Viral Video: ಇಸ್ಕಾನ್‌ನೊಳಗೆ ಚಿಕನ್ ತಿಂದ ಕಿಡಿಗೇಡಿ- ಭಕ್ತರ ರಿವೇಂಜ್ ಹೇಗಿತ್ತು ಗೊತ್ತಾ? ವಿಡಿಯೊ ಫುಲ್ ವೈರಲ್
ISCKON devotees coolest revenge: ಇಸ್ಕಾನ್ ನಡೆಸುತ್ತಿರುವ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಗೋವಿಂದಾಸ್‌ನಲ್ಲಿ ಆಫ್ರಿಕನ್ ಮೂಲದ ಯುವಕನೊಬ್ಬ ಕೋಳಿ ಮಾಂಸ ತಿನ್ನುತ್ತಿರುವ ವಿಡಿಯೊ ಭಾರಿ ವೈರಲ್ ಆಗಿತ್ತು. ಇದೀಗ ಇಸ್ಕಾನ್ ಭಕ್ತರು ಕೆಎಫ್‍ಸಿ ಮೇಲೆ ಶಾಂತ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದಾರೆ.


ಲಂಡನ್: ಇಸ್ಕಾನ್ (ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್) ನಡೆಸುತ್ತಿರುವ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಗೋವಿಂದಾಸ್‌ನಲ್ಲಿ ಆಫ್ರಿಕನ್ ಮೂಲದ ಯುವಕನೊಬ್ಬ ಕೋಳಿ ಮಾಂಸ ತಿನ್ನುತ್ತಿರುವ ವಿಡಿಯೊ ಭಾರಿ ವೈರಲ್ ಆಗಿತ್ತು. ಇದು ಭಾರಿ ಆಕ್ರೋಶಕ್ಕೂ ಕಾರಣವಾಗಿತ್ತು. ಇದೀಗ ಇಸ್ಕಾನ್ ಭಕ್ತರು ಕೆಎಫ್‍ಸಿ ಮೇಲೆ ಶಾಂತ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ.
ಹೌದು, ಲಂಡನ್‍ನಲ್ಲಿ ಇಸ್ಕಾನ್ ನಡೆಸುತ್ತಿರುವ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಒಳಗೆ ಪ್ರವೇಶಿಸಿದ ವ್ಯಕ್ತಿಯೊಬ್ಬ ಸಿಬ್ಬಂದಿಗೆ ಮಾಂಸಾಹಾರಿ ಆಹಾರ ಲಭ್ಯವಿದೆಯೇ ಎಂದು ಕೇಳಿದ್ದಾನೆ. ಇಲ್ಲಿ ಸಸ್ಯಾಹಾರಿ ಊಟ ಮಾತ್ರ ನೀಡಲಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಆ ಬಳಿಕ ಆತ, ಕೆಎಫ್‌ಸಿ ಚಿಕನ್ ಬಾಕ್ಸ್ ಅನ್ನು ಹೊರತೆಗೆದು ಆವರಣದೊಳಗೆ ತಿನ್ನಲು ಪ್ರಾರಂಭಿಸಿದ್ದಾನೆ. ಅಲ್ಲದೆ, ಅಲ್ಲಿದ್ದ ಸಿಬ್ಬಂದಿ ಮತ್ತು ಇತರೆ ಊಟ ಮಾಡುತ್ತಿದ್ದವರಿಗೆ ಮಾಂಸವನ್ನು ನೀಡುತ್ತಾನೆ. ಅವನ ಈ ಕೃತ್ಯದಿಂದ ಅಲ್ಲಿದ್ದವರಿಗೆ ಇರಿಸುಮುರುಸು ಉಂಟಾಯಿತು. ಅಂತಿಮವಾಗಿ ಅವನನ್ನು ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ದರು.
ಈ ಘಟನೆಯ ನಂತರ ಇಸ್ಕಾನ್ ಭಕ್ತರು ಶಾಂತವಾಗಿ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಇಬ್ಬರು ಇಸ್ಕಾನ್ ಸಂತರು ಕೆಎಫ್‌ಸಿ ಔಟ್‌ಲೆಟ್‌ನ ಹೊರಗೆ ನಿಂತು ಹರೇ ರಾಮ ಹರೇ ಕೃಷ್ಣ ಎಂದು ಜಪಿಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದ್ದು, ಇದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಅತ್ಯಂತ ಶಾಂತ ರೀತಿಯ ಪ್ರತೀಕಾರ ಎಂದು ಕರೆದಿದ್ದಾರೆ.
ವಿಡಿಯೊ ಇಲ್ಲಿದೆ:
They come to our restaurants to harass us, & we come to uplift their consciousness. 🙌 Hare Kṛṣṇa pic.twitter.com/7dQm5D42qx
— Senāpati Bhakta (@bhaktSenapati) July 22, 2025
Official statement from ISKCON London due to recent social media influencer incident at Govinda’s Restaurant, Soho Street, London. pic.twitter.com/cgWHs575FS
— ISKCON London Radha-Krishna Temple (@iskconlondon) July 21, 2025
ಅವರು ನಮ್ಮ ರೆಸ್ಟೋರೆಂಟ್‌ಗಳಿಗೆ ಕಿರುಕುಳ ನೀಡಲು ಬರುತ್ತಾರೆ. ಆದರೆ, ನಾವು ಅವರ ಪ್ರಜ್ಞೆಯನ್ನು ಹೆಚ್ಚಿಸಲು ಬರುತ್ತೇವೆ ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಈ ಅಮಾನವೀಯ ಕೃತ್ಯದ ಅಪರಾಧಿಗಳನ್ನು ನಾವು ಕ್ಷಮಿಸುತ್ತೇವೆ ಮತ್ತು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ. ವರದಿಯ ಪ್ರಕಾರ, ಲಂಡನ್ ಪೊಲೀಸರು ಪ್ರಸ್ತುತ ಈ ವಿಚಾರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.