Viral Video: ಈತನ ಸುಮಧುರ ಕಂಠಕ್ಕೆ ನೆಟ್ಟಿಗರು ಫುಲ್ ಫಿದಾ! ಇವ್ರು ಯಾರು ಅಂತಾ ತಿಳಿದ್ರೆ ನೀವೇ ಶಾಕ್ ಆಗ್ತೀರಿ
Kashish Mittal song goes viral: ಕಾಶಿಶ್ ಮಿತ್ತಲ್ ಎಂಬುವವರು ಸುಮಧುರವಾಗಿ ಹಾಡಿರುವ ವಿಡಿಯೊ ಭಾರಿ ವೈರಲ್ ಆಗುತ್ತಿದೆ. ನುಸ್ರತ್ ಫತೇಹ್ ಅಲಿ ಖಾನ್ ಅವರ ಉಂಕೆ ಅಂದಾಜ್-ಎ-ಕರಮ್ ಹಾಡನ್ನು ಭಾವಪೂರ್ಣವಾಗಿ ಹಾಡಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿದೆ.


ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಅನೇಕರು ನಾನಾ ಕಾರಣಗಳಿಂದ ಆಗಾಗ ವೈರಲ್ ಆಗುತ್ತಿರುತ್ತಾರೆ. ಇದೀಗ ಕಾಶಿಶ್ ಮಿತ್ತಲ್ ಎಂಬುವವರು ಸುಮಧುರವಾಗಿ ಹಾಡಿರುವ ವಿಡಿಯೊ ಭಾರಿ ವೈರಲ್ ಆಗುತ್ತಿದೆ. ನುಸ್ರತ್ ಫತೇಹ್ ಅಲಿ ಖಾನ್ ಅವರ ಉಂಕೆ ಅಂದಾಜ್-ಎ-ಕರಮ್ ಹಾಡನ್ನು ಭಾವಪೂರ್ಣವಾಗಿ ಹಾಡಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು(Viral Video) ಮಾಡುತ್ತಿದೆ.
ಐಎಎಸ್ ಅಧಿಕಾರಿಯಾಗಿದ್ದ ಕಾಶಿಶ್ ಮಿತ್ತಲ್ ಅವರ ಧ್ವನಿ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಪ್ರಭಾವಿತಗೊಳಿಸಿವೆ. ಕಾಶಿಶ್ ಅವರ ಧ್ವನಿಗಾಗಿ ಮಾತ್ರವಲ್ಲದೆ ಸಂಗೀತದ ಮೂಲಕ ವೈಯಕ್ತಿಕ ಭಾವನೆಯನ್ನು ಹಂಚಿಕೊಂಡಿದ್ದಕ್ಕಾಗಿ ಅನೇಕರು ಅವರನ್ನು ಹೊಗಳಿದ್ದಾರೆ. ಅವರು ಸಾಮಾನ್ಯ ಐಎಎಸ್ ಅಧಿಕಾರಿಯಲ್ಲ. ಅವರು ಐಐಟಿ ಜೆಇಇಯಲ್ಲಿ ಅಖಿಲ ಭಾರತ ರ್ಯಾಂಕ್ 6 ಮತ್ತು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 58ನೇ ರ್ಯಾಂಕ್ ಗಳಿಸಿದ್ದಾರೆ.
ಕಾಶಿಶ್ ಮಿತ್ತಲ್ ಯಾರು?
ಮಿತ್ತಲ್ 1989ರಲ್ಲಿ ಜಲಂಧರ್‌ನಲ್ಲಿ ಜನಿಸಿದರು. ಅವರು ಐಐಟಿ ದೆಹಲಿಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪೂರ್ಣಗೊಳಿಸಿದರು. ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಶಾಲೆ, ಕಾಲೇಜು ಮತ್ತು ಕಠಿಣ ಪರೀಕ್ಷೆಗಳನ್ನು ಎದುರಿಸುತ್ತಿದ್ದರೂ ಸಹ, ಸಂಗೀತ ಯಾವಾಗಲೂ ಅವರ ಜೀವನದ ಪ್ರಮುಖ ಭಾಗವಾಗಿತ್ತು. ಕೆಲವೇ ವರ್ಷಗಳಲ್ಲಿ, ಅವರು ತಮ್ಮ ಪ್ರತಿಭೆಗೆ ಮನ್ನಣೆ ಗಳಿಸಿದರು. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದಿಂದ ಎ ಗ್ರೇಡ್ ಪಡೆದರು.
ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಕಾಶಿಶ್ ಮಿತ್ತಲ್, ‘ಪ್ರೀತಿಯಲ್ಲಿ ಬಿದ್ದ ನಂತರ ನಿಮಗೆ ಏನೂ ಉಳಿದಿಲ್ಲದಿದ್ದಾಗ’ ಎಂದು ಬರೆದಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ ಒಬ್ಬ ಬಳಕೆದಾರರು ತಮಾಷೆಯಾಗಿ, ಸರ್ ನಿಮ್ಮ ಹೃದಯವನ್ನು ಯಾರು ಮುರಿದರು ಎಂದು ಕೇಳಿದರು.
ವಿಡಿಯೊ ಇಲ್ಲಿದೆ
ಐಐಟಿ, ಐಎಎಸ್ ನಂತರವೂ ಉತ್ಸಾಹವನ್ನು ಮುಂದುವರಿಸಿರುವುದಕ್ಕೆ ಅನೇಕರು ಗೌರವ ವ್ಯಕ್ತಪಡಿಸಿದ್ದಾರೆ. ಅಬ್ಬಾ, ಎಂತಹ ಸುಮಧುರ ಧ್ವನಿ ಎಂದೆಲ್ಲಾ ಕಾಮೆಂಟ್‍ನಲ್ಲಿ ಮಿತ್ತಲ್ ಅವರನ್ನು ಬಳಕೆದರಾರು ಕೊಂಡಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಸಾವಿರಾರು ಜನ ಓಡಾಡೋ ಹೈವೇಯಲ್ಲಿ ನೇತಾಡುತ್ತಿದೆ ಅಪಾಯಕಾರಿ ಕೇಬಲ್ ವೈರ್! ವಿಡಿಯೊ ಫುಲ್ ವೈರಲ್
ಅಂದಹಾಗೆ, ಕಾಶಿಶ್ ಮಿತ್ತಲ್ ಅವರ ತಂದೆ ಜಗದೀಶ್ ಕುಮಾರ್ ಐಪಿಎಸ್ ಅಧಿಕಾರಿಯಾಗಿದ್ದರು. ತಂದೆಯನ್ನೇ ಅನುಸರಿಸಿದ ಕಾಶಿಶ್, ಒಂಬತ್ತು ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ, ಅವರು ಚಂಡೀಗಢದಲ್ಲಿ ಹೆಚ್ಚುವರಿ ಉಪ ಆಯುಕ್ತರಾಗಿ ಮತ್ತು ಅರುಣಾಚಲ ಪ್ರದೇಶದ ತವಾಂಗ್‌ನ ಉಪ ಆಯುಕ್ತರಾಗಿ ಕೆಲಸ ಮಾಡಿದರು. ವಿದೇಶಾಂಗ ಸಚಿವಾಲಯ ಮತ್ತು ನೀತಿ ಆಯೋಗದಲ್ಲೂ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಅವರು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
ನಾಗರಿಕ ಸೇವೆಗಳಿಂದ ದೂರ ಸರಿದ ನಂತರ, ಕಾಶಿಶ್ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ತಮ್ಮ ಸಮಯವನ್ನು ಮೀಸಲಿಟ್ಟರು. ಅವರ ಕಠಿಣ ಪರಿಶ್ರಮವು ಅವರಿಗೆ 2007 ರಲ್ಲಿ ಪಂಜಾಬ್ ರಾಜ್ಯ ಕಲೆ ಮತ್ತು ಸಂಸ್ಕೃತಿ ಪ್ರಶಸ್ತಿ, ನಂತರ 2010 ರಲ್ಲಿ ಐಐಟಿ ದೆಹಲಿಯಿಂದ ಸರಸ್ವತಿ ಸಮ್ಮಾನ್ ಮತ್ತು 2018 ರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ನಾದ್ ಶ್ರೀ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.