ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WCL 2025: ವಿರಾಟ್‌ ಕೊಹ್ಲಿಗೆ ಸ್ಥಾನ, ತಮ್ಮ ನೆಚ್ಚಿನ ವಿಶ್ವದ ಪ್ಲೇಯಿಂಗ್‌ XI ಆರಿಸಿದ ಎಬಿ ಡಿ ವಿಲಿಯರ್ಸ್‌!

ABD Picks World XI: ವಿಶ್ವ ಚಾಂಪಿಯನ್‌ಷಿಪ್‌ ಆಫ್‌ ಲೆಜೆಂಡ್ಸ್‌ ಆಡುತ್ತಿರುವ ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌, ತಮ್ಮ ನೆಚ್ಚಿನ ವಿಶ್ವದ ಪ್ಲೇಯಿಂಗ್‌ Xi ಆರಿಸಿದ್ದಾರೆ. ತಮ್ಮ ನೆಚ್ಚಿನ ತಂಡದಲ್ಲಿ ಇಬ್ಬರು ಭಾರತೀಯರಿಗೆ ಎಬಿಡಿ ಅವಕಾಶವನ್ನು ನೀಡಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ವಿಕೆಟ್‌ ಕೀಪರ್‌ ಎಂಎಸ್‌ ಧೋನಿಗೆ ಸ್ಥಾನವನ್ನು ನೀಡಿದ್ದಾರೆ.

WCL 2025: ತಮ್ಮ ನೆಚ್ಚಿನ ವಿಶ್ವದ ಪ್ಲೇಯಿಂಗ್‌  XI ಕಟ್ಟಿದ ಎಬಿಡಿ!

ತಮ್ಮ ನೆಚ್ಚಿನ ವಿಶ್ವದ ಪ್ಲೇಯಿಂಗ್‌ XI ಆರಿಸಿದ ಎಬಿಡಿ.

Profile Ramesh Kote Jul 23, 2025 8:00 PM

ನವದೆಹಲಿ: ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿರುವ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB) ತಂಡದ ದಿಗ್ಗಜ ಎಬಿ ಡಿ ವಿಲಿಯರ್ಸ್‌ (AB De Villiers), ಪ್ರಸ್ತುತ ವಿಶ್ವ ಚಾಂಪಿಯನ್‌ಷಿಪ್‌ ಆಪ್‌ ಲೆಜೆಂಡ್ಸ್‌ ಟೂರ್ನಿಯಲ್ಲಿ (WCL 2025) ಆಡುತ್ತಿದ್ದಾರೆ. ಅವರು ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಟೂರ್ನಿಯ ಪಂದ್ಯದ ವೇಳೆ ಎಬಿ ಡಿ ವಿಲಿಯರ್ಸ್‌ ಅವರು ತಮ್ಮ ನೆಚ್ಚಿನ ವಿಶ್ವದ ಪ್ಲೇಯಿಂಗ್‌ XI ಅನ್ನು ಆಯ್ಕೆ ಮಾಡಿದ್ದಾರೆ. ಭಾರತದ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್‌ ಧೋನಿ ಸೇರಿ ಇಬ್ಬರು ಭಾರತೀಯರಿಗೆ ಸ್ಥಾನವನ್ನು ನೀಡಿದ್ದಾರೆ.

ಬುಧವಾರ (ಜುಲೈ 23) ಟೂರ್ನಿಯ ನಿರೂಪಕಿ ಶೆಫಾಲಿ ಬಗ್ಗಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಎಬಿ ಡಿ ವಿಲಿಯರ್ಸ್‌ ವಿಶ್ವದ ತಮ್ಮ ನೆಚ್ಚಿನ ಪ್ಲೇಯಿಂಗ್‌ XI ಅನ್ನು ಪ್ರಕಟಿಸಿದ್ದಾರೆ.‌ ಗ್ರೇಮ್ ಸ್ಮಿತ್‌ ಮತ್ತು ಮ್ಯಾಥ್ಯೂ ಹೇಡನ್‌ ಅವರನ್ನು ತಮ್ಮ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನಾಗಿ ಎಬಿಡಿ ಆರಿಸಿದ್ದಾರೆ. ಮೂರನೇ ಕ್ರಮಾಂಕಕ್ಕೆ ರಿಕಿ ಪಾಂಟಿಂಗ್‌ ಹಾಗೂ ನಾಲ್ಕನೇ ಕ್ರಮಾಂಕಕ್ಕೆ ವಿರಾಟ್‌ ಕೊಹ್ಲಿಯನ್ನು ಆಯ್ಕೆ ಮಾಡಲಾಗಿದೆ. ನಂತರ ಸ್ಟೀವನ್‌ ಸ್ಮಿತ್‌ ಮತ್ತು ಕೇನ್‌ ವಿಲಿಯಮ್ಸನ್‌ ಅವರನ್ನು ಕ್ರಮವಾಗಿ 5 ಮತ್ತು 6ನೇ ಕ್ರಮಾಂಕಗಳಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ವಿಕೆಟ್‌ ಕೀಪರ್‌ ಹಾಗೂ ಏಳನೇ ಕ್ರಮಾಂಕಕ್ಕೆ ಎಂಎಸ್‌ ಧೋನಿಯನ್ನು ಎಬಿಡಿ ತೆಗೆದುಕೊಂಡಿದ್ದಾರೆ.

ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿ ಅನುಭವಿಸಿದ್ದ ಕರಾಳ ದಿನಗಳನ್ನು ನೆನೆದ ಎಬಿ ಡಿ ವಿಲಿಯರ್ಸ್‌!

ಇನ್ನು ಎಬಿ ಡಿವಿಲಿಯರ್ಸ್‌ ಆರಿಸಿದ ಬೌಲಿಂಗ್‌ ವಿಭಾಗದಲ್ಲಿ ಆಸ್ಟ್ರೇಲಿಯಾ ಮಾಜಿ ವೇಗಿ ಮಿಚೆಲ್‌ ಜಾನ್ಸನ್‌ ಹಾಗೂ ಪಾಕಸ್ತಾನದ ಮೊಹಮ್ಮದ್‌ ಆಸಿಫ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಪೂರ್ಣ ಪ್ರಮಾಣದ ಸ್ಪಿನ್ನರ್‌ಗಳಾಗಿ ಮುತ್ತಯ್ಯ ಮುರಳಿಧರನ್‌ ಹಾಗೂ ಆಸೀಸ್‌ ದಿಗ್ಗಜ ಶೇನ್‌ ವಾರ್ನ್‌ ಸ್ಥಾನ ಪಡೆದಿದ್ದಾರೆ. ಈ ತಂಡದ 12ನೇ ಆಟಗಾರನಾಗಿ ಆಸ್ಟ್ರೇಲಿಯಾ ದಿಗ್ಗಜ ಗ್ಲೆನ್‌ ಮೆಗ್ರಾಥ್‌ ಅವಕಾಶವನ್ನು ಪಡೆದಿದ್ದಾರೆ.

ಎಬಿ ಡಿ ವಿಲಿಯರ್ಸ್‌ ಆಯ್ಕೆಯ ವಿಶ್ವದ ಪ್ಲೇಯಿಂಗ್‌ XI: ಗ್ರೇಮ್‌ ಸ್ಮಿತ್‌, ಮ್ಯಾಥ್ಯೂ ಹೇಡನ್‌, ರಿಕಿ ಪಾಂಟಿಂಗ್‌, ವಿರಾಟ್‌ ಕೊಹ್ಲಿ, ಸ್ಟೀವನ್‌ ಸ್ಮಿತ್‌, ಕೇನ್‌ ವಿಲಿಯಮ್ಸನ್‌, ಎಂಎಸ್‌ ಧೋನಿ (ವಿ.ಕೀ), ಮಿಚೆಲ್‌ ಜಾನ್ಸನ್‌, ಮೊಹಮ್ಮದ್‌ ಆಸಿಫ್‌, ಮುತ್ತಯ್ಯ ಮುರಳಿಧರನ್‌, ಶೇನ್‌ ವಾರ್ನ್‌.

IND vs ENG: IND vs ENG: ಕನ್ನಡಿಗ ಕರುಣ್‌ ನಾಯರ್‌ರ ಟೆಸ್ಟ್‌ ವೃತ್ತಿ ಜೀವನ ಅಂತ್ಯ? ಫ್ಯಾನ್ಸ್‌ ಪ್ರತಿಕ್ರಿಯೆ!

ಭಾರತ ಚಾಂಪಿಯನ್ಸ್‌ ಎದುರು ಎಬಿಡಿ ಅರ್ಧಶತಕ

ಜುಲೈ 22ರಂದು ನಾರ್ಥ್‌ಹ್ಯಾಮ್ಟನ್‌ನ ಕೌಂಟಿ ಗ್ರೌಂಡ್‌ನಲ್ಲಿ ಭಾರತ ಚಾಂಪಿಯನ್ಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ಕಾದಾಟ ನಡೆಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ, ಬಹುಬೇಗ ಮೂವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತು. ಹಾಶಿಮ್‌ ಆಮ್ಲಾ (22), ಜಾಕ್‌ ಕಾಲಿಸ್‌ (24) ಹಾಗೂ ಸರೆಲ್‌ ಎರ್ವಿ (15) ಬೇಗ ಔಟ್‌ ಆದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಎಬಿ ಡಿ ವಿಲಿಯರ್ಸ್‌ ಕೇವಲ 28 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದಾರೆ. ಇವರ ಜೊತೆಗೆ ಜೆಜೆ ಸ್ಮಟ್ಸ್‌ 17 ಎಸೆತಗಳಲ್ಲಿ 30 ರನ್‌ ಸಿಡಿಸಿದ್ದರು. ಎಬಿಡಿ ಹಾಗೂ ಸ್ಮಟ್ಸ್‌ 6ನೇ ವಿಕೆಟ್‌ಗೆ 71 ರನ್‌ಗಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 208 ರನ್‌ಗಳನ್ನು ಕಲೆ ಹಾಕಿತ್ತು.

ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ಚಾಂಪಿಯನ್ಸ್‌ಗೆ ಡಿಆರ್‌ಎಸ್‌ ಪ್ರಕಾರ 200 ರನ್‌ಗಳ ಗುರಿಯನ್ನು ನೀಡಲಾಗಿತ್ತು. ಆದರೆ, ಯುವರಾಜ್‌ ನಾಯಕತ್ವದ ಭಾರತ 18.2 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 111 ರನ್‌ಗಳಿಗೆ ಸೀಮಿತವಾಗಿತ್ತು. ಆ ಮೂಲಕ 88 ರನ್‌ಗಳಿಂದ ಸೋಲು ಅನುಭವಿಸಿತ್ತು. ಗಾಯದ ಕಾರಣ ಯುವರಾಜ್‌ ಸಿಂಗ್‌ ಬ್ಯಾಟ್‌ ಮಾಡಿರಲಿಲ್ಲ.