ವೃದ್ಧನ ಬೆನ್ನೇರಿ ಹಳ್ಳ ದಾಟಿದ ಕಂದಾಯ ಇಲಾಖೆ ಅಧಿಕಾರಿ: ವಿಡಿಯೊ ವೈರಲ್ ಬೆನ್ನಲ್ಲೇ ಅಮಾನತು
Revenue Department Official Suspended: ಕರ್ತವ್ಯದ ವೇಳೆ ವೃದ್ಧನೊಬ್ಬನ ಬೆನ್ನಿನ ಮೇಲೆ ಕುಳಿತು ನೀರು ತುಂಬಿದ್ದ ಹಳ್ಳವನ್ನು ದಾಟಿದ ಮಧ್ಯಪ್ರದೇಶದ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಮಾತಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವೃದ್ಧನ ಬೆನ್ನೇರಿ ಹಳ್ಳ ದಾಟಿದ ಕಂದಾಯ ಇಲಾಖೆ ಅಧಿಕಾರಿ -
ಇಂದೋರ್, ಸೆ.10: ಕರ್ತವ್ಯದ ವೇಳೆ ವೃದ್ಧನೊಬ್ಬನ ಬೆನ್ನಿನ ಮೇಲೆ ಕುಳಿತು ನೀರು ತುಂಬಿದ್ದ ಹಳ್ಳವನ್ನು ದಾಟಿದ ಮಧ್ಯಪ್ರದೇಶದ (Madhya Pradesh) ಕಂದಾಯ ಇಲಾಖೆಯ ಅಧಿಕಾರಿಯೊಬ್ಬರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಕ್ಷೇತ್ರ ಭೇಟಿಯ ಸಮಯದಲ್ಲಿ ಅಧಿಕಾರಿಯು, ನೀರು ತುಂಬಿದ ಹಳ್ಳವನ್ನು ದಾಟಲು ವೃದ್ಧ ವ್ಯಕ್ತಿಯ ಹೆಗಲೇರಿದ್ದಾರೆ. ಈ ಅಮಾನವೀಯ ಮತ್ತು ಬೇಜವಾಬ್ದಾರಿತನದ ಘಟನೆಯ ವಿಡಿಯೊ (viral video) ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಮಾತಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಕಂದಾಯ ಅಧಿಕಾರಿ ನಿಲೇಶ್ ನಾಮದೇವ್ ಅವರು, ವನ್ಯಜೀವಿಗಳಿಂದ ಹಾನಿಗೊಳಗಾಗಿದ್ದ ಬೆಳೆ ಮತ್ತು ಮನೆಗಳ ಸಮೀಕ್ಷೆ ನಡೆಸಲು ಲಲ್ವಾ ಕೇವತ್ ಎಂಬ 65 ವರ್ಷದ ವೃದ್ಧ ವಾಸ ಇರುವ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ವೃದ್ಧನ ಮನೆಗೆ ಹೋಗುವ ಮಾರ್ಗ ಮಧ್ಯೆ ಹಳ್ಳ ತುಂಬಿ ಹರಿಯುತ್ತಿತ್ತು.
ತಮ್ಮ ಕಾಲಿನ ಬೂಟುಗಳು ಒದ್ದೆಯಾಗಬಾರದು ಎಂಬ ಕಾರಣಕ್ಕೆ ಅಧಿಕಾರಿ ನಿಲೇಶ್, ವೃದ್ಧ ಲಲ್ವಾ ಕೇವತ್ ಅವರಿಗೆ ತನ್ನನ್ನು ದಡ ದಾಟಿಸುವಂತೆ ಆಜ್ಞೆ ಮಾಡಿದ್ದಾರೆ. ಜನರಿಗೆ ನೆರವಾಗಬೇಕಾದ ಅಧಿಕಾರಿಯನ್ನು ವೃದ್ಧ ಹೊತ್ತೊಯ್ಯಬೇಕಾಯಿತು, ತನ್ನನ್ನು ಆಚೆ ದಡಕ್ಕೆ ಹೊತ್ತೊಯ್ದರೆ ಮಾತ್ರ ಸಮೀಕ್ಷೆ ಮಾಡುತ್ತೇನೆ ಎಂದು ಅಧಿಕಾರಿ ದರ್ಪ ತೋರಿದ್ದಾರೆ. ಅಸಹಾಯಕರಾದ ವೃದ್ಧ ವಿಧಿಯಿಲ್ಲದೆ ಅಧಿಕಾರಿಯನ್ನು ತಮ್ಮ ಬೆನ್ನಿನ ಮೇಲೆ ಕೂರಿಸಿಕೊಂಡು ಹಳ್ಳವನ್ನು ದಾಟಿಸಿದ್ದಾರೆ.
ಇಲ್ಲಿದೆ ವಿಡಿಯೊ:
"अफ़सरशाही का नया नमूना" इन जनाब के जूते गंदे ना हो जाए इसी डर से एक बुजुर्ग के पीठ पर सवार हो गए।
— Nigar Parveen (@NigarNawab) September 9, 2026
शर्म इन जैसे लोगों को क्यों नहीं आती !#Madhyapradesh pic.twitter.com/1tDDZDISX7
ʼʼಭಾರತದಲ್ಲಿ ನನ್ನನ್ನು ಓಡಾಡುವ ಎಟಿಎಂನಂತೆ ನೋಡುತ್ತಿದ್ದರುʼʼ: ವಿದೇಶಿ ಪ್ರವಾಸಿ ಹೀಗಂದಿದ್ದೇಕೆ?
ಈ ದೃಶ್ಯವನ್ನು ಸ್ಥಳೀಯ ನಿವಾಸಿಯೊಬ್ಬರು ರಹಸ್ಯವಾಗಿ ಚಿತ್ರೀಕರಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಅಧಿಕಾರಿಯ ಈ ನಡವಳಿಕೆಯನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ ನಂತರ, ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರಿಯಾ ಪಾಠಕ್ ಅವರು ಘಟನೆಯ ತನಿಖೆಗೆ ಆದೇಶಿಸಿದರು. ಅಲ್ಲದೆ ದರ್ಪ ತೋರಿದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಭಾರಿ ಮಳೆಗೆ ತತ್ತರಿಸಿದ ದೆಹಲಿ;
ಭಾರೀ ಮಳೆಯಿಂದಾಗಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರಗಳ ಬಳಿ ನೀರು ನಿಂತು ಪ್ರಯಾಣಿಕರು ಪರದಾಡುವಂತಾಗಿದೆ. ವಿಮಾನ ನಿಲ್ದಾಣದ ಗೇಟ್‌ಗಳ ಬಳಿ ಸಂಗ್ರಹವಾಗಿದ್ದ ನೀರಿನ ಮೇಲೆ ಬೆಳಕು ಪ್ರತಿಫಲಿಸಿ ನೆಲವು ಮಿನುಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಭಾರಿ ಮಳೆಯ ಪರಿಣಾಮ ವಿಮಾನ ಸಂಚಾರದ ಮೇಲೂ ಪರಿಣಾಮ ಬೀರಿದ್ದು, ದೆಹಲಿಗೆ ಬರಬೇಕಿದ್ದ ಐದು ವಿಮಾನಗಳನ್ನು ಲಖನೌ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಭಾರೀ ಪ್ರಮಾಣದ ನೀರು ನಿಂತಿರುವುದರಿಂದ ಪ್ರಯಾಣಿಕರು ತಮ್ಮ ಪ್ಯಾಂಟ್‌ಗಳನ್ನು ಮೇಲಕ್ಕೆ ಸುತ್ತಿಕೊಂಡು, ನೀರಿನಲ್ಲೇ ಲಗೇಜ್ ಟ್ರಾಲಿಗಳನ್ನು ತಳ್ಳಿಕೊಂಡು ಪ್ರವೇಶ ದ್ವಾರಗಳತ್ತ ಸಾಗುತ್ತಿರುವ ದೃಶ್ಯಗಳು ಕಂಡುಬಂದಿವೆ.