ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Health Tips: ​30ರ ಹರೆಯದಲ್ಲಿದ್ದೀರಾ? ನಿಮ್ಮ ಆರೋಗ್ಯ ಕಾಪಾಡಲು ತಜ್ಞರ ಈ ಟಿಪ್ಸ್ ಪಾಲಿಸಿ!

ಶಕ್ತಿಯ ಮಟ್ಟ ಹೆಚ್ಚಿಸಲು, ತೂಕ ನಿರ್ವಹಣೆ ಮಾಡಿಕೊಳ್ಳಲು ಫಿಟ್‌ನೆಸ್‌ನಲ್ಲಿ ಸೂಕ್ಷ್ಮ ಬದಲಾವಣೆ ಗಳನ್ನು ಕೂಡ ಮಾಡಿಕೊಳ್ಳಬೇಕಾಗುತ್ತದೆ..ಸರಿಯಾದ ಜೀವನಶೈಲಿಯ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳುವ ಮೂಲಕ ಚಯಾಪಚಯ ಕ್ರಿಯೆಯನ್ನು ಸಕ್ರಿಯವಾಗಿಡಲು ಮತ್ತು ದೀರ್ಘ ಕಾಲೀನ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಚಯಾಪಚಯ ಕ್ರಿಯೆ ಹೆಚ್ಚಿಸಲು ಈ ಅಭ್ಯಾಸ ಬೆಳಿಸಿಕೊಳ್ಳಿ!

ಸಂಗ್ರಹ ಚಿತ್ರ -

Profile
Pushpa Kumari Jun 16, 2026 7:00 AM

ನವದೆಹಲಿ,ಜೂ.15: ಯುವಕ- ಯುವತಿಯರು 30ರ ಹರೆಯಕ್ಕೆ ಕಾಲಿಡುತ್ತಿದ್ದಂತೆ ದೇಹದ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತನ್ನು ‌ನೀಡಬೇಕಾಗುತ್ತದೆ. ಶಕ್ತಿಯ ಮಟ್ಟ ಹೆಚ್ಚಿಸಲು, ತೂಕ ನಿರ್ವಹಣೆ ಮಾಡಿಕೊಳ್ಳಲು ಫಿಟ್‌ನೆಸ್‌ನಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಕೂಡ ಮಾಡಿಕೊಳ್ಳ ಬೇಕಾಗುತ್ತದೆ. ಸರಿಯಾದ ಜೀವನಶೈಲಿಯ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳುವ ಮೂಲಕ ಚಯಾಪಚಯ ಕ್ರಿಯೆಯನ್ನು ಸಕ್ರಿಯವಾಗಿಡಲು ಮತ್ತು ದೀರ್ಘ ಕಾಲೀನ ಆರೋಗ್ಯವನ್ನು (Health Tips) ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಹಾಗಾಗಿ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ನಿಮ್ಮ ಆರೋಗ್ಯವನ್ನು ರಕ್ಷಣೆ ಮಾಡಬಹುದು.

ಪ್ರೋಟೀನ್-ಭರಿತ ಆಹಾರ ಸೇವಿಸಿ:

ಸರಿಯಾದ ಉಪಹಾರವು ನಿಮ್ಮ ಇಡೀ ದಿನವನ್ನು ಹಸನ್ಮುಖಿ ಮಾಡಬಹುದು.‌ ಮೊಟ್ಟೆ, ಪನೀರ್, ಹಾಲು, ಮೊಳಕೆಕಾಳುಗಳು, ಬೀಜಗಳು ಮತ್ತು ಗ್ರೀಕ್ ಮೊಸರಿನಂತಹ ಆಹಾರಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದ್ದು ದೇಹಕ್ಕೆ ಶಕ್ತಿ ಒದಗಿಸುತ್ತದೆ..ಹಾಗಾಗಿ ಅನಗತ್ಯ ತಿಂಡಿಗಳನ್ನು ಕಡಿಮೆ ಮಾಡುವ ಮೂಲಕ ಪ್ರೋಟೀನ್ ಭರಿತ ಆಹಾರಕ್ಕೆ ಆದ್ಯತೆ ನೀಡಿ‌.

Health Tips: ಮದ್ಯಪಾನ ಬಿಟ್ಟರೂ ಈ ಅಭ್ಯಾಸಗಳು ನಿಮ್ಮನ್ನು ಬೇಗನೆ ವೃದ್ಧಾಪ್ಯದತ್ತ ತಳ್ಳಬಹುದು!

ನಿಯಮಿತವಾಗಿ ವ್ಯಾಯಾಮ ಮಾಡಿ:

ನಿಮ್ಮ ಚಯಾಪಚಯ ಕ್ರಿಯೆಯನ್ನು ಬೆಂಬಲಿಸಲು ದೈಹಿಕ ಚಟುವಟಿಕೆಯು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ದಿನದಲ್ಲಿ ಅರ್ಧ ಗಂಟೆಯಾದರೂ ದೈಹಿಕ ವ್ಯಾಯಾಮಕ್ಕೆ ಆಧ್ಯತೆ ನೀಡಿ. ಚುರುಕಾದ ನಡಿಗೆ, ಸೈಕ್ಲಿಂಗ್, ಈಜು ಮತ್ತು ಯೋಗದ ಅಭ್ಯಾಸ ಮಾಡಿ. ಇವು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ನೆರವಾಗುತ್ತವೆ.

ದೀರ್ಘಕಾಲ ಕುಳಿತುಕೊಳ್ಳುವುದನ್ನು ತಪ್ಪಿಸಿ:

ದೀರ್ಘಾವಧಿಯ ಕುಳಿತುಕೊಳ್ಳುವಿಕೆಯು ಕ್ಯಾಲೋರಿ ಸುಡುವಿಕೆಯನ್ನು ನಿಧಾನ ಮಾಡುತ್ತದೆ. ನೀವು ಮೇಜಿನ ಬಳಿ ಕೆಲಸ ಮಾಡುತ್ತಿದ್ದರೆ, ಪ್ರತಿ ಗಂಟೆಗೊಮ್ಮೆ ಎದ್ದು ನಿಂತು ಚಲಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಿ:

​ಮೆಟಬಾಲಿಸಮ್ ಸೇರಿದಂತೆ ದೇಹದ ರಕ್ಷಣೆಗೆ ನೀರು ಅತ್ಯಗತ್ಯ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಆಯಾಸ ಹಾಗೂ ನಿರಾಸಕ್ತಿ ಹೆಚ್ಚುತ್ತದೆ. ಹಾಗಾಗಿ ದಿನನಿತ್ಯ ನೀರಿನ ಸೇವನೆಗೆ ಆಧ್ಯತೆ ನೀಡಿ.

​ನಿದ್ರೆಗೆ ಆದ್ಯತೆ ನೀಡಿ:

ವಯಸ್ಕರು ಪ್ರತಿ ರಾತ್ರಿ 7 ರಿಂದ 9 ಗಂಟೆಗಳ ಕಾಲ ಗುಣಮಟ್ಟದ ನಿದ್ರೆಯನ್ನು ಗುರಿಯಾಗಸಿ ಕೊಳ್ಳಬೇಕು. ಕಳಪೆ ನಿದ್ರೆಯು ನಿಮ್ಮ ಹಾರ್ಮೋನುಗಳನ್ನು ಅಡ್ಡಿಪಡಿಸಬಹುದು.

ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸಿ:

​ದೀರ್ಘಕಾಲದ ಮಾನಸಿಕ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹಸಿವನ್ನು ಹೆಚ್ಚಿಸಿ, ಅತಿಯಾದ ತೂಕಕ್ಕೆ ಕಾರಣವಾಗಬಹುದು. ಹಾಗಾಗಿ ಒತ್ತಡ ನಿರ್ವಹಿಸಿ ಖುಷಿಯಾದ ಜೀವನಕ್ಕೆ ಆಧ್ಯತೆ ನೀಡಿ.