ಗಣಿತದಲ್ಲಿ ಕಡಿಮೆ ಅಂಕ, ತಮಿಳಿನಲ್ಲಿ ಟಾಪರ್: ದಳಪತಿ ವಿಜಯ್ 10ನೇ ತರಗತಿ ಅಂಕಪಟ್ಟಿ ವೈರಲ್
ದಳಪತಿ ವಿಜಯ್ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ'ತಮಿಳಗ ವೆಟ್ರಿ ಕಳಗಂ'(TVK) ಪಕ್ಷದ ಮೂಲಕ ಭರ್ಜರಿ ಜಯ ಗಳಿಸಿದ್ದಾರೆ. ಆ ಮೂಲಕ ಚಿತ್ರರಂಗದ ಬಲಿಕ ರಾಜಕೀಯದಲ್ಲೂ ಮಿಂಚಿದ್ದಾರೆ. ಇದೀಗ ವಿಜಯ್ ಅವರ ಹತ್ತನೆ ತರಗತಿಯ ಅಂಕ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದಳಪತಿ ವಿಜಯ್ (ಸಂಗ್ರಹ ಚಿತ್ರ) -
ಚೆನ್ನೈ, ಮೆ 6: ಜೀವನದಲ್ಲಿ ಸಾಧಿಸಲು ಶಿಕ್ಷಣ ಅಷ್ಟೇ ಮುಖ್ಯವಾಗುವುದಿಲ್ಲ, ಒಂದು ಅಂಕ ಪಟ್ಟಿ ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡಲು ಸಾಧ್ಯವೇ ಇಲ್ಲ ಎಂಬುವುದಕ್ಕೆ ದಳಪತಿ ವಿಜಯ್ (Thalapathy Vijay) ಉತ್ತಮ ಉದಾಹರಣೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ಮೂಲಕ ಗಮನ ಸೆಳೆದವರು ವಿಜಯ್. ತಮ್ಮ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಮೂಲಕ ಭರ್ಜರಿ ಜಯ ಗಳಿಸಿ ವಿಜಯ್ ಅವರ ಹತ್ತನೆ ತರಗತಿಯ ಅಂಕಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಜಯ್ ರಾಜಕೀಯಕ್ಕೆ ಕಾಲಿಡುವ ಘೋಷಣೆ ಮಾಡಿದ್ದು ಕೆಲ ವರ್ಷಗಳ ಹಿಂದೆಯಷ್ಟೇ. ಎರಡೇ ವರ್ಷಗಳಲ್ಲಿ ಅವರು ಸಾಧಿಸಿದ ಗೆಲುವು ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಇದೀಗ ವಿಜಯ್ ಅವರ ಹತ್ತನೆ ತರಗತಿಯ ಅಂಕ ಪಟ್ಟಿಗಮನ ಸೆಳೆದಿದ್ದು, ಬೋರ್ಡ್ ಪರೀಕ್ಷೆಗಳಲ್ಲಿ ಶೇ. 65ರಷ್ಟು ಅಂಕ ಪಡೆದು ʼಸರಾಸರಿ ವಿದ್ಯಾರ್ಥಿʼ ಎನಿಸಿಕೊಂಡಿದ್ದರು.
1.100 ಒಟ್ಟು ಅಂಕಗಳಲ್ಲಿ ಅವರು 711 ಅಂಕ ಪಡೆದಿದ್ದರು. ವಿಜಯ್ ತಮಿಳು ಪರೀಕ್ಷೆಯಲ್ಲಿ 200ರಲ್ಲಿ 155 ಅಂಕ ಗಳಿಸಿದ್ದರು. ಗಣಿತದಲ್ಲಿ ಕಡಿಮೆ ಎಂದರೆ 200ರಲ್ಲಿ 95, ಇಂಗ್ಲಿಷ್‌ನಲ್ಲಿ 200ರಲ್ಲಿ 133, ಸಮಾಜ ವಿಜ್ಞಾನದಲ್ಲಿ 200ರಲ್ಲಿ 122 ಅಂಕ ಬಂದಿದೆ. ಒಟ್ಟಾರೆಯಾಗಿ ಗಣಿತದಲ್ಲಿ ಅತಿ ಕಡಿಮೆ ಅಂಕ ಗಳಿಸಿದ್ದರು.
ರಾಜಮೌಳಿ 'ವಾರಣಾಸಿ' ಚಿತ್ರಕ್ಕೆ ನೀರಿನ ಸಮಸ್ಯೆ
ವಿಜಯ್ ಅವರ ಆರಂಭಿಕ ಶಿಕ್ಷಣವು ಚೆನ್ನೈನಲ್ಲಿ ನಡೆದಿದ್ದು ನಂತರ ವಿರುಗಂಬಕ್ಕಂನ ಬಾಲ ಲೋಕ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಆದರೆ ನಟನೆಯನ್ನು ಮುಂದುವರಿಸಲು ಮಧ್ಯದಲ್ಲಿಯೇ ಶಾಲೆಯನ್ನು ತೊರೆದರು.
ಸದ್ಯ ಸಿನಿಮಾ ಹಾಗೂ ರಾಜಕೀಯದಲ್ಲೂ ಸಾಧನೆಗೈದಿರುವ ವಿಜಯ್ ತಮ್ಮ ಮೊದಲ ಪ್ರಯತ್ನದಲ್ಲೇ ತಮಿಳು ನಾಡಿನ ಕಿಂಗ್ ಆಗಿ ಮೆರೆದಿದ್ದಾರೆ. ಸಿನಿಮಾದಲ್ಲಿ ಅಭಿಮಾನಿಗಳನ್ನು ಗಿಟ್ಟಿಸಿ ಕೊಂಡಿರುವ ವಿಜಯ್ ಈಗ ರಾಜಕೀಯದಲ್ಲೂ ಜನರನ್ನು ಆಕರ್ಷಿತರಾಗಿದ್ದಾರೆ. ಜನರ ಮನಸ್ಸಿನಲ್ಲೂ 'ಜನನಾಯಕ'ನಾಗಿ ಹೊರಹೊಮ್ಮಿದ್ದಾರೆ.