ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಬೆಂಗಳೂರಿನ ಕಟ್ಟಡದ ​ಬಾಲ್ಕನಿಯಲ್ಲಿ ಓಪನ್ ಟಾಯ್ಲೆಟ್; ಮನೆಯ ಮಾಲಕ ಪ್ರಕೃತಿ ಪ್ರೇಮಿಯಾಗಿರಬೇಕೆಂದು ಕಾಲೆಳೆದ ನೆಟ್ಟಿಗರು

ಬೆಂಗಳೂರಿನ ಮನೆಯೊಂದರ ಬಾಲ್ಕನಿಯಲ್ಲಿರುವ ಓಪನ್‌ ಶೌಚಾಲಯದ ವಿಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. ಈ ಶೌಚಾಲಯ ಓಪನ್ ಪ್ಲೇಸ್‌ನಲ್ಲಿದ್ದರೂ ಇದನ್ನು ಬಳಸುತ್ತಿದ್ದಾರೆ ಎಂದು ಯುವತಿಯೊಬ್ಬಳು ಅಚ್ಚರಿ ವ್ಯಕ್ತಪಡಿಸಿದ್ದಾಳೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ವಿಚಿತ್ರ ಓಪನ್ ಟಾಯ್ಲೆಟ್‌ ಕಂಡು ದಂಗಾದ ನೆಟ್ಟಿಗರು

ಬೆಂಗಳೂರಿನ ​ಬಾಲ್ಕನಿಯಲ್ಲಿರುವ ಓಪನ್ ಟಾಯ್ಲೆಟ್ -

Profile
Pushpa Kumari Jun 21, 2026 3:56 PM

ಬೆಂಗಳೂರು, ಜೂ. 21: ಸಿಲಿಕಾನ್ ಸಿಟಿ ಬೆಂಗಳೂರು ಎಂದಾಗ ಇಲ್ಲಿನ ನಗರ ಜೀವನ ಶೈಲಿ, ಆಧುನಿಕ ವಿನ್ಯಾಸದ ಕಟ್ಟಡಗಳು, ತಂತ್ರಜ್ಞಾನ ನೆನಪಿಗೆ ಬರುತ್ತದೆ. ಅದರಲ್ಲೂ ಇಲ್ಲಿನ ಮನೆಯ ವಿನ್ಯಾಸ, ಬಾಡಿಗೆ ಮೊತ್ತ ಹಾಟ್ ಟಾಪಿಕ್ ಆಗಿರುತ್ತದೆ. ಆದರೆ ಇದೀಗ ಇಲ್ಲಿನ ಮನೆಯೊಂದರ ಬಾಲ್ಕನಿಯಲ್ಲಿ ಇರುವ ಶೌಚಾಲಯದ ವಿಡಿಯೊವೊಂದು ಭಾರಿ ವೈರಲ್ (Viral News) ಆಗುತ್ತಿದೆ. ಈ ಶೌಚಾಲಯ ಓಪನ್ ಪ್ಲೇಸ್‌ನಲ್ಲಿದ್ದರೂ ಜನ ಇದನ್ನು ಬಳಸುತ್ತಿದ್ದಾರೆ ಎಂದು ಯುವತಿಯೊಬ್ಬಳು ಅಚ್ಚರಿ ವ್ಯಕ್ತ ಪಡಿಸಿದ್ದಾಳೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾನ್ಯವಾಗಿ ವಾಶ್ ರೂಮ್ ಅಂದಾಗ ನಾಲ್ಕು ಗೋಡೆಗಳ ಮಧ್ಯದಲ್ಲಿ ಕಟ್ಟಿ ಬಳಕೆ ಮಾಡ ಲಾಗುತ್ತದೆ. ಆದರೆ ಇಲ್ಲಿ ಬಾಲ್ಕನಿ ಬಾಗಿಲು ತೆರೆದಾಗ ಅಲ್ಲಿ ಯಾವುದೇ ಗೋಡೆ ಅಥವಾ ಯಾವುದೇ ಅಡ್ಡಲಾಗಿ ಇಲ್ಲದೆ ಸಂಪೂರ್ಣವಾಗಿ ತೆರೆದ ಜಾಗದಲ್ಲಿ ಟಾಯ್ಲೆಟ್ ಮಾಡಲಾಗಿದೆ. ಈ ಸೆಟಪ್ ಟಾಯ್ಲೆಟ್ ಸೀಟ್, ಫ್ಲಶ್ ಟ್ಯಾಂಕ್ ಮತ್ತು ಹ್ಯಾಂಡ್ ಶವರ್ ಅನ್ನು ಒಳಗೊಂಡಿದೆ.

ವಿಡಿಯೊ ನೋಡಿ:



ವೈರಲ್ ಆದ ವಿಡಿಯೊದಲ್ಲಿ ಯುವತಿಯೊಬ್ಬಳು ತನ್ನ ಸ್ನೇಹಿತೆಯನ್ನು ಮನೆಯ ಬಾಲ್ಕನಿಗೆ ಕರೆದೊಯ್ದಳು. ಬಾಲ್ಕನಿ ಬಾಗಿಲು ತೆರೆದಾಗ ಅಲ್ಲಿ ವಿಚಿತ್ರ ದೃಶ್ಯವೊಂದು ಕಂಡುಬಂತು. ಬಾಲ್ಕನಿಯಲ್ಲಿ ಇರಿಸಲಾಗಿರುವ ಕವೋಡ್‌ ಕಂಡು ಬಂತು. ಟಾಯ್ಲೆಟ್ ಸೀಟ್, ಫ್ಲಶ್ ಟ್ಯಾಂಕ್ ಮತ್ತು ಹ್ಯಾಂಡ್ ಶವರ್ ಅನ್ನು ಇಡಲಾಗಿತ್ತು. ಗೊಂದಲಕ್ಕೆ ಒಳಗಾದ ಯುವತಿಯ ಸ್ನೇಹಿತೆ, ʼʼಯಾರಾದರೂ ಈ ಓಪನ್‌ ಟಾಯ್ಲೆಟ್ ಬಳಸುತ್ತಾರ?ʼʼ ಎಂದು ಪ್ರಶ್ನಿಸಿದ್ದಾಳೆ.

ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್‌ ಎಂದ ನೆಟ್ಟಿಗರು

ಯಾವುದೇ ಗೋಡೆ ಅಥವಾ ಮರೆಯಿಲ್ಲದೆ ಸಂಪೂರ್ಣವಾಗಿ ತೆರೆದ ಜಾಗದಲ್ಲಿ ಟಾಯ್ಲೆಟ್ ಸೀಟ್ ಅಳವಡಿಸಲಾಗಿದೆ. ಆರಂಭದಲ್ಲಿ ಇದು ಯಾರು ಬಳಸುತ್ತಿಲ್ಲ, ಪ್ರದರ್ಶನಕ್ಕೆ ಇಟ್ಟಿರಬಹುದು ಅಂದುಕೊಂಡರೂ ಯುವತಿ ಫ್ಲಶ್ ಟ್ಯಾಂಕ್ ಮತ್ತು ಹ್ಯಾಂಡ್ ಶವರ್ ಆನ್ ಮಾಡಿದಾಗ ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂತು.

ಯಾರಾದರೂ ಇಲ್ಲಿ ಕುಳಿತು ಬಳಕೆ ಮಾಡಲು ಹೇಗೆ ಸಾಧ್ಯ? ಎಂದು ವಿಡಿಯೊದಲ್ಲಿ ಯುವತಿಯರು ನಗುತ್ತಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರು ಮನೆಯ ಮಾಲಕ ಪ್ರಕೃತಿ ಪ್ರೇಮಿ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು "ಇದು ಮಾಸ್ಟರ್ ಮೈಂಡ್ ಪ್ಲಾನ್. ಫ್ಯಾನ್ ಅಗತ್ಯವಿಲ್ಲ. ಬಿಸಿ ಗಾಳಿಯ ಒತ್ತಡವಿಲ್ಲʼʼ ಎಂದು ಹೇಳಿದ್ದಾರೆ.