ಕುಳಿತು ಕೆಲಸ ಮಾಡೋರಿಗೆ ಮೂಲವ್ಯಾಧಿ ಸಮಸ್ಯೆ ಕಾಡುವುದೇಕೆ?
Health Tips: ಮೂಲವ್ಯಾಧಿ ಎನ್ನುವುದು ಮಕ್ಕಳಿಂದ ವೃದ್ಧರವರೆಗೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆ. ಯಾರೊಂದಿಗೂ ಹೇಳಿಕೊಳ್ಳಲು ಮುಜುಗರಪಡುವ ಈ ಕಾಯಿಲೆಯ ಬಗ್ಗೆ ಆರಂಭದಲ್ಲೇ ಎಚ್ಚರಿಕೆವಹಿಸುವುದು ಒಳಿತು ಎನ್ನುತ್ತಾರೆ ವೈದ್ಯರು. ಮೂಲವ್ಯಾಧಿಗೆ ಆಯುರ್ವೇದದಲ್ಲಿ ಯಾವ ಬಗೆಯ ಚಿಕಿತ್ಸಾ ಕ್ರಮಗಳಿವೆ? ಜನರು ಇದರ ಬಗ್ಗೆ ಯಾವ ಸಂಗತಿಗಳನ್ನು ತಿಳಿದಿರಬೇಕು? ಎನ್ನುವುದರ ಕುರಿತು ಖ್ಯಾತ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ ಡಂಬಳ ತಿಳಿಸಿದ್ದಾರೆ.
Pushpa Kumari
Mar 31, 2026 5:22 PM
ಬೆಂಗಳೂರು, ಮಾ. 31: ಮೂಲವ್ಯಾಧಿ ಎನ್ನುವುದು ಇತ್ತೀಚೆಗೆ ಸಾಮಾನ್ಯ ಆರೋಗ್ಯ ಸಮಸ್ಯೆ ಎನಿಸಿಕೊಂಡಿದೆ. ಇದು ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತು ಕೆಲಸ ಮಾಡುವವರಲ್ಲಿ ಕಾಣಿಸಿಕೊಳ್ಳುತ್ತದೆ. ಗುದನಾಳದ ಒಳಪದರದಲ್ಲಿ ರಕ್ತನಾಳ ಸೊಂಕಿಗೆ ಒಳಗಾದಾಗ ಇದು ಉಬ್ಬಿಕೊಂಡು ಮಲ ವಿಸರ್ಜನೆಯ ಸಮಯದಲ್ಲಿ ಒತ್ತಲ್ಪಟ್ಟು ರಕ್ತ ಹೊರ ಬರುತ್ತದೆ. ಈ ಸಮಯದಲ್ಲಿ ಗಡ್ಡೆಗಳು ಉತ್ಪತ್ತಿಯಾಗುದನ್ನೇ ಮೂಲವ್ಯಾಧಿ ಹೇಳಲಾಗುತ್ತದೆ. ಆದರೆ ಪೈಲ್ಸ್ ತಡೆಗಟ್ಟಲು, ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ಖ್ಯಾತ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ ಡಂಬಳ ʼವಿಶ್ವವಾಣಿ ಹೆಲ್ತ್ʼ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.