ಡೊನಾಲ್ಡ್ ಟ್ರಂಪ್ ಕತ್ತಿನ ಬಳಿ ಕೆಂಪು ಕಲೆ; ಚರ್ಮದ ತೊಂದರೆಯಿಂದ ಬಳಲುತ್ತಿದ್ದಾರೆಯೇ ಅಮೆರಿಕ ಅಧ್ಯಕ್ಷ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಅವರ ಕುತ್ತಿಗೆ ಭಾಗ ಕೆಂಪಾಗಿರುವುದನ್ನು ತೋರಿಸಲಾಗಿದೆ. ಇದು ಕೆಲವು ಕ್ರೀಮ್ ಬಳಕೆಯಿಂದ ಉಂಟಾಗಿರುವ ಅಲರ್ಜಿಯಾಗಿರಬಹುದು ಎನ್ನಲಾಗುತ್ತಿದೆ. ಫೆಬ್ರವರಿ 19ರಂದು ನಡೆದ ಶಾಂತಿ ಮಂಡಳಿಯ ಸಭೆಯ ಸಮಯದಲ್ಲಿ ಈ ಚಿತ್ರವನ್ನು ತೆಗೆಯಲಾಗಿತ್ತು.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President donald trump) ಅವರಿಗೆ ಚರ್ಮದ ತೊಂದರೆ (skin allergy) ಕಾಣಿಸಿಕೊಂಡಿದೆಯೇ ? ಇಂತಹ ಒಂದು ಪ್ರಶ್ನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ (Viral News) ಹರಿದಾಡುತ್ತಿದೆ. ಯಾಕೆಂದರೆ ಫೆಬ್ರವರಿ 19ರಂದು ನಡೆದ ಶಾಂತಿ ಮಂಡಳಿಯ ಸಭೆಯ ಸಮಯದಲ್ಲಿ ತೆಗೆದಿರುವ ಅವರ ಚಿತ್ರವೊಂದರಲ್ಲಿ ಅವರ ಕುತ್ತಿಗೆ ಭಾಗ ಕೆಂಪಾಗಿರುವುದನ್ನು ತೋರಿಸಲಾಗಿದೆ. ಇದು ಇದು ಕೆಲವು ಕ್ರೀಮ್ ಬಳಕೆಯಿಂದ ಉಂಟಾಗಿರುವ ಅಲರ್ಜಿ ಎನ್ನಲಾಗುತ್ತಿದೆ. ಆದರೆ ಟ್ರಂಪ್ ಅವರ ಕುತ್ತಿಗೆಯಲ್ಲಿ ಉಂಟಾಗಿರುವ ಕೆಂಪು ಬಣ್ಣಕ್ಕೆ ಕಾರಣವೇನು ಎಂಬುದರ ಕುರಿತು ಶ್ವೇತಭವನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಡೊನಾಲ್ಡ್ ಟ್ರಂಪ್ ಅವರ ಕುತ್ತಿಗೆಯಲ್ಲಿ ಕೆಂಪು ದದ್ದು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎನ್ನುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಫೆಬ್ರವರಿ 19ರಂದು ನಡೆದ ಶಾಂತಿ ಮಂಡಳಿಯ ಸಭೆಯ ಸಮಯದಲ್ಲಿ ತೆಗೆದಿರುವ ಚಿತ್ರ ಇದಾಗಿದ್ದು, ಇದರಲ್ಲಿ ಟ್ರಂಪ್ ಅವರ ಕುತ್ತಿಗೆಯಲ್ಲಿ ಕೆಂಪು ಬಣ್ಣ ಇರುವುದನ್ನು ಕಾಣಬಹುದಾಗಿದೆ.
ದೆಹಲಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಖಮೇನಿ ಫೋಟೊ ಇರುವ ಮೊಬೈಲ್ ಕವರ್ ಮಾರಾಟ: ವಿಡಿಯೊ ವೈರಲ್
ಅಮೆರಿಕ ಅಧ್ಯಕ್ಷರ ಆರೋಗ್ಯದ ಬಗ್ಗೆ ಅನೇಕರು ಕಾಳಜಿ ವ್ಯಕ್ತಪಡಿಸಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಕುತ್ತಿಗೆಯ ಬದಿಯಲ್ಲಿ ಕೆಂಪು ದದ್ದುಗಳು ಸೋಮವಾರ ನಡೆದ ಮೆಡಲ್ ಆಫ್ ಆನರ್ ಸಮಾರಂಭದ ಸಮಯದಲ್ಲಿ ಕಂಡು ಬಂದಿತ್ತು. ಸಮಾರಂಭದ ಫೋಟೋಗಳು ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿದ್ದಂತೆ ಅವರ ವೈದ್ಯರು ಇದು ಚಿಕಿತ್ಸೆ ಪಡೆಯಲೇಬೇಕಾದ ಚರ್ಮದ ತೊಂದರೆ ಎಂದು ಹೇಳಿದ್ದರು. ಇದು ಅಮೆರಿಕ ಅಧ್ಯಕ್ಷರಿಗೆ ಆಗಿರುವ ತೊಂದರೆಯ ಬಗ್ಗೆ ಚರ್ಚಿಸುವಂತೆ ಮಾಡಿತು.
ರ‍್ಯಾಪಿಡೋ ಬುಕ್ ಮಾಡಿದ ಯುವತಿಗೆ ಸರ್‌ಪ್ರೈಸ್: ಸಾಮಾನ್ಯ ಸ್ಕೂಟರ್ ಬದಲಿಗೆ ಬಂದಿದ್ದು BMW ಬೈಕ್!
ಕೆಲವು ಕ್ರೀಮ್‌ಗಳು ಕುತ್ತಿಗೆ ಚರ್ಮದಂತಹ ದೇಹದ ಸೂಕ್ಷ್ಮ ಪ್ರದೇಶಗಳಲ್ಲಿ ಕೆಂಪು ಬಣ್ಣವನ್ನು ಉಂಟುಮಾಡುತ್ತವೆ. ಟ್ರಂಪ್ ಅವರು ಕುತ್ತಿಗೆಯ ಬಲಭಾಗದಲ್ಲಿ ಬಹಳ ಸಾಮಾನ್ಯವಾದ ಕ್ರೀಮ್ ಅನ್ನು ಬಳಸುತ್ತಿದ್ದಾರೆ. ಇದು ಅವರ ಚರ್ಮಕ್ಕೆ ನೀಡುವ ಚಿಕಿತ್ಸೆಯಾಗಿದೆ. ಒಂದು ವಾರದಿಂದ ಅವರು ಇದನ್ನು ಮಾಡುತ್ತಿದ್ದಾರೆ. ಕೆಲವು ವಾರಗಳ ವರೆಗೆ ಈ ರೀತಿ ಕೆಂಪು ಬಣ್ಣ ಕುತ್ತಿಗೆಯಲ್ಲಿರುತ್ತದೆ ಎಂದು ಡಾ. ಸೀನ್ ಬಾರ್ಬೆಲ್ಲಾ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಆದರೆ ಅವರು ಕ್ರೀಮ್ ಯಾವುದು ಅಥವಾ ಟ್ರಂಪ್ ಅವರಿಗೆ ಏಕೆ ನೀಡಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.