HD Deve Gowda: ಬೆಂಗಳೂರಿನ ಉಡುಪಿ ಶ್ರೀ ಕೃಷ್ಣ ಭವನದಲ್ಲಿ ಮಸಾಲೆ ದೋಸೆ ಸವಿದ ಎಚ್.ಡಿ. ದೇವೇಗೌಡ್ರು
ಬೆಂಗಳೂರು ನಗರದ ಶಾರದಾ ಪೀಠದ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಬಳೇಪೇಟೆಯ ಉಡುಪಿ ಶ್ರೀ ಕೃಷ್ಣ ಭವನ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Prabhakara R
Jun 15, 2026 7:25 PM
ಬೆಂಗಳೂರಿನ ಬಳೇಪೇಟೆಯ ಉಡುಪಿ ಶ್ರೀ ಕೃಷ್ಣ ಭವನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಸಾಲೆ ದೋಸೆ ಸವಿದಿದ್ದಾರೆ. ನಗರದ ಶಾರದಾ ಪೀಠದ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು, ಉಡುಪಿ ಶ್ರೀ ಕೃಷ್ಣ ಭವನ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿದ್ದಾರೆ.