ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಪ್ಪೆ ತಿಂದ ಮುಂಬೈ ಫುಡ್ ವ್ಲಾಗರ್; ನೆಟ್ಟಿಗರ ರಿಯಾಕ್ಷನ್‌ ಹೇಗಿತ್ತು?

ಮುಂಬೈ ಮೂಲದ ಫುಡ್ ವ್ಲಾಗರ್ ಸಂಕೇತ್ ಸಂಕ್‌ಪಾಲ್ ಕಾಂಬೋಡಿಯಾ ಪ್ರವಾಸದ ವೇಳೆ ಹುರಿದ ಕಪ್ಪೆ ಖಾದ್ಯವನ್ನು ತಿಂದಿದ್ದಾನೆ. ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ.

ಹುರಿದ ಕಪ್ಪೆ ತಿಂದ ಫುಡ್‌ ವ್ಲಾಗರ್‌; ಕಿಡಿಕಾರಿದ ನೆಟ್ಟಿಗರು

Profile pavithra May 19, 2025 7:57 PM

ಸಾಮಾನ್ಯವಾಗಿ ಕೆಲವು ವಿದೇಶಿಗರು ಕಪ್ಪೆ, ಹುಳ, ಇಲಿ, ಜೀರಳೆಯಂತಹ ಜೀವಿಗಳನ್ನು ಹಿಡಿದು ತಿನ್ನುವುದನ್ನು ನಾವು ವಿಡಿಯೊಗಳಲ್ಲಿ ನೋಡಿರುತ್ತೇವೆ. ಇದೀಗ ಮುಂಬೈ ಮೂಲದ ಫುಡ್ ವ್ಲಾಗರ್ ಸಂಕೇತ್ ಸಂಕ್‌ಪಾಲ್ 'ವೇಕ್ ಎನ್ ಬೈಟ್' ಎಂಬ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಅದರಲ್ಲಿ ಆತ ಕಪ್ಪೆಯನ್ನು ತಿಂದಿದ್ದಾನೆ. ಅದನ್ನು ನೋಡಿದ ಅನೇಕ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಈ ವೈರಲ್ ವಿಡಿಯೊದಲ್ಲಿ ಸಂಕ್‌ಪಾಲ್ ಕಾಂಬೋಡಿಯಾ ಪ್ರವಾಸದ ಸಮಯದಲ್ಲಿ ಹುರಿದ ಕಪ್ಪೆ ಖಾದ್ಯವನ್ನು ತಿನ್ನುವುದು ಸೆರೆಯಾಗಿದೆ. ಕಪ್ಪು ಜಾಕೆಟ್ ಮತ್ತು ಕನ್ನಡಕವನ್ನು ಧರಿಸಿದ್ದ ಈತ ಸ್ಥಳೀಯ ಉಪಾಹಾರ ಗೃಹದ ಹೊರಗೆ ಬೇಯಿಸಿದ ಕಪ್ಪೆಗಳಿಂದ ತುಂಬಿದ ಬಟ್ಟಲನ್ನು ಹಿಡಿದುಕೊಂಡು ನಿಂತಿದ್ದಾನೆ. ಒಂದು ಕೈಯಲ್ಲಿ ಬಟ್ಟಲನ್ನು ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಹುರಿದ ಕಪ್ಪೆಯನ್ನು ಹೊರತೆಗೆದು ಕ್ಯಾಮೆರಾಗೆ ತೋರಿಸಿದ್ದಾನೆ. ಹಾಗೇ ತಿನ್ನುವ ಮೊದಲು ತನ್ನ ತಂದೆತಾಯಿಯ ಬಳಿ ಕ್ಷಮೆಯಾಚಿಸಿದ್ದಾನೆ.

ವಿಡಿಯೊ ನೋಡಿ...

ಈ ರೆಸ್ಟೋರೆಂಟ್ ಕಿಚನ್‍ನಲ್ಲಿ ಸಿಬ್ಬಂದಿಯೊಬ್ಬರು ಹಲವು ಹುರಿದ ಕಪ್ಪೆಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ವಿಡಿಯೊ ಪೋಸ್ಟ್ ಮಾಡಿದಾಗಿನಿಂದ ಮೂರು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ ಮತ್ತು ನೆಟ್ಟಿಗರು ಇದಕ್ಕೆ ಕಾಮೆಂಟ್‌ ಮಾಡಿದ್ದಾರೆ.

ಆಗ್ನೇಯ ಏಷ್ಯಾದ ಕೆಲವು ಭಾಗಗಳಲ್ಲಿ ಕಪ್ಪೆ ಭಕ್ಷ್ಯಗಳು ಸಾಮಾನ್ಯವಾಗಿದ್ದರೂ, ಭಾರತೀಯ ಆಹಾರಪ್ರಿಯನೊಬ್ಬ ಹುರಿದ ಕಪ್ಪೆಯನ್ನು ತಿನ್ನುವ ದೃಶ್ಯವು ಆಹಾರ ಸಂಸ್ಕೃತಿಯ ಸುತ್ತ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಈ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ. “ನರಕ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಹಿಂತಿರುಗಿ ಬರಬೇಡ. ಅಲ್ಲಿಯೇ ಇರು" ಎಂದು ಮತ್ತೊಬ್ಬ ಹೇಳಿದ್ದಾನೆ.

ಈ ಸುದ್ದಿಯನ್ನೂ ಓದಿ:‌Viral Video: ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಬೆಳೆ ಉಳಿಸಲು ಹೆಣಗಾಡಿದ ರೈತ, ಹೃದಯಸ್ಪರ್ಶಿ ವಿಡಿಯೊ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಆಗ್ನೇಯ ಏಷ್ಯಾದ ಜನರು ಕಪ್ಪೆ, ಹುಳಗಳು, ಇಲಿ, ಜೀರಳೆಯಂತಹ ಜೀವಿಗಳನ್ನು ಹಿಡಿದು ಅವುಗಳನ್ನು ಸ್ವಚ್ಛ ಮಾಡಿ ಮಸಾಲೆಗಳನ್ನು ಸೇರಿಸಿ ಅಡುಗೆ ಮಾಡಿ ತಿಂದು ಆನಂದಿಸುವ ಹಲವು ವಿಡಿಯೊಗಳು ಕಂಡುಬರುತ್ತದೆ.