Viral Video: ದಕ್ಷಿಣ ಕೊರಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಕಿರುಕುಳ: ವಿಗ್ ಧರಿಸಿ ಬೆನ್ನಟ್ಟಿದ ಅಪರಿಚಿತ ವ್ಯಕ್ತಿ
ದಕ್ಷಿಣ ಕೊರಿಯಾದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಿಗ್ ಧರಿಸಿ ಭಾರತೀಯ ಯುವತಿಯನ್ನು ಹಿಂಬಾಲಿಸಿದ ಘಟನೆ ನಡೆದಿದೆ. ಯುವತಿ ವಿಡಿಯೊ ಮೂಲಕ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾಳೆ. ಅಪರಿಚಿತ ವ್ಯಕ್ತಿ ಸ್ಥಳೀಯನಾಗಿದ್ದರೂ ರೆಸ್ಟೋರೆಂಟ್ ಎಲ್ಲಿದೆ ಎಂದು ಪ್ರಶ್ನಿಸಿ ಪದೇ ಪದೆ ಆಕೆಯ ಬಳಿ ಬಂದಿದ್ದಾನೆ.
ಕೊರಿಯಾದಲ್ಲಿ ಭಾರತೀಯ ಯುವತಿಯ ಬೆನ್ನಟ್ಟಿದ ಅಪರಿಚಿತ ವ್ಯಕ್ತಿ -
ಸಿಯೋಲ್, ಜೂ. 25: ವಿದೇಶದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬಳಿಗೆ ಅತ್ಯಂತ ಕಹಿ ಅನುಭವವಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ವಿಗ್ ಧರಿಸಿ ಯುವತಿಯನ್ನು ಹಿಂಬಾಲಿಸಿದ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದು, ಆಕೆ ಯುವತಿ ವಿಡಿಯೊ ಮೂಲಕ ಇದನ್ನು ಸೆರೆ ಹಿಡಿದಿದ್ದಾಳೆ (Viral News). ಅಪರಿಚಿತ ವ್ಯಕ್ತಿ ಸ್ಥಳೀಯನಾಗಿದ್ದರ ಇಲ್ಲಿ ರೆಸ್ಟೋರೆಂಟ್ ಎಲ್ಲಿದೆ ಎಂದು ಪ್ರಶ್ನಿಸಿ ಪದೇ ಪದೆ ಬಳಿ ಬಂದಿದ್ದಾನೆ ಎಂದು ಆಕೆ ವ್ಯಕ್ತಪಡಿಸಿದ್ದಾಳೆ.
ಯುವತಿ ತನ್ನ ವಿಶ್ವವಿದ್ಯಾಲಯಕ್ಕೆ ಎಂದು ನಡೆದುಕೊಂಡು ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಅಪರಿಚಿತನೊಬ್ಬ ವಾಹನ ನಿಲ್ಲಿಸಿ ಇಲ್ಲಿ ರೆಸ್ಟೋರೆಂಟ್ ಎಲ್ಲಿದೆ ಎಂದು ಕೇಳಿದ್ದಾನೆ. ಇದಕ್ಕೆ ಉತ್ತರ ನೀಡಿದ ಯುವತಿ ಇಲ್ಲಿ ಸಾಕಷ್ಟು ರೆಸ್ಟೋರೆಂಟ್ ಇದೆ ಎಂದು ಧೈರ್ಯದಿಂದ ಮಾತನಾಡಿದ್ದಾಳೆ. ಆತ ಅಷ್ಟಕ್ಕೆ ಮಾತು ನಿಲ್ಲಿಸಿದೆ ರೆಸ್ಟೋರೆಂಟ್ ತೋರಿಸಲು ತನ್ನ ಜತೆ ಬರಬೇಕು ಎಂದು ಒತ್ತಾಯಿಸಿದ್ದಾನೆ.
ವಿಡಿಯೊ ನೋಡಿ:
An Indian girl had a scary experience in Korea 🇰🇷
— Indic Matrix🐦🔥 (@IndicMatrix) June 24, 2026
She was on her way to college when an older Korean man tried to a§ault her.Those cvck who say that Korea is very safe and that such things happen only in India... pic.twitter.com/WcjJHNvEfm
ತನಗೆ ಕೆಲಸವಿದೆ ಎಂದು ಯುವತಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟರೂ "ಯಾವಾಗ ಫ್ರೀ ಇರುತ್ತೀಯಾ?ʼʼ ಎಂದು ಕೇಳಿದ್ದಾನೆ. ಇದಾದ ಬಳಿಕವೂ ಸ್ವಲ್ಪ ದಿನದ ನಂತರ ಆತ ಗುರುತು ಸಿಗದಂತೆ ವಿಗ್ ಧರಿಸಿ ಬಂದಿದ್ದು ಮತ್ತೆ ಯುವತಿಯನ್ನು ಸಮೀಪಿಸಿ ಅದೇ ರೆಸ್ಟೋರೆಂಟ್ ಬಗ್ಗೆ ಕೇಳಲು ಶುರು ಮಾಡಿದ್ದಾನೆ ಮತ್ತೆ ಆತನ ಭೇಟಿಯು ಅತ್ಯಂತ ಆತಂಕ ಮತ್ತು ಅಸುರಕ್ಷಿತ ಭಾವನೆಯನ್ನುಂಟು ಮಾಡಿತು ಎಂದು ವಿಡಿಯೊದಲ್ಲಿ ಬೇಸರ ಹೊರ ಹಾಕಿದ್ದಾಳೆ.
ಕೊಚ್ಚಿ ವಾಟರ್ ಮೆಟ್ರೋದಲ್ಲಿ ಗರ್ಬಾ ನೃತ್ಯ; ಕಿರಿಕಿರಿ ಮಾಡಿದ್ದಕ್ಕೆ ನೆಟ್ಟಿಗರಿಂದ ಕ್ಲಾಸ್
ಆಕೆಯ ವಿಡಿಯೊ ಈಗ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಡಿದೆ, ವಿದೇಶದಲ್ಲಿ ಯುವತಿಯರು ಎದುರಿಸುತ್ತಿರುವ ಸವಾಲುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜಾಗರೂಕರಾಗಿರುವುದು ಎಷ್ಟು ಮುಖ್ಯ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಏರ್ಪಟ್ಟಿದೆ. ನೆಟ್ಟಿಗರೊಬ್ಬರು "ಕೊರಿಯಾ ಅತ್ಯಂತ ಸುರಕ್ಷಿತ ಎಂದು ಕೊಚ್ಚಿಕೊಳ್ಳುವವರಿಗೆ ಈ ಘಟನೆ ನೆನಲಿರಲಿ'' ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ವಿದೇಶದಲ್ಲೂ, ʼʼಮಹಿಳೆಯರಿಗೆ ಸುರಕ್ಷತೆ ಇಲ್ಲ ಅನ್ನೋದು ಖಚಿತವಾಯಿತುʼʼ ಎಂದು ಬರೆದಿದ್ದಾರೆ.