ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಜೀವದ ಹಂಗು ತೊರೆದು ಕಿಡಿಗೇಡಿಯ ಹೆಡೆಮುರಿ ಕಟ್ಟಿದ ಪೊಲೀಸರು... 240 ಕಿ.ಮೀ. ರಣಭೀಕರ ಚೇಸಿಂಗ್‌ ವಿಡಿಯೊ ನೋಡಿ

High-speed chase: ಪೊಲೀಸ್ ಅಧಿಕಾರಿಯನ್ನು ಕೊಂದ ಆರೋಪಿಯನ್ನು ಆರಕ್ಷಕರು ಬೆನ್ನಟ್ಟಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅತಿ ವೇಗದಲ್ಲಿ ಬೈಕ್‍ ಸವಾರಿ ಮಾಡುತ್ತಿದ್ದಾಗ ಕಾರು ಡಿಕ್ಕಿ ಹೊಡೆಸಿ ಆತನನ್ನು ನೆಲಕ್ಕುರುಳಿಸಿದ್ದಾರೆ. ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ.

240 ಕಿ.ಮೀ. ರಣಭೀಕರ ಪೊಲೀಸ್‌ ಚೇಸಿಂಗ್‌ ವಿಡಿಯೊ ನೋಡಿ

-

Priyanka P Priyanka P Oct 28, 2025 3:38 PM

ಕ್ಯಾಲಿಫೋರ್ನಿಯಾ: ಪೊಲೀಸ್ ಅಧಿಕಾರಿಯನ್ನು ಕೊಂದ ಆರೋಪಿಯು ಬೈಕ್‍ ಮೂಲಕ ಪಲಾಯನಗೈದಿದ್ದಾನೆ. ಆತನನ್ನು ಬೆನ್ನಟ್ಟಿದ್ದ ಅಧಿಕಾರಿಗಳು ಬೈಕ್‍ಗೆ ಕಾರು ಮೂಲಕ ಡಿಕ್ಕಿ ಹೊಡೆಸಿ, ಆತನನ್ನು ಕೆಡವಿದ್ದಾರೆ. ಮೈಜುಮ್ಮೆನ್ನಿಸುವ ಚೇಸಿಂಗ್ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಅಮೆರಿಕ (America) ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದೆ.

ಮಹಿಳೆಯೊಬ್ಬರಿಗೆ ಶಂಕಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕುತ್ತಿದ್ದಾನೆ ಎಂಬ ದೂರು ಕೇಳಿಬಂದಿದೆ. ಈ ವೇಳೆ ಪೊಲೀಸರು ಸ್ಥಳಕ್ಕಾಮಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಶಂಕಿತ ಅವರ ಮೇಲೆ ಫೈರಿಂಗ್ ಮಾಡಿದ್ದಾನೆ. ಪರಿಣಾಮ ಪೊಲೀಸ್ ಅಧಿಕಾರಿ ಗುಂಡೇಟಿಗೆ ಬಲಿಯಾಗಿದ್ದಾರೆ. ಅಧಿಕಾರಿಯನ್ನು ಕೊಂದ ಆರೋಪಿಯನ್ನು ಬಂಧಿಸಲು ಹೋದಾಗ ಆತ ತನ್ನ ಬೈಕ್‍ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆತನನ್ನು ಬೆನ್ನಟ್ಟಿದ ಪೊಲೀಸರು ಬೈಕ್‍ಗೆ ತಮ್ಮ ಕಾರಿನ ಮೂಲಕ ಡಿಕ್ಕಿ ಹೊಡೆಸುವ ಮೂಲಕ ಆತನನ್ನು ಖೆಡ್ಡಾಗೆ ಕೆಡವಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾದ ಹೆದ್ದಾರಿಯಲ್ಲಿ ಈ ದೃಶ್ಯ ಕಂಡುಬಂದಿದೆ.

ಹತ್ಯೆಯಾದ ಅಧಿಕಾರಿಯನ್ನು ಡೆಪ್ಯೂಟಿ ಆಂಡ್ರ್ಯೂ ನುನೆಜ್ ಎಂದು ಗುರುತಿಸಲಾಗಿದೆ. ಅವರು ಇಲಾಖೆಯಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ವರದಿಯ ಪ್ರಕಾರ, ಅವರು ಎರಡು ವರ್ಷದ ಮಗಳು ಮತ್ತು ಗರ್ಭಿಣಿ ಹೆಂಡತಿಯನ್ನು ಅಗಲಿದ್ದಾರೆ. ನಾವು ದುಃಖದಲ್ಲಿ ಮುಳುಗಿದ್ದೇವೆ ಎಂದು ಪೊಲೀಸ್ ಅಧಿಕಾರಿ ಶಾನನ್ ಡಿಕಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಿಡಿಯೊ ವೀಕ್ಷಿಸಿ:



ಮಧ್ಯಾಹ್ನ 12:37 ರ ಸುಮಾರಿಗೆ ಬಂದೂಕು ಹಿಡಿದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ದೂರು ಕೇಳಿ ಬಂದ ನಂತರ ನುನೆಜ್ ಮತ್ತು ಇತರ ನಿಯೋಗಿಗಳು ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ಶಂಕಿತನು ಗುಂಡು ಹಾರಿಸಿದ್ದಾನೆ. ನುನೆಜ್ ಮೇಲೆ ಮಾರಣಾಂತಿಕವಾಗಿ ಫೈರಿಂಗ್ ಮಾಡಿದ ನಂತರ, ಆರೋಪಿಯು ಬೈಕ್‍ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಆತ ಪಲಾಯನ ಮಾಡುತ್ತಿರುವುದು ತಿಳಿದುಬಂದಿದೆ. ಪಲಾಯನ ಮಾಡುವಾಗ ಶಂಕಿತನು ಗಂಟೆಗೆ 150 ಮೈಲುಗಳಿಗಿಂತ ಹೆಚ್ಚು (ಗಂಟೆಗೆ 240 ಕಿಮೀಗಿಂತ ಹೆಚ್ಚು) ವೇಗದಲ್ಲಿ ಬೈಕ್ ಓಡಿಸುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: Viral Video: ಮಗುವಿನ ತಂದೆಗೆ ಕಪಾಳಮೋಕ್ಷ ಮಾಡಿ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯೆ; ವಿಡಿಯೊ ವೈರಲ್

ಬಿಡುಗಡೆಯಾದ ವಿಡಿಯೊ ದೃಶ್ಯಾವಳಿಗಳಲ್ಲಿ, ಪೊಲೀಸ್ ವಾಹನವು ಶಂಕಿತನ ಮೋಟಾರ್ ಸೈಕಲ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು, ಅವನನ್ನು ನೆಲಕ್ಕೆ ಬೀಳಿಸುವುದನ್ನು ತೋರಿಸಲಾಗಿದೆ. ಸಾರ್ವಜನಿಕವಾಗಿ ಗುರುತಿಸಲಾಗದ ಶಂಕಿತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವನ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ವೈದ್ಯಕೀಯವಾಗಿ ಗುಣಮುಖನಾದ ನಂತರ ಅವನ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದ ನುನೆಜ್ ಅವರ ಕುಟುಂಬವನ್ನು ಬೆಂಬಲಿಸುವುದು ಮತ್ತು ಆರೋಪಿಯ ಮೇಲೆ ಕಠಿಣ ಶಿಕ್ಷೆ ವಿಧಿಸುವುದು ನಮ್ಮ ಗುರಿ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾವು ಸಹೋದ್ಯೋಗಿಯನ್ನು ಮಾತ್ರವಲ್ಲದೆ ಸ್ನೇಹಿತ, ಪತಿ ಮತ್ತು ತಂದೆಯನ್ನು ಕಳೆದುಕೊಂಡಿದ್ದೇವೆ ಎಂದು ಅವರು ಬೇಸರ ಹೊರಹಾಕಿದರು.