Viral Video: ಪಕ್ಕದಲ್ಲಿ ಕುಳಿತ ಯುವತಿಯ ಬ್ಲೌಸ್ ಒಳಗೆ ಕೈ ಹಾಕಿದ ಕಾಮುಕ! ಕಿಡಿಗೇಡಿ ಕೃತ್ಯದ ವಿಡಿಯೊ ನೋಡಿ
Kerala Woman Shows Courage: ಶೇ.100 ರಷ್ಟು ಸಾಕ್ಷರತೆ ಇರುವ ಕೇರಳದಲ್ಲಿ ನಡೆದ ಆಘಾತಕಾರಿ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆತಂರ ಜೊತೆಗೆ ಪ್ರಶಂಸೆಯನ್ನೂ ತಂದಿದೆ. ಸಹಪ್ರಯಾಣಿಕ ಲೈಂಗಿಕ ಕಿರುಕುಳ ನೀಡಿದಾಗ ಧೃತಿಗೆಡದ ಯುವತಿ, ದೃಶ್ಯವನ್ನು ಚಿತ್ರೀಕರಿಸಿದ್ದಲ್ಲದೆ ಕಪಾಳಮೋಕ್ಷ ಮಾಡಿದ್ದಾಳೆ.
ಮಹಿಳೆಗೆ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಿಡಿಗೇಡಿ -
ತಿರುವನಂತಪುರ: ಸಾರ್ವಜನಿಕ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಸಹ ಪ್ರಯಾಣಿಕರಿಂದ ಲೈಂಗಿಕ ಕಿರುಕುಳಕ್ಕೊಳಗಾದರೂ ಧೈರ್ಯದಿಂದ ಎದುರಿಸಿದ್ದಾಳೆ. ಕೇರಳದ (Kerala) ತಿರುವನಂತಪುರ ಜಿಲ್ಲೆಯ ಕಟ್ಟಕಡ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೌನವಾಗಿರುವ ಬದಲು, ಆ ವ್ಯಕ್ತಿಯ ಕೃತ್ಯಗಳನ್ನು ಮೊದಲು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿ ನಂತರ ಆತನನ್ನು ಎದುರಿಸಿದ್ದಾಳೆ. ಬಸ್ ಕಂಡಕ್ಟರ್ ತಕ್ಷಣ ಅವಳ ರಕ್ಷಣೆಗೆ ಬಂದರೂ, ಇತರ ಪ್ರಯಾಣಿಕರಲ್ಲಿ ಯಾರೂ ಕೂಡ ತಮ್ಮ ಆಸನಗಳಿಂದ ಕದಲಲಿಲ್ಲ. ಯುವಕ ಅನುಚಿತವಾಗಿ ವರ್ತಿಸಿರುವ ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಈ ವಿಡಿಯೊದಲ್ಲಿ, ಒಬ್ಬ ವ್ಯಕ್ತಿ ಬಸ್ಸಿನಲ್ಲಿ ಯುವತಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ವಾಹನದ ಚಲನೆಯನ್ನು ನೆಪವಾಗಿ ಬಳಸುತ್ತಿದ್ದಂತೆ ತೋರುತ್ತಿದ್ದು, ಆಗಾಗ ಸ್ಪರ್ಶಿಸುತ್ತಿದ್ದ. ಶೀಘ್ರದಲ್ಲೇ ಅವನ ನಡವಳಿಕೆ ತೀವ್ರಗೊಂಡಿತು. ಧೃತಿಗೆಡದ ಯುವತಿಯು ಆತನನ್ನು ಎದುರಿಸಲು ಮುಂದಾಗಿದ್ದಾಳೆ. ಮೊದಲಿಗೆ ಘಟನೆಯನ್ನು ತನ್ನ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದಾಳೆ. ಆತನ ಕೈಗೆ ಹೊಡೆದು ನಂತರ ಅವನ ಮುಖವನ್ನು ಕ್ಯಾಮರಾಗೆ ತೋರಿಸುತ್ತಾ ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ.
ಇದನ್ನೂ ಓದಿ: Viral Video: "ನೀವು ಶ್ರೇಷ್ಠರಂತೆ ನಟಿಸುವುದು ಬೇಡ"; ಭಾರತೀಯ ವ್ಯಕ್ತಿ ಮೇಲೆ ಜನಾಂಗೀಯ ದಾಳಿ, ವಿಡಿಯೋ ವೈರಲ್
ಚಲಿಸುತ್ತಿರುವ ಬಸ್ಸಿನಲ್ಲಿ ಇತರ ಪ್ರಯಾಣಿಕರು ಘಟನೆ ನಡೆಯುವುದನ್ನು ನೋಡುತ್ತಿದ್ದರೂ ಯಾರೂ ಕೂಡ ಆಕೆಯ ಸಹಾಯಕ್ಕೆ ಧಾವಿಸಲಿಲ್ಲ. ಅವಳು ಆ ವ್ಯಕ್ತಿಗೆ ಹೊಡೆಯುವುದನ್ನು ಮುಂದುವರಿಸಿದಳು. ಇದನ್ನು ಗಮನಿಸಿದ ಬಸ್ ಕಂಡಕ್ಟರ್ ಆಕೆಯ ಬಳಿಗೆ ಬಂದು ವಿಚಾರಿಸಿದ್ದಾರೆ. ಯುವತಿ ಆ ವ್ಯಕ್ತಿ ತನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾನೆಂದು ತಿಳಿಸಿದಳು. ಬಳಿಕ ಕಂಡಕ್ಟರ್ ಯಾವ ರೀತಿ ವರ್ತಿಸಿದರು ಹಾಗೂ ಆ ಯುವತಿ ಆರೋಪಿ ವಿರುದ್ಧ ಯಾವುದೇ ದೂರು ದಾಖಲಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೊ ವೀಕ್ಷಿಸಿ:
Young Woman slaps man on Kerala’s Kattakada bus after harassment as he tries to touch her inappropriately; touched thighs and reach beneath her t.shirt despite her visible discomfort: VIDEO GOES VIRAL
— The Truth India (@thetruthin) November 6, 2025
The clip, now viral, has sparked outrage online, with users tagging… pic.twitter.com/mQKjkPQDY7
ಅನೇಕರು ಯುವತಿಯ ಧೈರ್ಯವನ್ನು ಹೊಗಳಿದರೆ, ಇನ್ನು ಕೆಲವರು ಪುರುಷನ ವರ್ತನೆಯ ಬಗ್ಗೆ ತಮ್ಮ ಆಕ್ರೋಶ ಮತ್ತು ಅಸಹ್ಯವನ್ನು ವ್ಯಕ್ತಪಡಿಸಿದರು. ಶೇ. 100 ರಷ್ಟು ಸಾಕ್ಷರತೆ ಕೂಡ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಒಬ್ಬ ಬಳಕೆದಾರರು ಹೇಳಿದರು. ಮಹಿಳೆಯರು ಎಲ್ಲೆಡೆ ಇಂತಹ ನಡವಳಿಕೆಯನ್ನು ಸಹಿಸಿಕೊಳ್ಳಬೇಕು ಎಂದು ಮತ್ತೊಬ್ಬ ಬಳಕೆದಾರರು ಬೇಸರ ಹೊರಹಾಕಿದ್ದಾರೆ.
ಖಂಡಿತ ಇದು ಅಸಹ್ಯಕರ ನಡವಳಿಕೆ. ಇದನ್ನು ಎಂದಿಗೂ ಸಹಿಸಬಾರದು. ಸಾರ್ವಜನಿಕವಾಗಿ ಲೈಂಗಿಕ ದೌರ್ಜನ್ಯ ನಡೆಸುವವರನ್ನು ಗುರುತಿಸಿ, ಅವಮಾನಿಸಿ, ಪೊಲೀಸರಿಗೆ ಒಪ್ಪಿಸಬೇಕು. ಇದರಿಂದ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗುತ್ತದೆ ಮತ್ತು ಆತ ಕಾನೂನು ಪರಿಣಾಮಗಳನ್ನು ಎದುರಿಸಲಬೇಕಾಗುತ್ತದೆ. ಈ ಕೃತ್ಯವೆಸಗಿದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಮಹಿಳೆಯರನ್ನು ಗೌರವಿಸಿ ಎಂದು ಮತ್ತೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ.
ಈ ಘಟನೆಯು ಭಾರತದಲ್ಲಿ ಮಹಿಳಾ ಸುರಕ್ಷತೆಯ ಕುರಿತಾದ ಚರ್ಚೆಗಳನ್ನು ಮತ್ತೊಮ್ಮೆ ಹುಟ್ಟುಹಾಕಿದೆ. ಕಿರುಕುಳಕ್ಕೆ ನ್ಯಾಯವನ್ನು ಪಡೆಯುವಲ್ಲಿ ಅನೇಕರು ಎದುರಿಸುತ್ತಿರುವ ನಿರಂತರ ಸವಾಲುಗಳನ್ನು ಪುನರುಜ್ಜೀವನಗೊಳಿಸಿದೆ.