Viral Video: ಜಿಪ್ಲೈನ್ ಮಾಡುವಾಗ ಕೆಳಗೆ ಉರುಳಿ ಬಿದ್ದ ಪುರೋಹಿತ; ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ
ಒಬ್ಬ ಪುರೋಹಿತ ಹೂವಿನ ಹಾರ ಮತ್ತು ತ್ರಿಶೂಲವನ್ನು ಕೈಯಲ್ಲಿ ಹಿಡಿದು ಜಿಪ್‌ಲೈನ್ ಮಾಡುವಾಗ ಮೇಲಿಂದ ಕೆಳಗೆ ಬೀಳುವುದನ್ನು ತಮಾಷೆಯ ರೀತಿಯಲ್ಲಿ ತೋರಿಸಲಾಗಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರನ್ನು ನಗಿಸಿದೆ. ಈ ವಿಡಿಯೊ ನೀವೂ ನೋಡಿ.


ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಬಸ್‌ನ ಕಿಟಕಿಯ ಮೂಲಕ ಹತ್ತಲು ಹೋಗಿ ಜಾರಿಬಿದ್ದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೊ ನೋಡಿ ನೆಟ್ಟಿಗರು ಬಿದ್ದುಬಿದ್ದು ನಕ್ಕಿದ್ದಾರೆ. ಇದೀಗ ಅಂತಹದ್ದೇ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪುರೋಹಿತನೊಬ್ಬ ಜಿಪ್‌ಲೈನ್ ಮಾಡುವಾಗ ಕೆಳಗೆ ಬೀಳುವುದನ್ನು ತಮಾಷೆಯ ರೀತಿಯಲ್ಲಿ ತೋರಿಸಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕಿದ್ದಾರೆ.
ವೈರಲ್ ವಿಡಿಯೊದಲ್ಲಿ ಭಕ್ತರೆಲ್ಲ ಕೆಳಗೆ ನಿಂತಿರುವಾಗ, ಪುರೋಹಿತನೊಬ್ಬ ಹೂವಿನ ಹಾರ ಮತ್ತು ತ್ರಿಶೂಲವನ್ನು ಕೈಯಲ್ಲಿ ಹಿಡಿದು ವೇದಿಕೆಯ ಮೇಲಿನಿಂದ ಹಾರುತ್ತಾ ಬರಲು ಕೇಬಲ್‍ಗೆ ಕಟ್ಟಲಾಗಿತ್ತು. ಬಳಿಕ ಆತನನ್ನು ಜಾರಿಸಲಾಗಿದೆ. ಆದರೆ ಅರ್ಧ ದಾರಿಗೆ ಬಂದಾಗ ಅವನ ಭಾರ ತಾಳಲಾರದೇ ಕೇಬಲ್ ಕಟ್ಟಾಗಿ ಆತ ಜನರ ಗುಂಪಿನ ಮಧ್ಯೆ ನೆಲಕ್ಕೆ ಬಿದ್ದಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
Shaktiman ki Shakti khatam ho gayi 😂 pic.twitter.com/GtU8CxkDPU
— 𝑴𝒊𝒔𝒉𝒌𝒂♡ (@Mishka_Shine) May 19, 2025
ಕೇಬಲ್‌ನಿಂದ ಕೆಳಗೆ ಬೀಳುತ್ತಿರುವ ಅವನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪುರೋಹಿತನ ಈ ವಿಡಿಯೊಗೆ ಹಲವರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೆಲವರು ವಿಡಿಯೊವನ್ನು ನೋಡಿ ಆನಂದಿಸಿದರೆ, ಇನ್ನು ಕೆಲವರು ಆ ವ್ಯಕ್ತಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಒಬ್ಬ ನೆಟ್ಟಿಗರು "ತುಂಬಾ ಕೆಟ್ಟದಾಗಿ ಇದು ನಡೆದಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಬಡ ಪುರೋಹಿತ ಕೆಟ್ಟ ಸ್ಥಿತಿಯಲ್ಲಿದ್ದಾರೆ" ಎಂದು ಹೇಳಿದ್ದಾರೆ. "ನೀವು ಇದನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದೀರಾ?” ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಇದಕ್ಕೂ ಮೊದಲು, ಜಿಪ್‌ಲೈನ್ ಮಾಡುವಾಗ ಮಹಿಳೆಯೊಬ್ಬಳು ಎಡವಿ ಬೀಳುವ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಾಸ್ಯಾಸ್ಪದ ವಿಡಿಯೊದಲ್ಲಿ ಮಹಿಳೆಯೊಬ್ಬಳು ಮಕ್ಕಳಿಗಾಗಿ ಇಂತಹ ತಮಾಷೆಯ ಜಿಪ್‌ಲೈನ್ ಸವಾರಿಯನ್ನು ಮಾಡಿದ್ದಳು.
ಈ ಸುದ್ದಿಯನ್ನೂ ಓದಿ:Viral Video: ಕಪ್ಪೆ ತಿಂದ ಮುಂಬೈ ಫುಡ್ ವ್ಲಾಗರ್; ನೆಟ್ಟಿಗರ ರಿಯಾಕ್ಷನ್ ಹೇಗಿತ್ತು?
ಇಂತಹ ತಮಾಷೆಯ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತದೆ. ಈ ಹಿಂದೆ ಹೊಲದ ಮಣ್ಣನ್ನು ಸಮತಟ್ಟು ಮಾಡಲು ಬಳಸಿದ ವಿಧಾನ ವೈರಲ್ ಆಗಿತ್ತು. ಸಾಮಾನ್ಯವಾಗಿ, ಉಳುಮೆ ಮಾಡಿದ ನಂತರ ಹೊಲದ ಮಣ್ಣನ್ನು ಸಮತಟ್ಟು ಮಾಡಲು ಟ್ರ್ಯಾಕ್ಟರ್ ಅನ್ನು ಬಳಸಲಾಗುತ್ತದೆ. ಆದರೆ ಈ ವೈರಲ್ ವಿಡಿಯೊದಲ್ಲಿ ಹೊಸ ಮತ್ತು ಆಸಕ್ತಿದಾಯಕವಾದುದ್ದೇನೆಂದರೆ ಆಟೋವೊಂದರ ಹಿಂಭಾಗಕ್ಕೆ ಗುದ್ದಲಿಯನ್ನು ಕಟ್ಟಿ ಅದರಿಂದ ಹೊಲದ ಮಣ್ಣನ್ನು ಸಮತಟ್ಟು ಮಾಡಿದ್ದರು. ಅಂದರೆ ಇಲ್ಲಿ ಟ್ರ್ಯಾಕ್ಟರ್ ಬದಲಿಗೆ ಆಟೋ ಈ ಕೆಲಸ ಮಾಡಿದೆ. ಈ ವಿಡಿಯೊ ವೇಗವಾಗಿ ವೈರಲ್ ಆಗುತ್ತಿದ್ದಂತೆ ಜನರು ಇದನ್ನು ತುಂಬಾ ಇಷ್ಟಪಟ್ಟಿದ್ದರು.