ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸುವ ರೈಲು ಹತ್ತುವ ಸಾಹಸಕ್ಕೆ ಹೋಗಬಾರದು; ಯಾಕೆ ಎನ್ನುವುದಕ್ಕೆ ಈ ವಿಡಿಯೊ ನೋಡಿ

ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಚಲಿಸುತ್ತಿದ್ದ ರೈಲು ಹತ್ತುವಾಗ ವ್ಯಕ್ತಿಯೊಬ್ಬ ಜಾರಿ ಬಿದಿದ್ದಾನೆ. ರೈಲ್ವೆ ಉದ್ಯೋಗಿಯೊಬ್ಬರು ಆತನನ್ನು ರಕ್ಷಿಸುವ ಮೂಲಕ ಸಂಭವಿಸಬಹುದಾದ ಭಾರೀ ದುರಂತವನ್ನು ತಪ್ಪಿಸಿದ್ದಾರೆ. ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.

ಚಲಿಸುತ್ತಿದ್ದ ರೈಲು ಹತ್ತಲು ಹೋದವನು ಪ್ರಾಣಾಪಾಯದಿಂದ ಪಾರಾಗಿದ್ದು ಹೇಗೆ?

Profile pavithra Jun 2, 2025 6:33 PM

ಭೋಪಾಲ್: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಸಾಕಷ್ಟು ಮಂದಿ ಜೀವ ಕಳೆದುಕೊಂಡ ಪ್ರಕರಣ ಸಾಕಷ್ಟು ಬಾರಿ ನಡೆದಿದೆ. ಇದೀಗ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಚಲಿಸುತ್ತಿದ್ದ ರೈಲು ಹತ್ತುವಾಗ ವ್ಯಕ್ತಿಯೊಬ್ಬ ಜಾರಿ ಬಿದ್ದಿದ್ದಾನೆ. ತಕ್ಷಣ ರೈಲ್ವೆ ಉದ್ಯೋಗಿಯೊಬ್ಬರು ಆತನನ್ನು ರಕ್ಷಿಸುವ ಮೂಲಕ ಸಂಭವಿಸಬಹುದಾದ ಭಾರಿ ದುರಂತವನ್ನು ತಪ್ಪಿಸಿದ್ದಾರೆ. ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral News) ಆಗಿ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಜತೆಗೆ ವರೈಲ್ವೆ ಉದ್ಯೋಗಿಯ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ರೈಲಿನ ಚಕ್ರಗಳ ಪಕ್ಕದಲ್ಲಿ ಬಿದ್ದಿರುವುದು, ರೈಲ್ವೆ ಉದ್ಯೋಗಿ ಆತನನ್ನು ಕಾಪಾಡುತ್ತಿರುವುದು ಕಂಡು ಬಂದಿದೆ. ರೈಲಿನಲ್ಲಿದ್ದ ಇತರ ಪ್ರಯಾಣಿಕರು ಈ ಘಟನೆಯನ್ನು ಗಮನಿಸಿದ ತಕ್ಷಣ, ರೈಲಿನ ಚೈನ್‍ ಎಳೆದಿದ್ದಾರೆ. ಇದರಿಂದ ರೈಲು ನಿಂತಿದ್ದು, ನಂತರ ಪ್ರಯಾಣಿಕನು ರೈಲು ಹತ್ತಿ ಸುರಕ್ಷಿತವಾಗಿ ತನ್ನ ಪಯಣ ಮುಂದುವರಿಸಿದ್ದಾನೆ. ಭೋಪಾಲ್ ರೈಲು ನಿಲ್ದಾಣದ ಹಳಿ ಪಕ್ಕದಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಪ್ರಯಾಣಿಕನು ಪ್ರಾಣಾಪಾಯದಿಂದ ಪಾರಾಿ ನಿಟ್ಟಿಸಿರು ಬಿಟ್ಟಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...

ಇತ್ತೀಚೆಗೆ ಮಧ್ಯ ಪ್ರದೇಶದ ದಾಬ್ರಾ ರೈಲು ನಿಲ್ದಾಣದಲ್ಲಿ ಇಂತಹದೊಂದು ಭಯಾನಕ ಘಟನೆ ನಡೆದಿತ್ತು. ಇಬ್ಬರು ಮಹಿಳೆಯರು ವೇಗವಾಗಿ ಚಲಿಸುತ್ತಿದ್ದ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದ ಕಾರಣ ಒಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬಳು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾಳೆ. ಗಾಯಗೊಂಡ ಮಹಿಳೆಯನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಸಿವಿಲ್ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್‌ಗೆ ಕಳುಹಿಸಲಾಗಿತ್ತು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಫೇಸ್‌ಬುಕ್‌ ಮೂಲಕ ಪರಿಚಯವಾದ ಯುವಕನೊಂದಿಗೆ ಅನೈತಿಕ ಸಂಬಂಧ;‌ ಸಾರ್ವಜನಿಕವಾಗಿ ಥಳಿಸಿ ಜೋಡಿಯನ್ನು ʼಶುದ್ಧೀಕರಿಸಿದʼ ಸ್ಥಳೀಯರು

ಇನ್ನೊಂದು ಘಟನೆಯಲ್ಲಿ, ಇಬ್ಬರು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳ ತ್ವರಿತ ಕ್ರಮ ಉಜ್ಜಯಿನಿ ರೈಲು ನಿಲ್ದಾಣದಲ್ಲಿ ಯುವತಿಯೊಬ್ಬಳ ಜೀವವನ್ನು ಉಳಿಸಿತ್ತು. ಯುವತಿ ರೈಲಿನ ಗೇಟ್‌ನಿಂದ ಇಳಿಯಲು ಪ್ರಯತ್ನಿಸಿದಾಗ ಜಾರಿಬಿದ್ದಿದ್ದಳು. ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಓಡಿ ಬಂದು ಕಡೆಗೆ ಮಹಿಳೆಯನ್ನು ಉಳಿಸಿದ್ದಾರೆ.