Viral Video: ನಿದ್ರೆಯಲ್ಲೂ 'ರೀಲ್ಸ್' ಸ್ಕ್ರಾಲ್' ಮಾಡುವ ಪುಟ್ಟ ಬಾಲಕಿ; ಪೋಷಕರ ಆತಂಕ!
ವಿಪರೀತ ನಿದ್ದೆಯಲ್ಲೂ ಮಗುವೊಂದು ಮೊಬೈಲ್ ಹಿಡಿದು ರೀಲ್ಸ್ ನೋಡುತ್ತಿರುವ ದೃಶ್ಯ ಕಂಡು ಬಂದಿದ್ದು ಅನೇಕರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಫೋನ್ ಬಳಸುವುದರ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದರು.
ನಿದ್ರೆಯಲ್ಲೂ 'ರೀಲ್ಸ್' ಸ್ಕ್ರಾಲ್' ಮಾಡುವ ಪುಟ್ಟ ಬಾಲಕಿ -
ನವದೆಹಲಿ,ಎ.11: ಇತ್ತೀಚೆಗೆ ಮೊಬೈಲ್ ಬಳಕೆ ಅನ್ನೋದು ಮಿತಿ ಮೀರಿ ಹೋಗಿದೆ. ಅದರಲ್ಲೂ ಮಕ್ಕಳು ಕೂಡ ಮೊಬೈಲ್ ವ್ಯಸನಿಯಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ವಿಪರೀತ ನಿದ್ದೆಯಲ್ಲೂ ಮಗುವೊಂದು ಮೊಬೈಲ್ ಹಿಡಿದು ರೀಲ್ಸ್ ನೋಡುತ್ತಿರುವ ದೃಶ್ಯ (Viral News) ಕಂಡು ಅನೇಕರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಫೋನ್ ಬಳಸುವುದರ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದರು.
ಪುಟ್ಟ ಬಾಲಕಿಯೂ ಗಾಢ ನಿದ್ರೆಯಲ್ಲೂ ಕೂಡ ಮೊಬೈಲ್ ಹಿಡಿದು 'ರೀಲ್ಸ್' ಸ್ಕ್ರಾಲ್ ಮಾಡಿದ್ದಾಳೆ. ಅವಳ ಕಣ್ಣುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದು ಅವಳು ಗಾಢ ನಿದ್ರೆ ಯಲ್ಲಿರುವಂತೆ ಕಾಣುತ್ತಾಳೆ. ಆದರೂ ಮೊಬೈಲ್ ಫೋನ್ ಅನ್ನು ಮುಖದ ಹತ್ತಿರ ಹಿಡಿದಿದ್ದಾಳೆ.
ವಿಡಿಯೋ ನೋಡಿ:
A LITTLE GIRL ADDICTED TO REELS WAS RECORDED ON CAM SCROLLING REELS EVEN WHILE ASLEEP. pic.twitter.com/RWb3dE1WzW
— Ghar Ke Kalesh (@gharkekalesh) April 7, 2026
ಬಾಲಕಿ ನಿದ್ರಿಸುತ್ತಿದ್ದರೂ, ಅವಳ ಬೆರಳು ಪರದೆಯ ಮೇಲೆ ಚಲಿಸುತ್ತಲೇ ಇರುತ್ತದೆ. ಅವಳು ರೀಲ್‌ಗಳ ಮೂಲಕ ಸ್ಕ್ರೋಲ್ ಮಾಡುತ್ತಿರುವಂತೆ ಕಾಣುತ್ತದೆ. ನಾವು ಮೊಬೈಲ್‌ನಲ್ಲಿ ರೀಲ್ಸ್ ಗಳನ್ನು ಹೇಗೆ ಸ್ಕ್ರೋಲ್ ಮಾಡುತ್ತೇವೆಯೋ ಅದೇ ರೀತಿ ಆಕೆ ನಿದ್ರೆಯಲ್ಲೂ ಮಾಡುತ್ತಿದ್ದಾಳೆ. ಈ ಬಗ್ಗೆ ಅನೇಕರು ಪೋಷಕರು ವಿರುದ್ಧ ಕಿಡಿಕಾರಿದ್ದಾರೆ. ಮೊಬೈಲ್ ಮಕ್ಕಳ ಆರೋಗ್ಯಕ್ಕೆ ಪರಿಣಾಮ ಬೀರುತ್ತಿದ್ದರೂ ಪೋಷಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
Viral Video: ರೀಲ್ಸ್ ತಂದ ಅವಾಂತರ; ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ವೀಡಿಯೊ,ಕೇವಲ 12 ಸೆಕೆಂಡುಗಳಿದ್ದು ಘರ್ ಕೆ ಕಲೇಶ್ ಎಂಬ ಪುಟವು ಹಂಚಿಕೊಂಡಿದೆ. ಇದು ತ್ವರಿತವಾಗಿ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಬಳಕೆದಾರರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಫೋನ್ ನೀಡುವುದಕ್ಕೆ ಪೋಷಕರನ್ನು ದೂಷಿಸಿದ್ದಾರೆ. ಒಬ್ಬ ಬಳಕೆದಾರರು, "ಇದು ಪೋಷಕರದೇ ತಪ್ಪು.. ಮಕ್ಕಳಿಗೆ ಯಾಕೆ ಫೋನ್ ನೀಡಬೇಕು ಎಂದಿದ್ದಾರೆ. ಮತ್ತೊಬ್ಬರು, "ಪ್ರತಿಯೊಬ್ಬ ಪೋಷಕರು ಈ ದೃಶ್ಯ ನೋಡಬೇಕು ಮತ್ತು ತಮ್ಮ ಫೋನ್‌ಗಳನ್ನು ತಮ್ಮ ಮಕ್ಕಳಿಂದ ದೂರವಿಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.