Viral Video: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನಿಗೆ ಕಾದಿತ್ತು ಶಾಕ್; ಆಚಾನಕ್ಕಾಗಿ ಸ್ಫೋಟಗೊಂಡ ಕೇಕ್!
Birthday Prank Goes Wrong: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನೊಬ್ಬ ಇನ್ನೇನು ಕೇಕ್ ಕಟ್ ಮಾಡಬೇಕು ಅನ್ನೋವಷ್ಟರಲ್ಲಿ ಅದು ಸ್ಫೋಟಗೊಂಡಿದೆ. ಈ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಒಂದು ಕೈಯಲ್ಲಿ ಕೇಕ್ ಹಿಡಿದುಕೊಂಡು ಸಂಭ್ರಮಿಸುತ್ತಿರುವಾಗ ಅದು ಬ್ಲಾಸ್ಟ್ ಆಗಿದೆ.


ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನಿಗೆ ಭಾರೀ ಶಾಕ್ ಕಾದಿತ್ತು. ಇನ್ನೇನು ಕೇಕ್ ಕಟ್ ಮಾಡಬೇಕು ಅನ್ನೋವಷ್ಟರಲ್ಲಿ ಅದು ಸ್ಫೋಟಗೊಂಡಿದೆ. ಈ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವೈರಲ್ ಆಗಿದೆ. ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ. ವ್ಯಕ್ತಿಯೊಬ್ಬ ಮೋಜು ಮಾಡುತ್ತಾ, ತುಂಬಾ ಖುಷಿಯಾಗಿ ತನ್ನ ಹುಟ್ಟುಹಬ್ಬ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ. ಒಂದು ಕೈಯಲ್ಲಿ ಕೇಕ್ ಹಿಡಿದುಕೊಂಡು ಸಂಭ್ರಮಿಸುತ್ತಿರುವಾಗ ಅದು ಬ್ಲಾಸ್ಟ್ (Blast) ಆಗಿದೆ.
ವೈರಲ್ ವಿಡಿಯೊದಲ್ಲಿ (Viral Video), ಯುವಕನು ತನ್ನ ಸ್ನೇಹಿತರೊಂದಿಗೆ ಮೋಜು ಮಾಡುತ್ತಿರುವಂತೆ ಕಾಣುತ್ತಿದೆ. ಒಂದು ಕೈಯಲ್ಲಿ ತನ್ನ ಹುಟ್ಟುಹಬ್ಬದ ಕೇಕ್ ಮತ್ತು ಇನ್ನೊಂದು ಕೈಯಲ್ಲಿ ಏನನ್ನೋ ಹುರಿಯುತ್ತಿದ್ದಾನೆ. ಅವನು ಕೇಕ್ ಅನ್ನು ತನ್ನ ಮುಖದ ಹತ್ತಿರ ಹಿಡಿದಿರುವುದನ್ನು ಕಾಣಬಹುದು. ಈ ವೇಳೆ ಇದ್ದಕ್ಕಿದ್ದಂತೆ ಕೇಕ್ ಸ್ಫೋಟಗೊಂಡಿದೆ. ಈ ವೇಳೆ ಅದು ದೊಡ್ಡ ಶಬ್ಧ ಸೃಷ್ಟಿಸಿದೆ.
ವಿಡಿಯೊ ವೀಕ್ಷಿಸಿ:
ಇನ್ನು ಕೇಕ್ ಬ್ಲಾಸ್ಟ್ ಆಗುತ್ತಿದ್ದಂತೆ ಬರ್ತ್ ಡೇ ಬಾಯ್ ದಿಗ್ಭ್ರಮೆಗೊಂಡಿದ್ದಾನೆ. ಏನಾಯಿತು ಎಂದು ಅವನಿಗೆ ಯೋಚಿಸಲು ಸಾಧ್ಯವಾಗಲಿಲ್ಲ. ತನ್ನ ಕೈಯಲ್ಲಿದ್ದ ಕೇಕ್‍ನ ಉಳಿದ ಭಾಗವನ್ನು ಎಸೆದು, ಆತಂಕದಿಂದ ಕಣ್ಣುಗಳನ್ನು ಉಜ್ಜುತ್ತಾ ಅಡುಗೆಮನೆಯತ್ತ ಹೋಗಿದ್ದಾನೆ.
ಈ ಸುದ್ದಿಯನ್ನೂ ಓದಿ: Ceasefire Violation: ಪಾಕ್ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಬಾಲಿವುಡ್‌ನ ಈ ಸಿನಿಮಾ ಸೀನ್ ಫುಲ್ ವೈರಲ್-ಅಂತಹದ್ದೇನಿದೆ ಇದರಲ್ಲಿ?
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆ ಕೇಕ್‌ನಲ್ಲಿ ಪಟಾಕಿ ಇಟ್ಟಿರಬಹುದು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅಬ್ಬಾ.. ಭಯಾನಕವಾಗಿದೆ, ಬಹುಷಃ ಆತ ಗಾಯಗೊಂಡಿರಬಹುದು ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಪುರುಷರು ಮಹಿಳೆಯರಿಗಿಂತ ಮೊದಲೇ ಸಾಯಲು ಇದು ಮತ್ತೊಂದು ಕಾರಣ ಎಂದು ಮಗದೊಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ. ಆ ಯುವಕನಿಗೆ ತನ್ನ ಹುಟ್ಟುಹಬ್ಬವು ಎಂದು ಮರೆಯಲಾಗದ್ದು ಎಂದು ಒಬ್ಬ ವ್ಯಕ್ತಿಯೊಬ್ಬರು ಹಾಸ್ಯಚಟಾಕಿ ಹಾರಿಸಿದ್ದಾರೆ.