ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral video: ಬೆಂಗಳೂರಲ್ಲಿ ಇರ್ಬೇಕಂದ್ರೆ ಹಿಂದಿ ಮಾತನಾಡು; ಆಟೋ ಚಾಲಕನಿಗೆ ಹಿಂದಿ ಭಾಷಿಕ ಧಮ್ಕಿ!

Viral video: ಬೆಂಗಳೂರಿನ ಎಸ್‌ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಆಟೋ ಚಾಲಕನಿಗೆ ಹಿಂದಿ ಮಾತನಾಡಲು ಒಬ್ಬಾತ ಬೆದರಿಕೆ ಹಾಕಿದ್ದು, ಇದಕ್ಕೆ ಚಾಲಕ ಕೂಡ ತಿರುಗೇಟು ನೀಡಿದ್ದಾನೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಬೆಂಗಳೂರಲ್ಲಿ ಇರ್ಬೇಕಂದ್ರೆ ಹಿಂದಿ ಕಲಿ; ಆಟೋ ಚಾಲಕನಿಗೆ ಧಮ್ಕಿ!

Profile Prabhakara R Apr 19, 2025 5:37 PM

ಬೆಂಗಳೂರು: ಕನ್ನಡಿಗ ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡು ಎಂದು ಹಿಂದಿ ಭಾಷಿಕ ಧಮ್ಕಿ ಹಾಕಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಬೆಂಗಳೂರಿನ ಎಸ್‌ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಆಟೋ ಚಾಲಕನಿಗೆ ಹಿಂದಿ ಭಾಷಿಕ ಬೆದರಿಕೆ ಹಾಕಿದ್ದು, ಇದಕ್ಕೆ ಚಾಲಕ ಕೂಡ ತಿರುಗೇಟು ನೀಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗುತ್ತಿದೆ.

ಚಾಲಕ ಮತ್ತು ಹಿಂದಿ ಭಾಷಿಕನ ನಡುವಿನ ವಾಗ್ವಾದವನ್ನು ಒಬ್ಬಾತ ವಿಡಿಯೋ ಮಾಡುತ್ತಿದ್ದರೆ, ಹಿಂದಿ ಭಾಷಿಕನ ಜತೆಗಿದ್ದ ಯವತಿ, ಆತನನ್ನು ಕರೆದೊಯ್ದಿದ್ದಾಳೆ.



ಹಿಂದಿಯಲ್ಲಿ ಮಾತನಾಡು ಎಂದು ಯುವಕ ಧಮ್ಮಿ ಹಾಕಿದ್ದಕ್ಕೆ ಆಟೋ ಚಾಲಕ, 'ಏನೂ ಮಾಡಕ್ಕಾಗಲ್ಲ. ಕನ್ನಡ ಮಾತನಾಡೋದನ್ನು ಕಲಿ ನೀನು. ನೀನು ಬೆಂಗಳೂರಿಗೆ ಬಂದಿರುವುದು ಆಯ್ತಾ...' ಎಂದು ತಿರುಗೇಟು ಕೊಟ್ಟಿದ್ದಾನೆ.

ಈ ವೇಳೆ ಯುವಕನ ಜತೆಗಿದ್ದ ಯುವತಿ ಆತನನ್ನು ಕರೆದೊಯ್ದಿದ್ದಾಳೆ. ನೀನು ಬೆಂಗಳೂರಲ್ಲಿ ಬದುಕಬೇಕೆಂದರೆ ಹಿಂದಿ ಮಾತನಾಡಲು ಕಲಿ ಎಂದು ಯುವಕ ಹೇಳಿದ್ದ. ಇದಕ್ಕೆ ಆಟೋ ಚಾಲಕ ತಿರುಗೇಟು ನೀಡಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೊಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
ವ್ಯಕ್ತಿಯೊಬ್ಬರು ಈ ಬಗ್ಗೆ ಕಮೆಂಟ್‌ ಮಾಡಿ, ಸ್ಥಳೀಯರು ತಮ್ಮ ಭಾಷೆಯನ್ನು ಮಾತನಾಡಬೇಕೆಂದು ನಿರೀಕ್ಷಿಸುತ್ತಾರೆ. ಬೆಂಗಳೂರಿನ ಹೆಚ್ಚಿನ ಕನ್ನಡಿಗರಿಗೆ ಹಿಂದಿ ತಿಳಿದಿದೆ. ಆದರೆ ಕನ್ನಡ ಕಲಿಯಲು ವಲಸಿಗರು ಏಕೆ ಹಿಂಜರಿಯುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸಿ, ಉತ್ತರ ಭಾರತದ ವಲಸಿಗರು ಸ್ಥಳೀಯ ಭಾಷೆಯನ್ನು ಕಲಿಯಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಟೀಕಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Shine Tom Chacko: ಹೋಟೆಲ್ ಕಿಟಕಿಯಿಂದ ಜಿಗಿದು ಎಸ್ಕೇಪ್‌ ಆಗಿದ್ದ ಮಲಯಾಳಂ ನಟ ಅರೆಸ್ಟ್‌- ವಿಡಿಯೋ ವೈರಲ್‌

ಮತ್ತೊಬ್ಬ ಎಕ್ಸ್‌ ಬಳಕೆದಾರರು, ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಹೀಗಾಗಿ ಎಲ್ಲರೂ ಹಿಂದಿ ಮಾತನಾಡಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಔಪಚಾರಿಕ ಶಿಕ್ಷಣವಿಲ್ಲದವರಿಗೆ ಇದು ತಿಳಿದಿಲ್ಲ ಎಂದು ಕಿಡಿಕಾರಿದ್ದಾರೆ.