Viral Video: ಮದುವೆಗೆ ಕುಂಕುಮ ತರಲು ಮರೆತ ವರ; ಆಮೇಲಾಗಿದ್ದೇನು? ಇಲ್ಲಿದೆ ನೋಡಿ ವಿಡಿಯೊ
Groom forgets to bring vermilion: ಭಾರತೀಯ ವಿವಾಹಗಳು ಸಂಪ್ರದಾಯ, ಸಂಸ್ಕೃತಿ ಮತ್ತು ಸಂಭ್ರಮದ ಸುಂದರ ಸಂಗಮವಾಗಿರುತ್ತವೆ. ಪ್ರತಿಯೊಂದು ಆಚರಣೆಯೂ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಕೆಲವೊಮ್ಮೆ ಅಚಾನಕ್ ಸಂಭವಿಸುವ ಸಣ್ಣ ಘಟನೆಗಳು ಮನರಂಜನೆಗೆ ಕಾರಣವಾಗುತ್ತವೆ. ಇದೀಗ ಅಂಥದ್ದೇ ವಿಡಿಯೊವೊಂದು ವೈರಲ್ ಆಗಿದೆ.
ಮದುವೆಗೆ ಬ್ಲಿಂಕಿಟ್‌ನಿಂದ ಕುಂಕುಮ ಆರ್ಡರ್ ಮಾಡಿದ ಕುಟುಂಬ -
ನವದೆಹಲಿ, ಡಿ.29: ಭಾರತೀಯ ವಿವಾಹವು ನಗು, ಮನರಂಜನೆ, ಹಾಸ್ಯ ಇತ್ಯಾದಿಗಳಿಂದ ಕೂಡಿರುತ್ತದೆ. ಶಾಸ್ತ್ರ, ಸಂಪ್ರದಾಯದಿಂದ ಹಿಡಿದು, ನೃತ್ಯದವರೆಗೂ ಬಹಳ ಅದ್ಧೂರಿಯಾಗಿ ಮದುವೆಯನ್ನು ಆಯೋಜಿಸಲಾಗುತ್ತದೆ. ಇದೀಗ ವಿವಾಹವೊಂದರ (wedding) ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಮದುವೆ ಆಯೋಜಕರು ಅತ್ಯಂತ ಪ್ರಮುಖವಾದ ವಿವಾಹ ಆಚರಣೆಗಳಲ್ಲಿ ಒಂದಾದ ಸಿಂಧೂರ (ಕುಂಕುಮ) ವನ್ನು ತರಲು ಮರೆತಿದ್ದಾರೆ. ಇದನ್ನು ಆನ್ಲೈನ್‍ನಲ್ಲಿ ಆರ್ಡರ್ ಮಾಡುವ ದೃಶ್ಯದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರನ್ನು ರಂಜಿಸಿದೆ.
ವರನು ಕ್ಯಾಮರಾದ ಮುಂದೆ ಪ್ರಾಮಾಣಿಕವಾಗಿ ಮಾತನಾಡುತ್ತಾ ಹಿಂದಿಯಲ್ಲಿ, ತಾವು ಸಿಂಧೂರವನ್ನು ತರಲಿಲ್ಲ ಎಂದು ಹೇಳುವುದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಆತ ಶಾಂತನಾಗಿ ಹೇಳಿದ್ದರೂ, ಇದು ಕುಟುಂಬಸ್ಥರಲ್ಲಿ ಮೋಜಿನ ರೀತಿಯಲ್ಲಿ ಬದಲಾಗಿದೆ. ಸಿಂಧೂರವಿಲ್ಲದೆ ಸಂಪ್ರದಾಯ ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ಅಲ್ಲಿದ್ದವರು ಹೇಳಿದ್ದಾರೆ.
ತಾಳಿ ಕಟ್ಟುವ ವೇಳೆ ಬ್ರೆಝಾ ಕಾರು, 20 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ; ಮದುವೆಯನ್ನೇ ರದ್ದುಗೊಳಿಸಿ ಮಾದರಿಯಾದ ವಧು
ಆದರೂ, ಯಾರೂ ಕೂಡ ಕಿಂಚಿತ್ತೂ ಗೊಂದಲಕ್ಕೊಳಗಾಗದೆ, ಭೀತಿಗೊಳಗಾಗದೆ ಏನು ಮಾಡೋಣ ಎಂದು ಉಪಾಯ ಮಾಡಿದರು. ಕುಟುಂಬದ ಕಿರಿಯ ಸದಸ್ಯರು ತಮ್ಮ ಫೋನ್‌ಗಳನ್ನು ಹೊರತೆಗೆದು ಪರಿಹಾರ ಹುಡುಕಲು ಮುಂದಾಗಿದ್ದಾರೆ. ಅವರು ಸಿಂಧೂರವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲು ನಿರ್ಧರಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ, ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್‌ನಿಂದ ಡೆಲಿವರಿ ಬಾಯ್ ಸಿಂಧೂರವನ್ನು ತೆಗೆದುಕೊಂಡು ಬಂದಿದ್ದಾನೆ. ಇದರಿಂದಾಗಿ ಮದುವೆಯ ಆಚರಣೆಗಳು ಸರಾಗವಾಗಿ ಮುಂದುವರಿದಿದೆ.
ಬ್ಲಿಂಕಿಟ್‍ನಿಂದ ಸಿಂಧೂರ ಬಂದಕೂಡಲೇ ಓಡಿ ಹೋದ ಹೆಣ್ಮಕ್ಕಳು ಸಿಂಧೂರವನ್ನು ತಂದು ವರನ ಕೈಗೆ ನೀಡಿದ್ದಾರೆ. ನಂತರ ವರ ತನ್ನ ಪತ್ನಿಯ ಹಣೆಗೆ ಸಿಂಧೂರವನ್ನು ಹಾಕಿದ್ದಾನೆ. ಈ ಸಂತೋಷದ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡ ಖುಷಿಪಟ್ಟಿದ್ದಾರೆ.
ವಿಡಿಯೊ ವೀಕ್ಷಿಸಿ:
ಯುವತಿಯರ ಸಮಯಪ್ರಜ್ಞೆಗೆ ನೆಟ್ಟಿಗರು ಕೂಡ ಅಭಿನಂದಿಸಿದ್ದಾರೆ. ಅಲ್ಲದೆ ಬ್ಲಿಂಕಿಟ್‌ನ ವೇಗದ ವಿತರಣೆಗಾಗಿ ಶ್ಲಾಘಿಸಿದ್ದಾರೆ. ವಿವಾಹ ಯೋಜಕರಷ್ಟೇ ಬ್ಲಿಂಕಿಟ್‍ನಂತಹ ಪ್ಲಾಟ್‍ಫಾರ್ಮ್‌ಗಳು ಬಹಳ ಅತ್ಯಗತ್ಯವಾಗಿವೆ ಎಂದು ಹಲವರು ತಮಾಷೆ ಮಾಡಿದ್ದಾರೆ. ಈ ಘಟನೆಯನ್ನು ಪ್ರಮಾದವೆಂದು ಪರಿಗಣಿಸುವ ಬದಲು, ಪವಿತ್ರ ಸಂಪ್ರದಾಯಗಳಲ್ಲಿಯೂ ಸಹ ತಂತ್ರಜ್ಞಾನವು ಹೇಗೆ ರಕ್ಷಣೆಗೆ ಬರಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.
ಸಹೋದರಿಯ ಮದುವೆಗೆ ಭಿಕ್ಷುಕರೇ ಅತಿಥಿಗಳು
ವ್ಯಕ್ತಿಯೊಬ್ಬ ತನ್ನ ತಂಗಿಯ ಮದುವೆಗೆ ಭಿಕ್ಷುಕರು ಮತ್ತು ನಿರಾಶ್ರಿತರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದ ವಿಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಸಿದ್ಧಾರ್ಥ್ ರಾಯ್ ತಮ್ಮ ಸಹೋದರಿಯ ಮದುವೆಯನ್ನು ನಿಜವಾಗಿಯೂ ಸ್ಮರಣೀಯವಾಗಿಸಲು ಅತಿಥಿಗಳು, ಸಂಬಂಧಿಕರು ಮತ್ತು ಸ್ನೇಹಿತರ ಸಂಖ್ಯೆಯನ್ನು ಸೀಮಿತಗೊಳಿಸಿ ಜಿಲ್ಲೆಯಾದ್ಯಂತ ಇರುವ ಭಿಕ್ಷುಕರು ಮತ್ತು ನಿರಾಶ್ರಿತರನ್ನು ಆಹ್ವಾನಿಸಿ, ಅವರನ್ನು ಸತ್ಕರಿಸಿದ್ದರು.
ಸಿದ್ಧಾರ್ಥ್ ಕೇವಲ ಅವರಿಗೆ ಊಟ ಹಾಕುವುದಕ್ಕೆ ಸೀಮಿತವಾಗದೆ, ಅವರನ್ನು ಕರೆತರಲು ವಿಶೇಷ ವಾಹನಗಳ ವ್ಯವಸ್ಥೆ ಮಾಡಿದ್ದರು. ಮದುವೆ ಸಭಾಂಗಣದಲ್ಲೂ ಕುಟುಂಬದ ಸದಸ್ಯರಂತೆಯೇ ಉನ್ನತ ಸ್ಥಾನ ನೀಡಿ ಗೌರವಿಸಿದ್ದರು. ಮದುವೆ ಸಮಾರಂಭದಲ್ಲಿ ಅತ್ಯಂತ ರುಚಿಕರ ಭೋಜನದ ವ್ಯವಸ್ಥೆ ಮಾಡಲಾಗಿತ್ತು.