದ್ದಾರೆ.

Karnataka Assembly Session: ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಯಾವುದೇ ರೀತಿಯ ಅನ್ಯಾಯವಾಗಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

ಅಂಗನವಾಡಿ ನೇಮಕಾತಿಯಲ್ಲಿ ಯಾರಿಗೂ ಅನ್ಯಾಯವಾಗಿಲ್ಲ: ಹೆಬ್ಬಾಳ್ಕರ್

Laxmi Hebbalkar: ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಪಾರದರ್ಶಕವಾಗಿ ಆಯ್ಕೆ ನಡೆದಿದೆ. ಆಯ್ಕೆಯಲ್ಲಿ ಯಾವುದೇ ಹಸ್ತಕ್ಷೇಪ ಆಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

Karnataka Assembly Session: ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕಾ ಪಡೆ:  ಲಕ್ಷ್ಮಿ ಹೆಬ್ಬಾಳ್ಕರ್‌

ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕಾ ಪಡೆ: ಲಕ್ಷ್ಮಿ ಹೆಬ್ಬಾಳ್ಕರ್‌

Laxmi Hebbalkar: ಶಾಲಾ- ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಮಹಿಳಾ ಪೊಲೀಸ್ ಒಳಗೊಂಡ ಅಕ್ಕಾ ಪಡೆ ಶೀಘ್ರವೇ ಜಾರಿಗೆ ಬರಲಿದೆ ಎಂದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ> ಈ ಕುರಿತ ವಿವರ ಇಲ್ಲಿದೆ.

Nodiddu Sullagabahudu Movie: ʼನೋಡಿದ್ದು ಸುಳ್ಳಾಗಬಹುದುʼ ಚಿತ್ರದ ʼಕನಸುಗಳ ಮೆರವಣಿಗೆʼ ಹಾಡು ರಿಲೀಸ್‌

ʼನೋಡಿದ್ದು ಸುಳ್ಳಾಗಬಹುದುʼ ಚಿತ್ರದ ʼಕನಸುಗಳ ಮೆರವಣಿಗೆʼ ಹಾಡು ರಿಲೀಸ್‌

Nodiddu Sullagabahudu Movie: ಅನಿಲ್ ಕುಮಾರ್ ಕೆ.ಆರ್. ನಿರ್ಮಾಣ ಮಾಡುವುದರೊಂದಿಗೆ ನಾಯಕನಾಗೂ ನಟಿಸಿರುವ, ವಿಜಯ್ ಚಲಪತಿ ನಿರ್ದೇಶನದ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ʼನೋಡಿದ್ದು ಸುಳ್ಳಾಗಬಹುದುʼ ಚಿತ್ರದ ʼಕನಸುಗಳ ಮೆರವಣಿಗೆʼ ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ.

ಬಾಕ್ಸರ್‌ ಮಾನ್ಸಿ  ಜೆ ಸುವರ್ಣ ಸಾಧನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘನೆ

ಕಂಚಿನ ಪದಕ ಗೆದ್ದ ಮಾನ್ಸಿ ಸುವರ್ಣ ಸಾಧನೆಗೆ ಹೆಬ್ಬಾಳಕರ್ ಶ್ಲಾಘನೆ

ಮಾನ್ಸಿ ಸುವರ್ಣ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚು ಪದಕಗಳನ್ನು ಜಯಿಸಲಿ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಲಿ. ಆಕೆಯ‌ ಸಾಧನೆಗೆ ನಮ್ಮ ಸರ್ಕಾರ ಸದಾ ಬೆನ್ನೆಲುಬು ಆಗಿ ನಿಲ್ಲಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BY Vijayendra: ಆ.17ರಂದು ಬಿಜೆಪಿ ಶಾಸಕರು, ಹಿರಿಯರ ತಂಡ ಧರ್ಮಸ್ಥಳಕ್ಕೆ ಭೇಟಿ: ಬಿ.ವೈ. ವಿಜಯೇಂದ್ರ

ಆ.17ರಂದು ಬಿಜೆಪಿ ಶಾಸಕರು, ಹಿರಿಯರ ತಂಡ ಧರ್ಮಸ್ಥಳಕ್ಕೆ ಭೇಟಿ

BY Vijayendra: ಬಿಜೆಪಿ ನಿಲುವು ಸ್ಪಷ್ಟವಿದೆ. ಎಸ್‍ಐಟಿ ತನಿಖೆ ಶೀಘ್ರದಲ್ಲಿ ಮುಗಿಯಬೇಕು. ಇದನ್ನು ಹೀಗೇ ಎಳೆದುಕೊಂಡು ಹೋಗಲು ಸಾಧ್ಯವಿಲ್ಲ. ಸತ್ಯಾಸತ್ಯತೆ ಬಹಿರಂಗ ಆಗಬೇಕು. ಗೊಂದಲಗಳಿಗೆ ಅತಿ ಶೀಘ್ರವೇ ತೆರೆ ಬೀಳಬೇಕಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

Dharmasthala Case: ಧರ್ಮಸ್ಥಳ ವಿರುದ್ಧ ಅಪಪ್ರಚಾರ: ರಾಜ್ಯಾದ್ಯಂತ ಸಿಡಿದೆದ್ದ ಭಕ್ತರು, ಪ್ರತಿಭಟನೆ, ಬಿಜೆಪಿಯಿಂದ ಯಾತ್ರೆಗೆ ಚಿಂತನೆ

ಧರ್ಮಸ್ಥಳ ವಿರುದ್ಧ ಅಪಪ್ರಚಾರ: ರಾಜ್ಯಾದ್ಯಂತ ಭಕ್ತರಿಂದ ಪ್ರತಿಭಟನೆ

Dharmasthala: ಶ್ರೀಕ್ಷೇತ್ರದ ಅಭಿಮಾನಿಗಳು ರಾಜ್ಯಾದ್ಯಂತ ಸಿಡಿದೆದ್ದಿದ್ದಾರೆ. ಈ ಅಪಪ್ರಚಾರ ಮಾಡುತ್ತಿರುವವರು, ಅವರಿಗೆ ಎಲ್ಲಿಂದ ಫಂಡಿಂಗ್‌ ಆಗುತ್ತಿದೆ, ದೇಶದ್ರೋಹಿಗಳ ಹಾಗೂ ಧರ್ಮದ್ರೋಹಿಗಳ ಕೈವಾಡ ಇದರ ಹಿಂದೆ ಇದೆಯೇ ಎಂಬ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಕ್ತರು ಪ್ರತಿಭಟನೆ ಆರಂಭಿಸಿದ್ದಾರೆ.

Food poison: ಈರುಳ್ಳಿ ದೋಸೆ ತಿಂದು ಕಾಲೇಜು ಹಾಸ್ಟೆಲ್‌ನ 30 ವಿದ್ಯಾರ್ಥಿಗಳು ಆಸ್ಪತ್ರೆ ಪಾಲು

ಈರುಳ್ಳಿ ದೋಸೆ ತಿಂದು ಕಾಲೇಜು ಹಾಸ್ಟೆಲ್‌ನ 30 ವಿದ್ಯಾರ್ಥಿಗಳು ಅಸ್ವಸ್ಥ

Kolar news: ತಡರಾತ್ರಿಯಲ್ಲಿ ಈರುಳ್ಳಿ ದೋಸೆ, ಇಡ್ಲಿ ಮತ್ತು ಚಟ್ನಿ ಸೇವಿಸಿದ ನಂತರ ವಿದ್ಯಾರ್ಥಿಗಳು ವಾಂತಿ ಮತ್ತು ಭೇದಿಯಿಂದ ಬಳಲಿದ್ದು, ಅವರನ್ನು ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್ ಆಗಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Gold Price Today: ಸ್ವರ್ಣಪ್ರಿಯರಿಗೆ ಗುಡ್‌ನ್ಯೂಸ್‌- ಸತತ ನಾಲ್ಕನೇ ದಿನವೂ ಚಿನ್ನದ ದರ ಇಳಿಕೆ

ಸ್ವರ್ಣಪ್ರಿಯರಿಗೆ ಗುಡ್‌ನ್ಯೂಸ್‌-ಚಿನ್ನದ ದರದಲ್ಲಿ ಇಳಿಕೆ

Gold Price Today on 13th Aug 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 5 ರೂ ಇಳಿಕೆಯಾಗಿದ್ದು 9,290 ರೂ. ಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 5 ರೂ. ಇಳಿಕೆಯಾಗಿ, 10,135 ರೂ. ಆಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 74,320 ರೂ. ಬಾಳಿದರೆ, 10 ಗ್ರಾಂಗೆ ನೀವು 92,900 ರೂ. ಹಾಗೂ 100 ಗ್ರಾಂಗೆ 9,29,000ರೂ. ನೀಡಬೇಕಾಗುತ್ತದೆ.

Murder Case: ಪತ್ನಿ, ಮಗುವಿನ ಮುಂದೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಪತ್ನಿ, ಮಗುವಿನ ಮುಂದೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

Udupi news: ಪತ್ನಿ, ಮಗುವಿನೊಂದಿಗೆ ಮಲಗಿದ್ದ ವಿನಯ್ ಕೋಣೆಗೆ ಹೋಗಿ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ತಡೆಯಲು ಹೋಗಿದ್ದ ವಿನಯ್ ಪತ್ನಿ ಕೈಗೆ ಗಂಭೀರ ಗಾಯವಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading...