ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡ್ಯೂಟಿಯಲ್ಲಿದ್ದ ಟ್ರಾಫಿಕ್ ಕಾನ್‌ಸ್ಟೇಬಲ್ ಮೇಲೆ ಜೆಡಿಎಸ್ ಮುಖಂಡನಿಂದ ಭೀಕರ ಹಲ್ಲೆ: ವಿಡಿಯೊ ವೈರಲ್!

Viral Video: ಟ್ರಾಫಿಕ್ ಕಾನ್‌ಸ್ಟೇಬಲ್ ಮೇಲೆ ಜೆಡಿಎಸ್ ಮುಖಂಡನೊಬ್ಬ ಹಲ್ಲೆ ನಡೆಸಿದ ಅಘಾತಕಾರಿ ಘಟನೆಯೊಂದು ನಡೆದಿದೆ. ಸಿಬ್ಬಂದಿಯ ಕಾಲರ್ ಹಿಡಿದು ಸಾರ್ವಜನಿಕರ ಮುಂದೆಯೇ ಸರಿಯಾಗಿ ಥಳಿಸಿದ್ದಾನೆ. ಆಗಸ್ಟ್ 16ರಂದು ಸಂಜೆ 4 ಗಂಟೆಯ ಸುಮಾರಿಗೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಈ ಹಲ್ಲೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಟ್ರಾಫಿಕ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ಎಸಗಿದ ಜೆಡಿಎಸ್ ಮುಖಂಡ!

ಟ್ರಾಫಿಕ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ಎಸಗಿದ ಜೆಡಿಎಸ್ ಮುಖಂಡ -

Profile
Pushpa Kumari Aug 17, 2026 5:14 PM

​ಬೆಂಗಳೂರು,ಆ.17: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಕಾನ್‌ಸ್ಟೇಬಲ್ ಮೇಲೆ ಜೆಡಿಎಸ್ ಮುಖಂಡನೊಬ್ಬ ಹಲ್ಲೆ ನಡೆಸಿದ ಅಘಾತಕಾರಿ ಘಟನೆಯೊಂದು ನಡೆದಿದೆ. ಸಿಬ್ಬಂದಿಯ ಕಾಲರ್ ಹಿಡಿದು ಸಾರ್ವಜನಿಕರ ಮುಂದೆಯೇ ಸರಿಯಾಗಿ ಥಳಿಸಿದ್ದಾನೆ. ಆಗಸ್ಟ್ 16ರಂದು ಸಂಜೆ 4 ಗಂಟೆಯ ಸುಮಾರಿಗೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ.ಈ ಹಲ್ಲೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಸಂಚಾರ ನಿಯಂತ್ರಣದಲ್ಲಿ ಟ್ರಾಫಿಕ್ ಕಾನ್‌ಸ್ಟೇಬಲ್ ಅರುಣ್ ಎಂ. ಬಡಗೌಡರ್ ಕಾರ್ಯ ನಿರ್ವಹಿಸುತ್ತಿದ್ದರು. ವಾಹನ ತಡೆದರು ಎನ್ನುವ ಕಾರಣಕ್ಕೆ ಕೆರಳಿದ ಜೆಡಿಎಸ್ ಮುಖಂಡ ಕಾರಿನಿಂದ ಕೆಳಗಿಳಿದು ಪೊಲೀಸ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ. ಸಿಬ್ಬಂದಿಯ ಕಾಲರ್ ಹಿಡಿದು ಸರಿಯಾಗಿ ಥಳಿಸಿದ್ದಾನೆ. ಹಲ್ಲೆ ಮಾಡಿರುವ ವ್ಯಕ್ತಿಯನ್ನು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜು (ಗೊಟ್ಟಿಗೆರೆ ಮಂಜಣ್ಣ) ಎಂದು ಗುರುತಿಸಲಾಗಿದೆ

ವಿಡಿಯೋ ನೋಡಿ:



ವಾಹನ ಸಂಚಾರ ಸುಗಮಗೊಳಿಸಲು ಕಾನ್‌ಸ್ಟೇಬಲ್ ಅರುಣ್ ಅವರು ಮಂಜು ಅವರ ವಾಹನ ವನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಯನ್ನು ತಮ್ಮ ವಾಹನವನ್ನು ಏಕೆ ನಿಲ್ಲಿಸ ಲಾಯಿತು ಎಂದು ಪ್ರಶ್ನಿಸಿ ಹಲ್ಲೆಗೆ ಯತ್ನಿಸಿದ್ದಾರೆ. ವೈರಲ್ ದೃಶ್ಯದಲ್ಲಿ ಕಾಲರ್ ಹಿಡಿದು ಅಧಿಕಾರಿಗೆ ಸರಿಯಾಗಿ ಥಳಿಸಿರುವ ದೃಶ್ಯ ಕಾಣಬಹುದು.

Viral Video: ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ

ಸಾರ್ವಜನಿಕವಾಗಿ ನಡೆದ ಈ ಘಟನೆಯನ್ನು ಗಮನಿಸಿದ ಹತ್ತಿರದ ಜನರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಡೆಯಲು ಮುಂದಾದರು. ಈ ಘಟನೆಯ ನಂತರ, ಪೊಲೀಸರು ಭಾನುವಾರ ತಡರಾತ್ರಿ ಮಂಜು ಅವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ (IPC/BNS) ಮತ್ತು ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.