ಬಾಹ್ಯಾಕಾಶದಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ರೆ ಏನ್ ಆಗುತ್ತೆ?
Astronauts: ಗಗನಯಾತ್ರಿಗಳು ಸಮಯ ಕಳೆಯಲು ಬಾಹ್ಯಾಕಾಶದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತಾರೆಯೇ? ಈ ಸಂಗತಿ ಕುತೂಹಲಕಾರಿ ಎಂದು ತೋರುತ್ತದೆಯಾದರೂ, ಶೂನ್ಯ ಗುರುತ್ವಾಕರ್ಷಣೆಯಲ್ಲಿ ಲೈಂಗಿಕತೆ ಸುಲಭವೇನಲ್ಲ. ಅಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತೆ ಎಂದು ತಜ್ಞರು ಹೇಳುತ್ತಾರೆ. ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ ಜಾನ್ ಮಿಲ್ಲಿಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸ್ಪೇಸ್‌ನಲ್ಲಿ ಲೈಂಗಿಕ ಕ್ರಿಯೆಯ ಅನುಭವವನ್ನು "ಸ್ಕೈಡೈವಿಂಗ್" ಮಾಡುವಾಗ ಸಂಭೋಗಕ್ಕೆ ಪ್ರಯತ್ನಿಸುವುದಕ್ಕೆ ಹೋಲಿಸಿದ್ದಾರೆ.