Vastu Tips: ವಾಸ್ತು ಶಾಸ್ತ್ರದ ಪ್ರಕಾರ ಈ ಉಡುಗೊರೆಗಳನ್ನ ನೀಡಿದರೆ ಬರಲಿದೆ ಸಂಪತ್ತು ಮತ್ತು ಸಮೃದ್ಧಿ
ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಶುಭ ಫಲಗಳು ದೊರಕುತ್ತವೆ ಎಂಬ ನಂಬಿಕೆ ಇದೆ. ಜೋಡಿ ಆನೆಯ ವಿಗ್ರಹ, ಹೂವುಗಳು ಹಾಗೂ ಬೆಳ್ಳಿಯ ವಸ್ತುಗಳು ಮಂಗಳಕರವೆಂದು ಹೇಳಲಾಗುತ್ತದೆ. ಆದರೆ ಗಡಿಯಾರ, ಚಾಕು, ಕಬ್ಬಿಣದ ವಸ್ತುಗಳು ಮುಂತಾದವುಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸುವುದು ಉತ್ತಮ ಎಂದು ವಾಸ್ತು ಸಲಹೆ ನೀಡುತ್ತದೆ.
ವಾಸ್ತು ಶಾಸ್ತ್ರ -
ಬೆಂಗಳೂರು: ಯಾರಿಗಾದರೂ ಉಡುಗೊರೆ ನೀಡುವುದು ಪ್ರೀತಿ, ಗೌರವ ಮತ್ತು ಸ್ನೇಹದ ಸಂಕೇತವಾಗಿದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಉಡುಗೊರೆ ಆಯ್ಕೆ ಮಾಡುವಾಗ ಕೆಲವು ವಿಶೇಷ ವಿಚಾರಗಳನ್ನು ಗಮನಿಸುವುದು ಉತ್ತಮವೆಂದು ಹೇಳಲಾಗುತ್ತದೆ. ವಾಸ್ತು ಸಲಹೆ ಪ್ರಕಾರ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಆ ವ್ಯಕ್ತಿಯ ಜೀವನದಲ್ಲಿ ಶುಭ ಫಲಗಳು ದೊರಕುತ್ತವೆ ಮತ್ತು ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ ಎನ್ನಲಾಗುತ್ತದೆ. ಸರಿಯಾದ ಉಡುಗೊರೆ ಲಕ್ಷ್ಮೀ ದೇವಿಯ ಕೃಪೆಗೆ ಕಾರಣವಾಗುತ್ತದೆ ಎಂಬ ನಂಬಿಕೆಯೂ ಇದೆ.
ಹಾಗಾದ್ರೆ ವಾಸ್ತು ಶಾಸ್ತ್ರದ ಸಲಹೆ ಪ್ರಕಾರ ಯಾವ ಉಡುಗೊರೆಗಳನ್ನು ನೀಡಿದ್ದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ...
ಜೋಡಿ ಆನೆಯ ವಿಗ್ರಹ ನೀಡುವುದು ಶುಭ
ವಾಸ್ತು ಶಾಸ್ತ್ರದ ಪ್ರಕಾರ ಜೋಡಿ ಆನೆಯ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದು ಬಹಳ ಮಂಗಳಕರವಾಗಿದೆ. ಆನೆ ಶಕ್ತಿ, ಸಮೃದ್ಧಿ ಮತ್ತು ಐಶ್ವರ್ಯದ ಸಂಕೇತವಾಗಿದೆ. ವಿಶೇಷ ಸಂದರ್ಭಗಳಲ್ಲಿ ಚಿನ್ನ, ಬೆಳ್ಳಿ ಅಥವಾ ಮರದಿಂದ ಮಾಡಿದ ಆನೆಯ ವಿಗ್ರಹವನ್ನು ಉಡುಗೊರೆಯಾಗಿ ನೀಡಬಹುದು. ಅದರಲ್ಲೂ ಬೆಳ್ಳಿಯಿಂದ ಮಾಡಿದ ವಸ್ತುಗಳು ಅಥವಾ ಬೆಳ್ಳಿಯ ನಾಣ್ಯವನ್ನು ಉಡುಗೊರೆಯಾಗಿ ನೀಡುವುದು ಹೆಚ್ಚು ಶುಭಕರವೆಂದು ಪರಿಗಣಿಸಲಾಗುತ್ತದೆ. ಇದು ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಗೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ.
ಹೂವುಗಳು ಪ್ರೀತಿ ಮತ್ತು ಸ್ನೇಹದ ಸಂಕೇತ
ಯಾರಿಗಾದರೂ ಹೂವುಗಳನ್ನು ಉಡುಗೊರೆಯಾಗಿ ನೀಡುವುದು ಅತ್ಯಂತ ಶುಭಕರವೆಂದು ಹೇಳಲಾಗುತ್ತದೆ. ಹೂವುಗಳು ಪ್ರೀತಿ, ಸೌಂದರ್ಯ ಮತ್ತು ಶಾಂತಿಯ ಸಂಕೇತವಾಗಿವೆ. ಹಬ್ಬಗಳು, ಹುಟ್ಟುಹಬ್ಬಗಳು ಅಥವಾ ವಿಶೇಷ ಸಂದರ್ಭಗಳಲ್ಲಿ ಹೂವುಗಳನ್ನು ನೀಡುವುದರಿಂದ ಪರಸ್ಪರ ಸಂಬಂಧಗಳಲ್ಲಿ ಆತ್ಮೀಯತೆ ಹೆಚ್ಚುತ್ತದೆ ಎಂದು ನಂಬಲಾಗುತ್ತದೆ.
Vastu Tips: ನಿದ್ರಾಹೀನತೆ ಹೆಚ್ಚಳಕ್ಕೆ ಮಲಗುವ ಕೋಣೆಯೇ ಕಾರಣವೇ? ವಾಸ್ತುಶಾಸ್ತ್ರ ಈ ಬಗ್ಗೆ ಹೇಳೋದೇನು!
ಜೇಡಿಮಣ್ಣಿನ ವಸ್ತುಗಳು ಕೂಡ ಮಂಗಳಕರ
ವಾಸ್ತು ಶಾಸ್ತ್ರದ ಪ್ರಕಾರ ಜೇಡಿಮಣ್ಣಿನಿಂದ ಮಾಡಿದ ವಿಗ್ರಹಗಳು ಅಥವಾ ಅಲಂಕಾರಿಕ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸಹ ಉತ್ತಮವೆಂದು ಹೇಳಲಾಗುತ್ತದೆ. ಮಣ್ಣಿನಿಂದ ಮಾಡಿದ ವಸ್ತುಗಳು ಪ್ರಕೃತಿಯ ಶುದ್ಧತೆಯನ್ನು ಸೂಚಿಸುತ್ತವೆ. ಇವು ಮನೆಗೆ ಶಾಂತಿ ಮತ್ತು ಸಕಾರಾತ್ಮಕ ವಾತಾವರಣವನ್ನು ತರಲು ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ. ಕೆಲವು ನಂಬಿಕೆಗಳ ಪ್ರಕಾರ ಇಂತಹ ವಸ್ತುಗಳು ಆರ್ಥಿಕ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿ ಎಂದು ಹೇಳಲಾಗುತ್ತದೆ.
ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸುವುದು ಒಳಿತು. ಇವು ನಕಾರಾತ್ಮಕ ಪರಿಣಾಮವನ್ನು ಉಂಟುಮಾಡಬಹುದು ಎಂಬ ನಂಬಿಕೆ ಇದೆ.
ಗಣೇಶನ ವಿಗ್ರಹ:
ಸುಗಂಧ ದ್ರವ್ಯಗಳು
ಗಡಿಯಾರ
ಚರ್ಮದಿಂದ ಮಾಡಿದ ವಸ್ತುಗಳು
ಕತ್ತರಿ, ಚಾಕು ಅಥವಾ ಕಬ್ಬಿಣದ ವಸ್ತುಗಳು
ಮನಿ ಪ್ಲಾಂಟ್
ಇನ್ನು ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಉಡುಗೊರೆ ನೀಡಿದರೆ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಐಶ್ವರ್ಯ ಹೆಚ್ಚುತ್ತದೆ ಎಂದು ಕೆಲವರು ನಂಬುತ್ತಾರೆ. ಆದರೆ ತಪ್ಪಾಗಿ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಅಶುಭ ಪರಿಣಾಮಗಳು ಉಂಟಾಗಬಹುದು ಎಂಬ ನಂಬಿಕೆಯೂ ಇದೆ. ಆದ್ದರಿಂದ ಇಂತಹ ವಿಷಯಗಳಲ್ಲಿ ಅನುಮಾನ ಇದ್ದರೆ ಪಂಡಿತರ ಅಥವಾ ಜ್ಯೋತಿಷಿಗಳ ಸಲಹೆ ಪಡೆಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.