ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monalisa: ಚಿತ್ರೀಕರಣದಲ್ಲಿ ಪಾಲ್ಗೊಂಡ ಮೊನಾಲಿಸಾ ನೋಡಲು ಮುಗಿಬಿದ್ದ ಜನ; ವಿಡಿಯೊ ವೈರಲ್

ಮಹಾಕುಂಭಮೇಳದ ನಂತರ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಮೊನಾಲಿಸಾ ಅವರನ್ನು ನೋಡಲು ಮಧ್ಯಪ್ರ ದೇಶದ ಪಿಚೋರೆ ಪಟ್ಟಣದಲ್ಲಿ ನೂರಾರು ಜನರು ಜಮಾಯಿಸಿದ್ದರು. ಸಿನಿಮಾ ಚಿತ್ರೀಕರಣಕ್ಕೆ ಬಂದ ವೇಳೆ ಮೊನಾಲಿಸಾಳನ್ನು ನೋಡಿ ಜನರು ಸಂಭ್ರಮಪಟ್ಟರು. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಚಿತ್ರೀಕರಣದಲ್ಲಿ ಪಾಲ್ಗೊಂಡ ಮೊನಾಲಿಸಾ ನೋಡಲು ಮುಗಿಬಿದ್ದ ಜನ

ಮೊನಾಲಿಸಾ.

Profile Ramesh B Jul 19, 2025 3:48 PM

ಭೋಪಾಲ್‌: ಈ ವರ್ಷಾರಂಭದಲ್ಲಿ ನಡೆದ ಮಹಾಕುಂಭಮೇಳದಲ್ಲಿ ಮೊನಾಲಿಸಾ (Monalisa) ಎಂಬ ಆಕರ್ಷಕ ಕಂಗಳ ಯುವತಿ ಗಮನ ಸೆಳೆದಿದ್ದಳು. ಆಕೆಯ ವಿಡಿಯೊ ಸಾಕಷ್ಟು ವೈರಲ್‌ ಆಗಿ ಸಿನಿಮಾ ಆಫರ್ ಕೂಡ ಬಂದಿತ್ತು. ಇದೀಗ ಆಕೆ ತನ್ನ ಚೊಚ್ಚಲ ಚಿತ್ರೀಕರಣಕ್ಕಾಗಿ ಮಧ್ಯ ಪ್ರದೇಶ ಪಿಚೋರೆ ಪಟ್ಟಣಕ್ಕೆ ಆಗಮಿಸಿದ್ದಾಳೆ. ಈ ವೇಳೆ ಆಕೆಯನ್ನು ನೋಡಲು ನೂರಾರು ಮಂದಿ ಜಮಾಯಿಸಿದ್ದಾರೆ. ರಸ್ತೆಯುದ್ದಕ್ಕೂ ಜಮಾಯಿಸಿದ ಜನರು, ಮೊನಾಲಿಸಾಳನ್ನು ನೋಡಿ ಸಂಭ್ರಮಪಟ್ಟಿದ್ದಾರೆ.

ಈಗ ಆನ್‌ಲೈನ್‌ ಕಾಣಿಸಿಕೊಂಡಿರುವ ವಿಡಿಯೊವೊಂದರಲ್ಲಿ ಒಂದು ಕಟ್ಟಡದ ಟೆರೇಸ್‌ನಿಂದ ಜನರನ್ನುದ್ದೇಶಿಸಿ ಮಾತನಾಡಿರುವ ಮೊನಾಲಿಸಾಗೆ ಭಾರಿ ಜನಸಮೂಹ ಹರ್ಷೋದ್ಗಾರ ಮಾಡುವುದನ್ನು ಕಾಣಬಹುದು. ನಿಮ್ಮನ್ನೆಲ್ಲ ನೋಡಿ ಬಹಳ ಸಂತೋಷವಾಯಿತು ಎಂದು ಮೊನಾಲಿಸಾ ತಿಳಿಸಿದ್ದಾಳೆ. ಈ ವೇಳೆ ತನ್ನತ್ತ ಕೈ ಬೀಸುತ್ತಿದ್ದ ಜನರನ್ನು ನೋಡಿ ಮೊನಾಲಿಸಾ ಮುಗುಳ್ನಗುತ್ತಲೇ ಇದ್ದಳು.

ಈ ಸುದ್ದಿಯನ್ನೂ ಓದಿ: Monalisa Bhosle: ಕುಂಭಮೇಳದ ಮೊನಾಲಿಸಾ ಈಗ ಇನ್‌ಸ್ಟಗ್ರಾಂ ಸುಂದರಿ

ನಂತರ ಮೊನಾಲಿಸಾ ಅವರ ಚಲನಚಿತ್ರ ತಂಡದ ಸದಸ್ಯರೊಬ್ಬರು ಜನರನ್ನು ಸ್ಥಳದಿಂದ ನಿರ್ಗಮಿಸುವಂತೆ ವಿನಂತಿಸುತ್ತಿರುವುದು ಕಂಡುಬಂದಿದೆ. ಮರುದಿನ ಬೆಳಗ್ಗೆ ಮತ್ತೆ ಸಂವಹನ ನಡೆಸುವುದಾಗಿ ಭರವಸೆ ನೀಡಿದರು. “ನಾವು ನಾಳೆ ಮತ್ತೆ ಇಲ್ಲಿಗೆ ಬರುತ್ತೇವೆ, ಆಗ ಖಂಡಿತವಾಗಿಯೂ ಭೇಟಿಯಾಗುತ್ತೇವೆ. ನಾವು ಬೆಳಗ್ಗೆಯಿಂದ ಹೊರಗಿದ್ದೇವೆ. ನಮಗೆಲ್ಲರಿಗೂ ಸ್ವಲ್ಪ ವಿಶ್ರಾಂತಿ ಬೇಕು. ದಯವಿಟ್ಟು ಎಲ್ಲರೂ ಸ್ಥಳದಿಂದ ಹೊರಡುವಂತೆ ವಿನಂತಿಸುತ್ತೇನೆ” ಎಂದು ವಿನಮ್ರವಾಗಿ ಕೇಳಿಕೊಂಡರು.

ಈ ವರ್ಷದ ಆರಂಭದಲ್ಲಿ ನಡೆದ ಮಹಾಕುಂಭಮೇಳದಲ್ಲಿ ಮಣಿಗಳು ಮತ್ತು ಹೂವುಗಳನ್ನು ಮಾರಾಟ ಮಾಡುತ್ತಿದ್ದ ಯುವತಿಯ ವಿಡಿಯೊ ಏಕಾಏಕಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯ್ತು. ಮೊನಾಲಿಸಾ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದಳು. ಆಕೆಯನ್ನು ಅಲೌಕಿಕ ಸುಂದರಿ ಎಂದು ಕರೆಯಲಾಯಿತು. ಜನರು ಆಕೆಯ ಫೋಟೊ ಮತ್ತು ವಿಡಿಯೊಗಳನ್ನು ಸೆರೆ ಹಿಡಿದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಇದು ಸಾಮಾಜಿಕ ಜಾಲತಾಣದಲ್ಲಿ ಸಂಚಲನಕ್ಕೆ ಕಾರಣವಾಯಿತು.

ನಂತರ ಮೊನಾಲಿಸಾಗೆ ಸಿನಿಮಾ ಆಫರ್ ಬಂದಿದೆ ಎಂಬಂತಹ ಸುದ್ದಿ ಹರಿದಾಡಿತು. ಕೆಲವು ದಿನಗಳ ನಂತರ, ಚಲನಚಿತ್ರ ನಿರ್ಮಾಪಕ ಸನೋಜ್ ಮಿಶ್ರಾ ತಮ್ಮ ಮುಂದಿನ ಚಿತ್ರ 'ದಿ ಡೈರಿ ಆಫ್ ಮಣಿಪುರ್' ನಲ್ಲಿ ಮೊನಾಲಿಸಾಳನ್ನು ಆಯ್ಕೆ ಮಾಡುವುದಾಗಿ ಘೋಷಿಸಿದರು.