ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani health: ಮದುವೆ ಬಳಿಕ ಮಹಿಳೆ ದಪ್ಪಗಾಗಲು ಕಾರಣವೇನು? ಹೇಗೆ ಇದನ್ನು ನಿಯಂತ್ರಿಸುವುದು? ಇಲ್ಲಿದೆ ಟಿಪ್ಸ್‌

ಸಾಮಾನ್ಯವಾಗಿ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಹೆಚ್ಚಿನವರು ದಪ್ಪವಾಗುತ್ತಾರೆ. ದೇಹದ ತೂಕವನ್ನು ನಿಯಂತ್ರಿಸುವುದು ಹೆಚ್ಚಿನವರಿಗೆ ಕಷ್ಟವಾಗುತ್ತದೆ, ಯಾಕೆ ಹೀಗೆ, ಇದಕ್ಕೆ ಕಾರಣ ಏನಿರಬಹುದು, ಇದನ್ನು ತಡೆಯಲು ಏನು ಮಾಡಬೇಕು ಎನ್ನುವ ಕುರಿತು ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ವಿದ್ಯಾ ಭಟ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಬೆಂಗಳೂರು: ಮದುವೆಯ ಬಳಿಕ ಜೀವನ ಕ್ರಮದಲ್ಲಿ ಆಗುವ ಬದಲಾವಣೆಯು ದೇಹದ ತೂಕವನ್ನು (Body weight) ಹೆಚ್ಚಿಸುವುದು. ಇದನ್ನು ಸರಿಯಾಗಿ ನಿಭಾಯಿಸುವುದರಿಂದ ದೇಹ ತೂಕವನ್ನು ನಿಯಂತ್ರಿಸಿಕೊಳ್ಳಬಹುದು ಎಂದು ಖ್ಯಾತ ಸ್ತ್ರೀ ರೋಗ ತಜ್ಞರಾದ (Gynecologist) ಡಾ. ವಿದ್ಯಾ ಭಟ್ ತಿಳಿಸಿದರು. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್‌ ಚಾನಲ್‌ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು ಮದುವೆ ಬಳಿಕ ನವ ದಂಪತಿಗಳು ರಜೆಯಲ್ಲಿ ತಿರುಗಾಡಲು, ನೆಂಟರ ಮನೆಗೆಲ್ಲ ಹೋಗುತ್ತಾರೆ. ಈ ಸಂದರ್ಭದಲ್ಲಿ ಡಯಟ್ ಪಾಲನೆ ಮಾಡುವುದು ತುಂಬಾ ಕಷ್ಟವಾಗಿ ಬಿಡುತ್ತದೆ. ಹೈಕ್ಯಾಲೋರಿ ಆಹಾರ ಸೇವನೆ, ಹೊಸ ಡಯಟ್ ವಿಧಾನ, ವ್ಯಾಯಾಮದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ದೇಹದ ತೂಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ತಡ ರಾತ್ರಿ ಊಟ ಮಾಡುವುದು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದ ಅವರು ಡಯಟ್ ಮೇಲೆ ಹೆಚ್ಚಿನ ಗಮನ ಕೊಟ್ಟು ದೇಹದ ತೂಕವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ಇದಕ್ಕಾಗಿ ಹೊರಗೆ ಊಟಕ್ಕೆ ಹೋದಾಗ ಕಡಿಮೆ ತಿನ್ನಿ, ರಾತ್ರಿ ಊಟ ಬೇಡ, ತೂಕ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ಕೊಡಿ ಅಲ್ಲದೇ ಆರೋಗ್ಯಕರ ಆಹಾರ ಸೇವನೆ ಮಾಡಿ ಎಂದು ಅವರು ಹೇಳಿದರು.