chitradurga News: ಒಂದೇ ದಿನ ಇಬ್ಬರು ಯುವತಿಯರನ್ನು ಮದುವೆಯಾದ ವರ ಮಹಾಶಯ
Viral news: ವಧುಗಳಾದ ಶಿಫಾ ಶೈಖ್ (25 ವರ್ಷ) ಮತ್ತು ಜನ್ನತ್ ಮಖಂದರ್ (24 ವರ್ಷ) ಇಬ್ಬರೂ ಚಿತ್ರದುರ್ಗದಲ್ಲೇ ವಾಸಿಸಿದವರು. ಮೂವರೂ ಒಂದೇ ಕಾಲೇಜ್‌ನಲ್ಲಿ ಓದಿದ್ದರು. ಇಬ್ಬರ ಸ್ನೇಹ ಪ್ರೀತಿಯಾಗಿ ಮಾರ್ಪಾಡಾಗಿತ್ತು. ಮೂವರೂ ತಮ್ಮ ಸಂಬಂಧವನ್ನು ಒಂದೇ ಮದುವೆಯಲ್ಲಿ ಸ್ಥಿರಪಡಿಸಲು ನಿರ್ಧರಿಸಿದ್ದರು.

-

ಚಿತ್ರದುರ್ಗ : ಚಿತ್ರದುರ್ಗದಲ್ಲಿ ನಡೆದ ಒಂದು ವಿಚಿತ್ರ ಮದುವೆ (starnge Marriage) ಇದೀಗ ಎಲ್ಲರ ಗಮನ ಸೆಳೆದಿದೆ. ಒಬ್ಬ ಹುಡುಗಿಯೂ ಸಿಗ್ತಿಲ್ಲ ಎಂಬ ಕಾಲದಲ್ಲಿ ಇಲ್ಲೊಬ್ಬ ಯುವಕ ಒಂದೇ ದಿನ ಇಬ್ಬರು ಹುಡುಗಿಯರನ್ನು ಒಂದೇ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದಾನೆ. ಚಿತ್ರದುರ್ಗದಲ್ಲಿ (Chitradurga news) ನಡೆದ ಈ ಮದುವೆಯ ಫೋಟೋ ವಿಡಿಯೋಗಳು ವೈರಲ್ (viral news) ಆಗಿವೆ.
ಚಿತ್ರದುರ್ಗ ನಗರದ ಹೊರಪೇಟೆಯ ಯುವಕ ವಸೀಮ್ ಶೈಖ್ ಅವರು ತನ್ನ ಇಬ್ಬರು ಸ್ನೇಹಿತೆಯರಾದ ಶಿಫಾ ಶೈಖ್ ಮತ್ತು ಜನ್ನತ್ ಮಖಂದರ್ ಅವರನ್ನು ಒಂದೇ ದಿನ ಮದುವೆಯಾಗಿದ್ದಾರೆ. ಇವರಿಬ್ಬರೂ ಕೂಡ ಸ್ನೇಹಿತೆಯರೇ ಆಗಿದ್ದು, ಮದುವೆ ನಗರದ ಎಂ ಕೆ ಪ್ಯಾಲೇಸ್‌ನಲ್ಲಿ ನಡೆಯಿತು. ಚಿತ್ರದುರ್ಗದ ಹೊರಪೇಟೆಯಲ್ಲಿ ವಾಸಿಸುವ 28 ವರ್ಷದ ಯುವಕ ವಸೀಮ್ ಶೈಖ್ ಇಬ್ಬರು ಯುವತಿಯರೊಂದಿಗೆ ಚಿಕ್ಕ ವಯಸ್ಸಿನಿಂದ ಸ್ನೇಹಿತನಾಗಿದ್ದಾರೆ.
ಇದನ್ನೂ ಓದಿ: Jasprit Bumrah: ಪಾಪರಾಜಿಗಳ ಕಾಟಕ್ಕೆ ತಾಳ್ಮೆ ಕಳೆದುಕೊಂಡ ಬುಮ್ರಾ; ವಿಡಿಯೊ ವೈರಲ್
ವಧುಗಳಾದ ಶಿಫಾ ಶೈಖ್ (25 ವರ್ಷ) ಮತ್ತು ಜನ್ನತ್ ಮಖಂದರ್ (24 ವರ್ಷ) ಇಬ್ಬರೂ ಚಿತ್ರದುರ್ಗದಲ್ಲೇ ವಾಸಿಸಿದವರು. ಮೂವರೂ ಒಂದೇ ಕಾಲೇಜ್‌ನಲ್ಲಿ ಓದಿದ್ದರು. ಇಬ್ಬರ ಸ್ನೇಹ ಪ್ರೀತಿಯಾಗಿ ಮಾರ್ಪಾಡಾಗಿತ್ತು. ಮೂವರೂ ತಮ್ಮ ಸಂಬಂಧವನ್ನು ಒಂದೇ ಮದುವೆಯಲ್ಲಿ ಸ್ಥಿರಪಡಿಸಲು ನಿರ್ಧರಿಸಿದ್ದರು. ಈ ನಿರ್ಧಾರವನ್ನು ಮೂವರ ಕುಟುಂಬಗಳೂ ಒಪ್ಪಿವೆ.
ಮದುವೆ ಎಂಕೆ ಪ್ಯಾಲೇಸ್‌ನಲ್ಲಿ ನಡೆದಿದ್ದು, ಸುಮಾರು 200 ಜನರು ಭಾಗವಹಿಸಿದ್ದರು. ಮದುವೆಯ ವೀಡಿಯೊಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಹರಡಿ, ಲಕ್ಷಾಂತರ ವ್ಯೂಗಳನ್ನು ಪಡೆದಿವೆ. "ಪ್ರೀತಿ ಮುಖ್ಯ. ಸಮಾಜದ ನಿಯಮಗಳನ್ನು ಮೀರಿ, ನಾವು ಸುಖವಾಗಿ ಬದುಕಬೇಕು" ಎಂದು ವಸೀಮ್ ಹೇಳಿದ್ದಾರೆ. ಶಿಫಾ "ನಾವು ಮೂವರು ಒಟ್ಟಾಗಿದ್ದು ಖುಷಿ. ಇದು ನಮ್ಮ ನಿರ್ಧಾರ" ಎಂದಿದ್ದಾರೆ.