ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ನಿಂದ ಹೊರ ಬೀಳಲಿರುವ ಆಟಗಾರರು!

ಮುಂಬೈ ಇಂಡಿಯನ್ಸ್ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಮುಂಬೈ ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ ಆದರೆ 2020ರ ಬಳಿಕ ಒಮ್ಮೆಯೂ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅಂದ ಹಾಗೆ 2026ರ ಐಪಿಎಲ್‌ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ ರಿಲೀಸ್‌ ಮಾಡಲಿರುವ ಆಟಗಾರರ ಪಟ್ಟಿಯನ್ನು ಇಲ್ಲಿ ವಿವರಿಸಲಾಗಿದೆ.

IPL 2026: ಮುಂಬೈ ಇಂಡಿಯನ್ಸ್‌ನಿಂದ ರಿಲೀಸ್‌ ಆಗಲಿರುವ ಆಟಗಾರರು!

ಮುಂಬೈ ಇಂಡಿಯನ್ಸ್‌ ಬಿಡುಗಡೆ ಮಾಡಬಲ್ಲ ಆಟಗಾರರ ವಿವರ. -

Profile
Ramesh Kote Nov 7, 2025 8:56 PM

ನವದೆಹಲಿ: ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಎರಡನೇ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ನಂತರ ಅವರ ಪಯಣ ಅಲ್ಲಿಗೆ ಕೊನೆಗೊಂಡಿತು. ಮುಂಬೈ ಮೊದಲ ಐದು ಪಂದ್ಯಗಳಲ್ಲಿ ನಾಲ್ಕು ಸೋಲುಗಳನ್ನು ಅನುಭವಿಸಿತು. ಇದರ ನಂತರ, ತಂಡವು ಏಳು ಸತತ ಪಂದ್ಯಗಳನ್ನು ಗೆದ್ದಿತು. ಆ ಮೂಲಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು. ಆ ಮೂಲಕ ನಾಲ್ಕನೇ ಸ್ಥಾನವನ್ನು ಅಲಂಕರಿಸಿತ್ತು.

2026ರ ಐಪಿಎಲ್‌ ಟೂರ್ನಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ನವೆಂಬರ್ 15 ರೊಳಗೆ ತಮ್ಮ ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗಿದೆ. ಅದರಂತೆ ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಬಹುದಾದ ಐವರು ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

IPL 2026: ಎಂಎಸ್‌ ಧೋನಿ ಮುಂದಿನ ಐಪಿಎಲ್‌ ಟೂರ್ನಿಯಲ್ಲಿ ಆಡಲಿದ್ದಾರೆಂದ ಸಿಎಸ್‌ಕೆ ಸಿಇಒ!

1.ರೀಸ್‌ ಟಾಪ್ಲಿ

ಇಂಗ್ಲೆಂಡ್ ವೇಗದ ಬೌಲರ್ ರೀಸ್ ಟಾಪ್ಲಿಗೆ ಮುಂಬೈ ಇಂಡಿಯನ್ಸ್ 2025ರ ಐಪಿಎಲ್‌ನಲ್ಲಿ ಒಂದು ಪಂದ್ಯವನ್ನು ಆಡಲು ಅವಕಾಶ ನೀಡಿತು. ಅವರು ಪಂಜಾಬ್ ಕಿಂಗ್ಸ್ ವಿರುದ್ಧದ ಕ್ವಾಲಿಫೈಯರ್ ಎರಡರಲ್ಲಿ ಮೂರು ಓವರ್‌ಗಳಲ್ಲಿ 40 ರನ್‌ಗಳನ್ನು ಬಿಟ್ಟುಕೊಟ್ಟರು. ಅವರು ಬಹಳ ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಿದ್ದಾರೆ.

2.ದೀಪಕ್‌ ಚಹರ್‌

2024ರ ಐಪಿಎಲ್ ಮೆಗಾ ಹರಾಜಿನಲ್ಲಿ ದೀಪಕ್ ಚಹರ್ ಅವರನ್ನು ಮುಂಬೈ ಇಂಡಿಯನ್ಸ್ 9.25 ಕೋಟಿ (9.25 ಕೋಟಿ) ರು. ಗೆ ಖರೀದಿಸಿತು. ಅವರು ಋತುವಿನಲ್ಲಿ ಪ್ರಭಾವ ಬೀರಲು ವಿಫಲರಾದರು. ಅವರು 14 ಪಂದ್ಯಗಳಲ್ಲಿ ಕೇವಲ 11 ವಿಕೆಟ್‌ಗಳನ್ನು ಕಬಳಿಸಿದರು ಮತ್ತು 9 ಕ್ಕಿಂತ ಹೆಚ್ಚು ಎಕಾನಮಿ ರೇಟ್ ಹೊಂದಿದ್ದರು. ಇದು ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಲು ಕಾರಣವಾಗಬಹುದು.

IPL 2026: ಕೆಎಲ್‌ ರಾಹುಲ್‌ ಬದಲಿಗೆ ಇಬ್ಬರು ಆಟಗಾರರಿಗೆ ಬೇಡಿಕೆ ಮುಂದಿಟ್ಟ ಡೆಲ್ಲಿ ಫ್ರಾಂಚೈಸಿ!

3 .ರಾಬಿನ್‌ ಮಿಂಝ್‌

ಜಾರ್ಖಂಡ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಾಬಿನ್ ಮಿಂಝ್ ಅವರನ್ನು ಮುಂಬೈ ಇಂಡಿಯನ್ಸ್ ಹೆಚ್ಚಿನ ಭರವಸೆಯೊಂದಿಗೆ ಖರೀದಿಸಿತು. ಎರಡು ಪಂದ್ಯಗಳಲ್ಲಿ ಅವರು 15 ಎಸೆತಗಳನ್ನು ಎದುರಿಸಿದರು ಮತ್ತು ಕೇವಲ 6 ರನ್‌ಗಳನ್ನು ಗಳಿಸಿದರು. ಮಿಂಝ್‌ ಕ್ರೀಸ್‌ನಲ್ಲಿ ಬ್ಯಾಟ್‌ ಮಾಡಲು ಕಷ್ಟಪಟ್ಟರು ಮತ್ತು ಅವರನ್ನು ಬಿಡುಗಡೆ ಮಾಡಬಹುದು.

4.ಮುಜೀರ್‌ ಉರ್‌ ರೆಹಮಾನ್‌

ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಅವರನ್ನು ಬದಲಿ ಆಟಗಾರನ ಸ್ಥಾನಕ್ಕೆ ತೆಗೆದುಕೊಂಡಿತ್ತು. ಫ್ರಾಂಚೈಸಿ ಪರ ಆಡಿದ್ದಕ್ಕಾಗಿ ಅವರಿಗೆ 2 ಕೋಟಿ (2 ಕೋಟಿ ರೂಪಾಯಿ) ಸಂಭಾವನೆ ನೀಡಲಾಯಿತು. ಮುಜೀಬ್‌ಗೆ ಕೇವಲ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತು ಮತ್ತು ಅವರ ಬಿಡುಗಡೆ ಖಚಿತವಾಗಿದೆ.

IPL 2026: ಕೆಎಲ್‌ ರಾಹುಲ್‌ ಬದಲಿಗೆ ಇಬ್ಬರು ಆಟಗಾರರಿಗೆ ಬೇಡಿಕೆ ಮುಂದಿಟ್ಟ ಡೆಲ್ಲಿ ಫ್ರಾಂಚೈಸಿ!

5.ಮಿಚೆಲ್‌ ಸ್ಯಾಂಟ್ನರ್‌

ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ 2025ರ ಇಂಡಿಯನ್‌ ಪ್ರೀಮಿುಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ನ ಪ್ರಮುಖ ಸ್ಪಿನ್ನರ್ ಆಗಿದ್ದರು. ಅವರು ಮಧ್ಯಮ ಓವರ್‌ಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕಿದ್ದರೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಹಾಗಾಗಿ ಸ್ಯಾಂಟ್ನರ್ ಅವರನ್ನು 2 ಕೋಟಿ ರು. ಗೆ ಬಿಡುಗಡೆ ಮಾಡುವ ಮೂಲಕ, ಮುಂಬೈ ಫ್ರಾಂಚೈಸಿ ಹರಾಜಿನಲ್ಲಿ ವಿಕೆಟ್‌ ಟೇಲರ್‌ ಬೌಲರ್‌ಗೆ ಮಣೆ ಹಾಕಬಹುದು.