Viral News: ಮಗನ ಮದುವೆಯಲ್ಲಿ ಹೊರಬಿತ್ತು ಕರ್ಣ ಕಠೋರ ಸತ್ಯ; ವಧುವಿನ ಜನ್ಮ ರಹಸ್ಯ ತಿಳಿದು ವರನ ತಾಯಿ ಫುಲ್ ಶಾಕ್!
Woman discovers bride is her biological daughter: ಮದುವೆ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಅಚ್ಚರಿಯ ಘಟನೆ ನಡೆದಿದೆ. ವರನ ತಾಯಿ ಹಾಗೂ ವಧು ಪರಸ್ಪರ ಅಪ್ಪಿಕೊಂಡು ಕಣ್ಣೀರು ಸುರಿಸಿ ಅತ್ತಿದ್ದಾರೆ. ಯಾಕೆಂದರೆ ಮಗನ ಮದುವೆ ದಿನ ವಧುವು ತನ್ನ ಸ್ವಂತ ಮಗಳು ಎಂಬುದು ವರನ ತಾಯಿಗೆ ಗೊತ್ತಾಗಿದೆ. ಆದರೂ ಕೂಡ ಮಗನ ಜೊತೆಯೇ ಮಗಳ ಮದುವೆ ನೆರವೇರಿಸಿದ್ದಾಳೆ.


ಬೀಜಿಂಗ್: ಮದುವೆ ಸಂಭ್ರಮದಲ್ಲಿದ್ದ ಕುಟುಂಬವೊಂದು ಸಂತೋಷದಿಂದ ಓಡಾಡಿಕೊಂಡಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ಅದು ಭಾವಾನಾತ್ಮಕವಾಗಿ ಬದಲಾಯಿತು. ಕುಟುಂಬವು ಪರಸ್ಪರ ಅಪ್ಪಿಕೊಂಡು ಅತ್ತಿರುವ ಅಚ್ಚರಿಯ ಘಟನೆಯೊಂದು ಚೀನಾದ (China) ಸುಝೌನಲ್ಲಿ ನಡೆದಿದೆ. ಮದುವೆ (Marriage) ಸಂಭ್ರಮದಲ್ಲಿದ್ದ ವರನ ತಾಯಿಯು ವಧುವಿನ ಮೈಮೇಲೆ ಇರುವ ಮಚ್ಚೆಯನ್ನು ಗಮನಿಸಿದ್ದಾಳೆ. ದಶಕಗಳ ಹಿಂದೆ ತನ್ನ ಮಗಳನ್ನು ಕಳೆದುಕೊಂಡಿದ್ದ ಅವಳಿಗೆ ಈಕೆ ತನ್ನ ಮಗಳೇ ಇರಬಹುದಾ ಎಂದೆನಿಸಿದೆ. ಯಾಕೆಂದರೆ ಅದೇ ಸ್ಥಳದಲ್ಲಿ ಅವಳ ಕಾಣೆಯಾಗಿದ್ದ ಮಗುವಿಗೂ ಮಚ್ಚೆಯಿತ್ತು.
ಅನುಮಾನಗೊಂಡ ವರನ ತಾಯಿಯು ವಧುವಿನ ಕುಟುಂಬಸ್ಥರಲ್ಲಿ ನೀವು ಮಗಳನ್ನು ದತ್ತು ತೆಗೆದುಕೊಂಡಿದ್ದಾ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ವಧುವಿನ ಮನೆಯವರು ಹೌದು, ತಾವು ಈಕೆಯನ್ನು ದತ್ತು ಪಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಕುಟುಂಬವು ದತ್ತು ಸ್ವೀಕಾರವನ್ನು ದೃಢಪಡಿಸಿದಾಗ, ವರನ ತಾಯಿ ಗೊಳೋ ಎಂದು ಅಳೋದಕ್ಕೆ ಶುರು ಮಾಡಿದ್ದಾಳೆ. ತನ್ನ ಕಾಣೆಯಾಗಿರುವ ಮಗಳೇ ಇವಳು ಎಂದು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ವಧು ಕೂಡ ಕಣ್ಣೀರು ಸುರಿಸುತ್ತಾ, ತಾನು ಕೂಡ ತನಗೆ ಜನ್ಮವಿತ್ತ ತಾಯಿಯನ್ನು ಹುಡುಕುತ್ತಿದ್ದೆ ಎಂದು ಹೇಳಿದ್ದಾಳೆ. ಅಂತೂ ಎಷ್ಟೋ ವರ್ಷದ ಬಳಿಕ ತಾಯಿ-ಮಗಳು ಒಂದಾಗಿದ್ದು ಎಲ್ಲರಲ್ಲೂ ಸಂತಸ ತಂದಿತ್ತು.
ಇನ್ನು ವರನ ತಾಯಿಯು ವಧು ತನ್ನ ಮಗಳು ಎಂದು ಗೊತ್ತಾದರೂ ತನ್ನ ಮಗನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದಳು. ಕುಟುಂಬಸ್ಥರು ಸೇರಿ ಮದುವೆ ಮಾಡಿದ್ದಾರೆ. ಏಕೆಂದರೆ ವರ ಆಕೆಯ ಸ್ವಂತ ಮಗನಾಗಿರಲಿಲ್ಲ. ಮಗಳು ಕಾಣೆಯಾದ ಬಳಿಕ ಗಂಡು ಮಗುವನ್ನು ಆಕೆ ದತ್ತು ಪಡೆದಿದ್ದಳು. ವರ-ವಧು ರಕ್ತಸಂಬಂಧಿಗಳಾಗಿರದೇ ಇದ್ದುದರಿಂದ ಇಬ್ಬರಿಗೂ ಮದುವೆ ಮಾಡಲಾಯಿತು.
ವಧುವಿನ ಪೋಷಕರಿಗೆ ಕಾಣೆಯಾದ ಮಗು ಸಿಕ್ಕಿದ್ದು ಹೇಗೆ?
ವರನ ತಾಯಿ ವಧುವಿನ ಬಗ್ಗೆ ಪೋಷಕರಲ್ಲಿ ಕೇಳಿದಾಗೆ, ಆಕೆ ಮಗುವಿದ್ದಾಗ ರಸ್ತೆಬದಿಯಲ್ಲಿ ಅನಾಥವಾಗಿ ಸಿಕ್ಕಳು. ಯಾರೋ ತಂದು ಬಿಟ್ಟಿರಬಹುದು ಎಂದು ಅಂದುಕೊಂಡೆವು. ಅವಳು ಶಿಶುವಾಗಿದ್ದ ಕಾರಣ ತಮ್ಮ ಮಗಳಂತೆ ಬೆಳೆಸಲು ನಿರ್ಧರಿಸಿದ್ದಾಗಿ ದಂಪತಿ ಹೇಳಿದ್ರು. ತಾಯಿ-ಮಗಳ ಈ ಪುನರ್ಮಿಲನದ ವಿಚಾರ ತಿಳಿದ ನೆಟ್ಟಿಗರು ಕೂಡ ಆನಂದಭಾಷ್ಪ ಸುರಿಸಿದ್ದಾರೆ. ಇನ್ನು ಕೆಲವರು, ವಧು ಬಾಲ್ಯದಲ್ಲಿ ಹೇಗೆ ಕಳೆದುಹೋದಳು ಎಂಬುದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವುದಾಗಿ ಹೇಳಿದರು. ಈ ಕಥೆ ಒಂದು ಉತ್ತಮ ಟಿವಿ ನಾಟಕವಾಗುವುದರಲ್ಲಿ ಸಂಶಯವಿಲ್ಲ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಉಚಿತ ವೀರ್ಯ ದಾನ ಆಫರ್ ಕೊಟ್ಟ ವ್ಯಕ್ತಿ; ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಯಿತು ಪರ-ವಿರೋಧ